• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಾಸಗಿ ಕಂಪೆನಿಗಳಿಗೆ ವಾಹನ ದತ್ತಾಂಶ ನೀಡಿ 100 ಕೋಟಿ ರೂ ಸಂಗ್ರಹ: ನಿತಿನ್ ಗಡ್ಕರಿ

|

ನವದೆಹಲಿ, ಫೆಬ್ರವರಿ 12: ವಾಹನಗಳ ದತ್ತಾಂಶಗಳನ್ನು ದಾಖಲಿಸುವ ಸರ್ಕಾರದ ಪ್ಲಾಟ್‌ಫಾರ್ಮ್‌ಗಳಾದ ವಾಹನ್ ಮತ್ತು ಸಾರಥಿ ಡೇಟಾಬೇಸ್‌ಗಳಿಗೆ ಖಾಸಗಿ ಕಂಪೆನಿಗಳಿಗೆ ಪ್ರವೇಶ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರವು 100 ಕೋಟಿ ರೂ ಸಂಪಾದಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಸತ್‌ಗೆ ಗುರುವಾರ ತಿಳಿಸಿದ್ದಾರೆ.

ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿರುವ ಗಡ್ಕರಿ, ವಾಹನ್ ಮತ್ತು ಸಾರಥಿ ಡೇಟಾಬೇಸ್‌ಗೆ ಪ್ರವೇಶಾವಕಾಶ ಕಲ್ಪಿಸುವ ಮೂಲಕ ಸರ್ಕಾರವು 1,11,38,757 ರೂಪಾಯಿ ಆದಾಯ ಸಂಗ್ರಹಿಸಿದೆ ಎಂದು ಹೇಳಿದ್ದಾರೆ. ದತ್ತಾಂಶಗಳನ್ನು ಗೃಹ ಸಚಿವಾಲಯ, ಕಾನೂನು ಜಾರಿ ಸಂಸ್ಥೆಗಳು ಹಾಗೂ ವಿಮೆ, ಆಟೊಮೊಬೈಲ್ ಮತ್ತು ಸರಕು ಕಂಪೆನಿಗಳೊಂದಿಗೆ ಹಂಚಿಕೊಳ್ಳಲಾಗಿದೆ.

'ಇದು ಅಕ್ಷಮ್ಯ': ವಾಹನ ತಯಾರಕರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ'ಇದು ಅಕ್ಷಮ್ಯ': ವಾಹನ ತಯಾರಕರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯೂ, ಬಜಾಜ್ ಅಲೈಯನ್ಸ್ ಜನರಲ್ ಇನ್ಶೂರೆನ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಎಲ್‌&ಟಿ ಫೈನಾನ್ಶಿಯಲ್ ಸರ್ವಿಸಸ್ ಹಾಗೂ ಇತರೆ ಕಂಪೆನಿಗಳಿಗೆ ಎರಡೂ ವೆಬ್‌ಸೈಟ್‌ಗಳಲ್ಲಿನ ದತ್ತಾಂಶಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ದೇಶದಲ್ಲಿ ನೋಂದಣಿಯಾದ ವಾಹನಗಳು ಮತ್ತು ಚಾಲನಾ ಪರವಾನಗಿ ವಿವರಗಳನ್ನು ಅಳವಡಿಸಲು ಇರುವ ವಾಹನ್ ಹಾಗೂ ಸಾರಥಿ ಡೇಟಾಬೇಸ್‌ಗಳಲ್ಲಿನ ಬೃಹತ್ ದತ್ತಾಂಶಗಳನ್ನು ಹಂಚಿಕೊಳ್ಳುವ ನೀತಿಯನ್ನು ಸಾರಿಗೆ ಸಚಿವಾಲಯ 2019ರಲ್ಲಿ ರದ್ದುಗೊಳಿಸಿತ್ತು. ವೈಯಕ್ತಿಕ ವಿವರಗಳು ಮತ್ತು ಖಾಸಗಿತನದ ದುರ್ಬಳಕೆಯ ಸಾಧ್ಯತೆಯ ಕಾರಣ 2020ರ ಜೂನ್‌ನಲ್ಲಿ ಸಚಿವಾಲಯವು ಹಳೆಯ ನೀತಿಯನ್ನು ತೆಗೆದುಹಾಕಿತ್ತು.

English summary
Union Minister Nitin Gadkari on Parliament said the government has earned over Rs 100 crore by sharing vechicle data with private companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X