ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ ಇಲ್ಲ: ನೀತಿ ಆಯೋಗ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಪ್ರಸ್ತುತ ಸ್ಥಿತಿಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ ನಡೆಸಿಲ್ಲ ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ.

ಈ ಕುರಿತು ಸರ್ಕಾರದ ಮುಖ್ಯ ಕೋವಿಡ್ 19 ಸಲಹೆಗಾರ ವಿಕೆ ಪೌಲ್ ಮಾತನಾಡಿ, ಭಾರತವು 100 ಕೋಟಿ ಲಸಿಕೆಯನ್ನು ನೀಡುವ ಗುರಿಯತ್ತ ಸಾಗುತ್ತಿದೆ. ಲಸಿಕೆ ಉತ್ಪಾದನೆಯೂ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ, ಈ ಕಾರಣದಿಂದಾಗಿ ಬೂಸ್ಟರ್ ಡೋಸ್ ನೀಡುವ ಕುರಿತು ಯಾವುದೇ ಆಲೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆ

ಈಗಾಗಲೇ ಜಾಗತಿಕವಾಗಿ ಇಸ್ರೇಲ್ , ಇಟಲಿ, ಫ್ರಾನ್ಸ್ ಹಾಗೂ ಜರ್ಮನಿ ಸಹಿತ 15ಕ್ಕೂ ಹೆಚ್ಚು ರಾಷ್ಟ್ರಗಳು ಹಿರಿಯ ನಾಗರಿಕರಿಗೆ ಕೊರೊನಾ ತಡೆಗೆ ಮೂರನೇ ಡೋಸ್ ಲಸಿಕೆ ನೀಡಲು ಆರಂಭಿಸಿದೆ.

NITI Ayog Says No Plans For Covid Booster Dose Currently

ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಪ್ರಕಾರ, ಮೂರನೇ ಡೋಸ್ ಲಸಿಕೆ ನೀಡುವ ಕುರಿತಂತೆ ಯಾವುದೇ ಸ್ಪಷ್ಟ ಅಧಿಸೂಚನೆ ಲಭ್ಯವಾಗಿಲ್ಲ. ಹೀಗಾಗಿ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಕುರಿತು ಯೋಜನೆ ರೂಪಿಸಿಲ್ಲ ಎಂದು ತಿಳಿಸಿದ್ದಾರೆ.

ಈಗ ದೇಶಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿದ್ದು, ಇಲ್ಲಿ ಬಳಕೆಗೆ ಲಭ್ಯವಾದ ಬಳಿಕ ಮುಂದಿನ ವರ್ಷದಿಂದ ರಫ್ತು ಮಾಡುವ ಗುರಿ ಇದೆ ಎಂದು ತಿಳಿಸಿದ್ದಾರೆ.

ಕೋವಿಡ್ -19 ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ವೈಜ್ಞಾನಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಯಾವುದೇ ಚಿಂತನೆ ನಡೆಸಿಲ್ಲ. ಪ್ರಸ್ತುತ 2 ಡೋಸ್ ಲಸಿಕೆ ನೀಡುವುದೇ ನಮ್ಮ ಮುಂದಿರುವ ಆದ್ಯತೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್ ಕೂಡ ತಿಳಿಸಿದ್ದರು.

ಎರಡೂ ಡೋಸ್‌ಗಳನ್ನು ನೀಡುವುದು ಅತ್ಯಗತ್ಯ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಈ ಸಮಯದಲ್ಲಿ ಬೂಸ್ಟರ್ ಡೋಸ್ ನೀಡುವುದು ಕೇಂದ್ರದ ವಿಷಯವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇನೆ ಎಂದು ಭಾರ್ಗವ್ ಹೇಳಿದ್ದರು.

ಪ್ರತಿಕಾಯಗಳ ಮಟ್ಟವನ್ನು ಅಳೆಯಬಾರದು ಎಂದು ಹಲವಾರು ಏಜೆನ್ಸಿಗಳು ಶಿಫಾರಸು ಮಾಡಿವೆ. ಆದರೆ ಮುಖ್ಯವಾದ ತಿಳುವಳಿಕೆಯೆಂದರೆ ಎರಡೂ ಡೋಸ್‌ಗಳಿಗೆ ಸಂಪೂರ್ಣ ವ್ಯಾಕ್ಸಿನೇಷನ್ ಮಾಡುವುದು ಅತ್ಯಗತ್ಯ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೂಡ ತಿಳಿಸಿದ್ದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಭಾರತದ ವಯಸ್ಕ ಜನಸಂಖ್ಯೆಯ ಶೇ. 20ರಷ್ಟು ಜನರು ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದಿದ್ದಾರೆ. ಇನ್ನು ಶೇ. 62ರಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಅಲ್ಲದೆ, 99 ಪ್ರತಿಶತ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದಾರೆ. 82 ಪ್ರತಿಶತ ಅರ್ಹ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ

ಕೊರೊನಾ ವೈರಸ್‌ನ ಹೆಚ್ಚುತ್ತಿರುವ ಭೀತಿಯ ನಡುವೆ, ಅನೇಕ ದೇಶಗಳು ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ಅನ್ನು ಅನುಮೋದಿಸಲು ಆರಂಭಿಸಿವೆ. ಭಾರತದಲ್ಲಿ ಇದುವರೆಗೆ ಈ ವಿಷಯದಲ್ಲಿ ಯಾವುದೇ ಘೋಷಣೆಯನ್ನು ಮಾಡಿಲ್ಲ. ಆದಾಗ್ಯೂ, ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಅಧ್ಯಕ್ಷ ಸೈರಸ್ ಪೂನವಲ್ಲ , ಕೋವಿಡ್ -19 ಲಸಿಕೆಯ ಮೂರನೇ ಡೋಸ್ ಅನ್ನು 6 ತಿಂಗಳ ನಂತರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಕೋವಿಶೀಲ್ಡ್‌ ಲಸಿಕೆಯ 2 ಡೋಸ್‌ಗಳ ನಡುವಿನ ಸೂಕ್ತ ಮಧ್ಯಂತರವು 2 ತಿಂಗಳುಗಳು ಎಂದು ಹೇಳಲಾಗಿದೆ.

ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಸ್ವಲ್ಪ ಸಮಯದ ನಂತರ ಕೋವಿಡ್‌ಶೀಲ್ಡ್‌ನ ಪ್ರತಿಕಾಯಗಳು ಕೋವಿಡ್ ವಿರುದ್ಧ ಕಡಿಮೆಯಾಗುತ್ತವೆ ಎಂದು ಹೇಳಲಾಗಿದೆ. ಈ ಬಗ್ಗೆ ಸೈರಸ್ ಪೂನಾವಾಲಾ ಅವರನ್ನು ಕೇಳಿದಾಗ, 'ಇದು ನಿಜ, ಆದರೆ ನೆನಪಿನ ಕೋಶಗಳು ಇರುತ್ತವೆ' ಎಂದು ಹೇಳಿದರು.

English summary
India currently has no plans to give booster doses as some nations have begun doing, NITI Aayog member V K Paul said as the country nears the milestone of one billion vaccine injections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X