• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಗೆ ಪರ್ಯಾಯ ನಾಯಕನಾಗುವ ಆಸೆ ಇಲ್ಲ: ಗಡ್ಕರಿ ಸ್ಪಷ್ಟನೆ

|

ನವದೆಹಲಿ, ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ನಾಯಕತ್ವವನ್ನು ಕಂಡುಕೊಳ್ಳುವ '220 ಕ್ಲಬ್‌' ಬಿಜೆಪಿಯಲ್ಲಿ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೀಟುಗಳನ್ನು ತಗ್ಗುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಲಿದೆ. ಇದರಿಂದ ಮೋದಿ ಅವರಿಗೆ ಪರ್ಯಾಯವಾಗಿ ನಾಯಕತ್ವ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಕೇವಲ ಊಹಾಪೋಹ ಎಂದು ಗಡ್ಕರಿ ಪ್ರತಿಕ್ರಿಯಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು, 'ಅಂತಹ ಯಾವುದೇ ಸ್ಥಿತಿ ಇಲ್ಲ. ಬರೆಯಲು ಬಯಸುವವರು ಅ ರೀತಿ ಸುದ್ದಿ ಬರೆಯುತ್ತಾರೆ' ಎಂದರು.

ಪಿಎಂ ಕನಸಿಲ್ಲ, ಆರ್‌ಎಸ್‌ಎಸ್‌ಗೆ ಹಾಗೊಂದು ಯೋಜನೆಯೂ ಇಲ್ಲ: ಗಡ್ಕರಿ

ಮಿತ್ರಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವ ಮತ್ತು ಆರೆಸ್ಸೆಸ್‌ಗೆ ಹತ್ತಿರವಿರುವ ನಾಯಕನನ್ನು ಪ್ರಧಾನಿ ಮಾಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ನಿತಿನ್ ಗಡ್ಕರಿ ಅವರನ್ನು ಆಯ್ಕೆ ಮಾಡಲಾಗಿದೆ. ಲೋಕಸಭೆಯಲ್ಲಿ ಬಿಜೆಪಿಯ ಸೀಟುಗಳು ಕಡಿಮೆಯಾಗಿ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವಂತಾಗಬೇಕು. ಆಗ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ನಿತಿನ್ ಗಡ್ಕರಿ ಪ್ರಧಾನಿ ಆಗಲಿದ್ದಾರೆ ಎಂಬ ವಿಚಾರ ಚರ್ಚೆಯಲ್ಲಿದೆ. ಇದನ್ನು ಗಡ್ಕರಿ ನಿರಾಕರಿಸಿದ್ದಾರೆ.

ಅಂತಹ ನಿರೀಕ್ಷೆ, ಲೆಕ್ಕಾಚಾರಗಳಿಲ್ಲ

ಅಂತಹ ನಿರೀಕ್ಷೆ, ಲೆಕ್ಕಾಚಾರಗಳಿಲ್ಲ

'ನಾನು ಅಂತಹ ಲೆಕ್ಕಾಚಾರಗಳನ್ನು ಹಾಕುವುದಿಲ್ಲ ಮತ್ತು ಅಂತಹ ನಿರೀಕ್ಷೆಗಳೂ ಇಲ್ಲ. ನಾನು ಪಕ್ಷದ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾಡಿದ ಕೆಲಸ ಸಂಪೂರ್ಣ ಬಹುಮತದ ಫಲಿತಾಂಶ ನೀಡಲಿದೆ ಎಂಬುದು ನನಗೆ ಖಚಿತವಿದೆ. ಹೀಗಾಗಿ ಅಂತಹ ಯಾವುದೇ ಸ್ಥಿತಿ ಉದ್ಭವಿಸುವುದಿಲ್ಲ' ಎಂದರು.

ಗಡ್ಕರಿ ಬಾಣ ಮೋದಿಯೆಡೆಗೆ... ಕಾಂಗ್ರೆಸ್ ಗೆ ಖುಷಿಯೋ ಖುಷಿ!

ಪುರಾವೆ ಕೇಳುವುದು ಅಧಿಕಪ್ರಸಂಗಿತನ

ಪುರಾವೆ ಕೇಳುವುದು ಅಧಿಕಪ್ರಸಂಗಿತನ

ವೈಮಾನಿಕ ದಾಳಿ ಮತ್ತು ರಾಮಮಂದಿರ ನಿರ್ಮಾಣದ ವಿಚಾರಗಳನ್ನು ರಾಜಕೀಯಗೊಳಿಸುತ್ತಿರುವುದು ದುರದೃಷ್ಟಕರ. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪುರಾವೆ ಕೇಳುವುದು ಅಧಿಕಪ್ರಸಂಗಿತನ. ಜನರು ವಿರೋಧಪಕ್ಷದವರತ್ತ ನಗುತ್ತಿದ್ದಾರೆ. ಸೇನಾಪಡೆಗಳು ನಡೆಸಿದ್ದಕ್ಕೆ ಮತ್ತು ಅವರ ಉದ್ದೇಶಗಳಿಗೆ ಸಾಕ್ಷ್ಯಗಳನ್ನು ಕೇಳುತ್ತೀರಾ? ಎಂದು ಹೇಳಿದರು.

ಮೋದಿಯ ತೆಗಳಿ ನಿತಿನ್ ಗಡ್ಕರಿಯ ಹೊಗಳಿದ ರಾಹುಲ್: ಹೊಸ ತಂತ್ರ?

ರಾಹುಲ್ ಕೀಳು ಮಟ್ಟದ ಭಾಷೆ

ರಾಹುಲ್ ಕೀಳು ಮಟ್ಟದ ಭಾಷೆ

ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಸಿದ ಭಾಷೆ ಹೀನಾಯವಾದದ್ದು. ಇದು ರಾಜಕೀಯದ ಅತ್ಯಂತ ಕೆಳಮಟ್ಟದ ಸೂಚಕ. ಜನರು ಪ್ರಧಾನಿ ಸ್ಥಾನವನ್ನು ಗೌರವಿಸಬೇಕು. ಅವಾಚ್ಯ ಶಬ್ದಗಳನ್ನು ಬಳಸುವುದು ಸರಿಯಲ್ಲ. ಕಾಂಗ್ರೆಸ್ ಮಾಡುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿದರು.

ಅಭಿವೃದ್ಧಿ ಕಾರ್ಯಗಳೇ ಮಾತಾಡುತ್ತವೆ

ಅಭಿವೃದ್ಧಿ ಕಾರ್ಯಗಳೇ ಮಾತಾಡುತ್ತವೆ

ಮೋದಿ ಸರ್ಕಾರದ ಅಭಿವೃದ್ಧಿ ದಾಖಲೆಗಳು ಮತದಾರರು ಬಿಜೆಪಿಯನ್ನು ಬೆಂಬಲಿಸುವಂತೆ ಪ್ರೇರೇಪಿಸುತ್ತದೆ ಮತ್ತು ನಮಗೆ ಎರಡನೆಯ ಅವಧಿಯ ಅವಕಾಶ ನೀಡಲಿದ್ದಾರೆ. ತಳಮಟ್ಟದಲ್ಲಿ ಆದ ಬದಲಾವಣೆ ಜನರ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ ಮತ್ತು ಒಳಿತನ್ನು ಉಂಟುಮಾಡಿದೆ. ಸರ್ಕಾರದ ದಾಖಲೆಗಳು ಅದರ ಪೂರ್ವಾಧಿಕಾರಿ ಸರ್ಕಾರದೊಂದಿಗೆ ಹೋಲಿಸಿದರೆ ಅದು ತಾನಾಗಿಯೇ ಮಾತನಾಡುತ್ತದೆ ಎಂದರು.

ಅಯೋಧ್ಯಾ- ಸೀಮಿತ ಆಯ್ಕೆಗಳು

ಅಯೋಧ್ಯಾ- ಸೀಮಿತ ಆಯ್ಕೆಗಳು

ಅಯೋಧ್ಯಾದಲ್ಲಿನ ರಾಮ ಮಂದಿರ ವಿಚಾರದಲ್ಲಿ ಸರ್ಕಾರದ ಮುಂದಿರುವ ಆಯ್ಕೆ ಸೀಮಿತವಾದದ್ದು. ಅಲ್ಲಿ ಮಾತುಕತೆ, ನ್ಯಾಯಾಲಯದ ತೀರ್ಪು ಅಥವಾ ಕಾನೂನು ಆಯ್ಕೆಗಳಷ್ಟೇ ಇರುವುದು. ಇವುಗಳಲ್ಲಿ ಕೋರ್ಟ್ ಮೂಲಕ ಸಂಧಾನ ಮಾತುಕತೆಯ ಕಾರ್ಯ ಪ್ರಗತಿಯಲ್ಲಿದೆ. ಮುಸ್ಲಿಮರು ಒಂದು ನಿರ್ಣಯಕ್ಕೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಪಂಚಕೋಸಿ ಪರಿಶ್ರಮದ ಹೊರಭಾಗದಲ್ಲಿ ಮಸೀದಿಯನ್ನು ನಿರ್ಮಿಸಬಹುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister Nitin Gadkari denies alternative leadership for Prime Minister Narendra Modi and said this was mere speculation in Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more