ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಪರಿಣಾಮ ಇಷ್ಟೇ ಅಲ್ಲ, ಮುಂದಿದೆ ಹೊಸ ವರಸೆ: ನೀತಿ ಆಯೋಗ

|
Google Oneindia Kannada News

ನವದೆಹಲಿ, ಆಗಸ್ಟ್ 18: ನಾವಲ್ ಕೊರೊನಾ ವೈರಸ್‌ನ ಹೊಸ ಆಯಾಮವೊಂದು ಮುಂಬರುವ ದಿನಗಳಲ್ಲಿ ಎದುರಾಗಲಿದೆ ಎಂದು ನೀತಿ ಆಯೋಗದ ವಿ.ಕೆ. ಪೌಲ್ ಹೇಳಿದ್ದಾರೆ. ಕೆಲವು ಕೋವಿಡ್-19 ರೋಗಿಗಳಲ್ಲಿ ಚೇತರಿಕೆ ಕಂಡು ಬಳಿಕ ಹೊಸ ಲಕ್ಷಣಗಳು ಕಂಡುಬರುವುತ್ತಿರುವುದನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಇದರ ಪರಿಣಾಮ ಕೂಡ ಮುಂದೆ ಎದುರಾಗಬಹುದು ಎಂದೂ ಅವರು ತಿಳಿಸಿದ್ದಾರೆ.

Recommended Video

Samsung ಫೋನು ತಯಾರಿಸುವ ಕಾರ್ಖಾನೆ ಇನ್ಮುಂದೆ ಭಾರತದಲ್ಲಿ | Oneindia Kannada

'ಕೊರೊನಾ ವೈರಸ್‌ ಕಾಯಿಲೆಯ ಹೊಸ ಆಯಾಮವು ಬರುತ್ತಿದೆ. ವೈಜ್ಞಾನಿಕ ಮತ್ತು ಔಷಧೀಯ ವಿಭಾಗಗಳು ಅದನ್ನು ಗಮನಿಸುತ್ತಿವೆ. ಹೀಗಾಗಿ ನಂತರದ ದಿನಗಳಲ್ಲಿಯೂ ಅದರ ಪ್ರಭಾವ ಇರಬಹುದು ಎನ್ನುವುದು ನಮ್ಮ ಅರಿವಿನಲ್ಲಿದೆ. ಆದರೆ ಸುದೀರ್ಘಾವಧಿ ಫಲಿತಾಂಶದ ಇದು ಪ್ರಸ್ತುತ ಅಪಾಯಕಾರಿಯಾಗಿಲ್ಲ' ಎಂದು ಹೇಳಿದ್ದಾರೆ.

ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್

ರೋಗದ ನಿಯಂತ್ರಣ, ಸಾವಿನ ಸಂಖ್ಯೆ ಇಳಿಕೆ ಮತ್ತು ಫಲಿತಾಂಶದ ಸುಧಾರಣೆಗೆ ಪರೀಕ್ಷೆಯೇ ಮುಖ್ಯ ಅಂಶವಾಗಿದೆ ಎಂದು ನೀತಿ ಆಯೋಗದ ಸದಸ್ಯರಾಗಿರುವ (ಆರೋಗ್ಯ) ಡಾ. ವಿ.ಕೆ. ಪೌಲ್ ಮಂಗಳವಾರ ತಿಳಿಸಿದರು. ಮುಂದೆ ಓದಿ...

ಈಗಿರುವ ಚಿಕಿತ್ಸೆಯನ್ನೇ ನೀಡಬೇಕು

ಈಗಿರುವ ಚಿಕಿತ್ಸೆಯನ್ನೇ ನೀಡಬೇಕು

'ನಾವು ಅರ್ಥ ಮಾಡಿಕೊಂಡಿರುವಂತೆ ಈಗ ನಮ್ಮ ಬಳಿ ಇರುವ ಚಿಕಿತ್ಸಾ ಸೌಲಭ್ಯಗಳನ್ನೇ ಬಳಸಿಕೊಳ್ಳಲಾಗುತ್ತದೆ. ಇದರ ಬಗ್ಗೆ ಕಲಿಕೆ ಮುಂದುವರಿಯಲಿದೆ. ಈ ಎಲ್ಲ ಬದಲಾವಣೆಗಳಿಗೆ ಮತ್ತು ಅಗತ್ಯಗಳಿಗೆ ವೈದ್ಯಕೀಯ ವಿಭಾಗ ಸ್ಪಂದಿಸುತ್ತಿದೆ. ನಮಗೆ ಅದು ಹೆಚ್ಚು ಅರ್ಥವಾದಂತೆ ನಾವೂ ಅದರ ಬಗ್ಗೆ ಹೆಚ್ಚು ಹೇಳಲು ಸಾಧ್ಯ' ಎಂದು ಕೋವಿಡ್‌ನ ಹೊಸ ಆಯಾಮದ ಬಗ್ಗೆ ವಿವರಿಸಿದ್ದಾರೆ.

ನಿಯಂತ್ರಣವಿದೆ, ಆದರೆ ನಿರ್ಲಕ್ಷ್ಯ ಬೇಡ

ನಿಯಂತ್ರಣವಿದೆ, ಆದರೆ ನಿರ್ಲಕ್ಷ್ಯ ಬೇಡ

'ಪ್ರತಿ ದಿನ ನಡೆಸುವ ಕೊರೊನಾ ವೈರಸ್ ತಪಾಸಣೆಯ ಸಂಖ್ಯೆ 9 ಲಕ್ಷದವರೆಗೂ ತಲುಪಿದೆ. ಇದು ಗಮನಾರ್ಹ ಬೆಳವಣಿಗೆ' ಎಂದಿರುವ ಅವರು, ಜನರು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಸವಾಲನ್ನು ಇನ್ನೂ ತಹಬದಿಗೆ ತರುವುದು ಸಾಧ್ಯವಾಗಿಲ್ಲ ಎಂದಿದ್ದಾರೆ.

ಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಹೆಚ್ಚು ಮಾರಣಾಂತಿಕವಲ್ಲಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಹೆಚ್ಚು ಮಾರಣಾಂತಿಕವಲ್ಲ

'ಸಾವಿನ ಪ್ರಮಾಣ ಸ್ಥಿರವಾಗಿ ಇಳಿಕೆಯಾಗುತ್ತಿದೆ. ಆದರೆ ಹಾಗೆಂದು ನಿರ್ಲಕ್ಷ್ಯ ವಹಿಸುವುದು ಬೇಡ. ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಂದು ನಮ್ಮ ಹಿಡಿತ ಬಲವಾಗುತ್ತಿದೆ. ಆದರೆ ಸವಾಲು ಕಡಿಮೆಯಾಗಿಲ್ಲ' ಎಂದು ಹೇಳಿದ್ದಾರೆ.

ಮೂರು ಲಸಿಕೆಗಳ ತಯಾರಿ

ಮೂರು ಲಸಿಕೆಗಳ ತಯಾರಿ

ಕೋವಿಡ್‌ಗೆ ಲಸಿಕೆ ತಯಾರಿಸುವಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ದಿನದಂದು ಭರವಸೆ ನೀಡಿದ್ದಾರೆ. ಭಾರತದಲ್ಲಿ ಮೂರು ಬಗೆಯ ಲಸಿಕೆಗಳು ತಯಾರಾಗುತ್ತಿದ್ದು, ಈ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ. ಅವುಗಳಲ್ಲಿ ಒಂದು ಇಂದು ಅಥವಾ ನಾಳೆ ಮೂರನೇ ಹಂತದ ಪ್ರಯೋಗಕ್ಕೆ ಬರಲಿದೆ. ಇನ್ನೆರೆಡು ಲಸಿಕೆಗಳು ಒಂದು ಮತ್ತು ಎರಡನೆಯ ಹಂತದಲ್ಲಿವೆ ಎಂದು ವಿವರಿಸಿದ್ದಾರೆ.

ಲಸಿಕೆ ಬಗ್ಗೆ ಈಗ ಹೇಳಲಾಗದು

ಲಸಿಕೆ ಬಗ್ಗೆ ಈಗ ಹೇಳಲಾಗದು

ಲಸಿಕೆ ಯಾವಾಗ ಸಿಗಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಬೆಳವಣಿಗೆ ಸುಧಾರಣೆ ಕಂಡು ಬಂದಾಗ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಕೊರೊನಾ ವ್ಯಾಕ್ಸಿನ್ ಬಗ್ಗೆ ಪ್ರಸ್ತುತ ಏನನ್ನೂ ಹೇಳಲಾಗುವುದಿಲ್ಲ. ಇದು ವೈಜ್ಞಾನಿಕ ಪ್ರಕ್ರಿಯೆ. ಅದರಲ್ಲಿ ಪ್ರಗತಿ ಕಂಡಂತೆಯೇ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

English summary
A new dimension of the novel coronavirus is coming forward, Niti Aayog member VK Paul said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X