ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹೊಸ ಮಾದರಿಯ ಕೊರೊನಾವೈರಸ್ ಪತ್ತೆ

|
Google Oneindia Kannada News

ಪುಣೆ, ಜೂನ್ 7: ಭಾರತದಲ್ಲಿ ಕೊರನಾವೈರಸ್‌ನ ಎರಡನೇ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೊಸ ಮಾದರಿಯ B.1.1.28.2 ಕೊರೊನಾವೈರಸ್‌ಅನ್ನು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಲಾಗಿದೆ.

ಭಾರತದಲ್ಲಿ ಮೊದಲ ಅಲೆಯಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ಎರಡನೇ ಅಲೆ ಆರಂಭವಾಗಿ ಭಾರೀ ದೊಡ್ಡ ಆಘಾತವನ್ನು ನೀಡಿದೆ. ಭಾರತದಲ್ಲಿ ಈವರೆಗೆ ಮೂರುವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ. ಈ ಮಧ್ಯೆ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಮತ್ತೊಂದು ರೂಪದಲ್ಲಿ ಈ ವೈರಸ್ ಹಾವಳಿಯಿಡುವ ಆತಂಕ ಸಾಮಾನ್ಯರಲ್ಲಿ ಕಾಡುತ್ತಿದೆ. ಈ ಮಧ್ಯೆ ಹೊಸ ಮಾದರಿಯ ವೈರಸ್ ಪತ್ತೆಯಾಗಿರುವುದು ಚಿಂತೆ ಹೆಚ್ಚಿಸಿದೆ.

NIV Pune discovered a new coronavirus varient in India

ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ ಮಾಡಲಾಗಿದೆ.

ಹೆಚ್ಚಿನ ಸಾಮರ್ಥ್ಯ ಹೊಂದಿದೆ ರೂಪಾಂತರಿ

ಹೆಚ್ಚಿನ ಸಾಮರ್ಥ್ಯ ಹೊಂದಿದೆ ರೂಪಾಂತರಿ

ಹೊಸ ರೂಪಾಂತರಿ ದೇಹದ ತೂಕದ ಇಳಿಕೆಗೆ ಕಾರಣವಾಗಿದ್ದು ಶ್ವಾಸನಾಳದಲ್ಲಿ ಮತ್ತು ಶ್ವಾಸಕೋಶಕ್ಕೆ ಘಾಸಿಗೊಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. D614G ರೂಪಾಂತರಿಗಿಂತ ಹೆಚ್ಚಿನ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

'ಡೆಲ್ಟಾ'ದಷ್ಟೇ ಅಪಾಯಕಾರಿ

'ಡೆಲ್ಟಾ'ದಷ್ಟೇ ಅಪಾಯಕಾರಿ

ಪರೀಕ್ಷೆಗಳ ಆಧಾರದಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ವೈರಸ್ ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿಯಷ್ಟೇ ತೀವ್ರತೆಯನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ಮೊದಲಿಗೆ ಪತ್ತೆಯಾದ 'ಆಲ್ಫಾ' ರೂಪಾಂತರಿಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಭಾರತದಲ್ಲಿ ಡೆಲ್ಟಾ ಮಾದರಿಯ ಅಬ್ಬರ

ಭಾರತದಲ್ಲಿ ಡೆಲ್ಟಾ ಮಾದರಿಯ ಅಬ್ಬರ

ಸದ್ಯ ಭಾರತದಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ದೊಡ್ಡ ಪ್ರಮಾಣದಲ್ಲಿ ವೈರಸ್‌ನ ಹರಡುವಿಕೆಗೆ ಕಾರಣವಾಗಿದೆ. ಉಳಿದ ಎಲ್ಲಾ ರೂಪಾಂತರಿಗಿಂತ ಇದು ಹೆಚ್ಚಿನ ಹಾನಿಯುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

Recommended Video

ಕೊರೊನಾ ವಿರುದ್ಧ ಹೋರಾಡಿ ಮಗುವಿಗೆ ಜನ್ಮಕೊಟ್ಟ ಗರ್ಭಿಣಿಯರು | Oneindia Kannada
ಯುಕೆನಲ್ಲೂ 'ಡೆಲ್ಟಾ' ಅಟ್ಟಹಾಸ

ಯುಕೆನಲ್ಲೂ 'ಡೆಲ್ಟಾ' ಅಟ್ಟಹಾಸ

ಮೊದಲಿಗೆ ಭಾರತದಲ್ಲಿ ಪತ್ತೆಯಾದ ಈ ಡೆಲ್ಟಾ ರೂಪಾಂತರಿ ವೈರಸ್ ಈಗ ವಿಶ್ವಾದ್ಯಂತ 60 ದೇಶಗಳಲ್ಲಿ ಪತ್ತೆಯಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಡೆಲ್ಟಾ ಮಾದರಿ ಅಟ್ಟಹಾಸವನ್ನು ಮೆರೆಯುತ್ತಿದ್ದು ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಈಗಾಗಲೇ ಕೊರೊನಾವೈರಸ್‌ನ ದಾಳಿಯಿಂದ ನಲುಗಿದ ಅನೇಕ ರಾಷ್ಟ್ರಗಳಿಗೆ 'ಡೆಲ್ಟಾ' ರೂಪಾಂತರಿಯ ಆತಂಕ ಹೆಚ್ಚಾಗಿದೆ. ಈ ಮಧ್ಯೆ ಭಾರತದಲ್ಲಿ ಮತ್ತೊಂದು ಮಾದರಿಯ ವೈರಸ್ ಪತ್ತೆಯಾಗಿರುವುದು ಚಿಂತೆಗೆ ಕಾರಣವಾಗಿದೆ.

English summary
NIV Pune has discovered a new coronavirus varient B.1.1.28.2 in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X