ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀತಿ ಆಯೋಗದ ಆವಿಷ್ಕಾರ ಪಟ್ಟಿ; ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ?

|
Google Oneindia Kannada News

ಬೆಂಗಳೂರು,ಜುಲೈ.22: ಉಪ ರಾಷ್ಟ್ರೀಯ ಮಟ್ಟದಲ್ಲಿ ನಾವೀನ್ಯತೆ ಸಾಮರ್ಥ್ಯಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ನಿರ್ಧರಿಸುವ ನೀತಿ ಆಯೋಗ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್, 2022ರಲ್ಲಿ ದೇಶದ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ.

ಖುಷಿಯ ವಿಚಾರವೆಂದರೆ ಪಟ್ಟಿಯಲ್ಲಿ ಕರ್ನಾಟಕವು ಉನ್ನತ ಶ್ರೇಣಿಯನ್ನು ಪಡೆದುಕೊಂಡಿದೆ. ಇದುವರೆಗಿನ ಸೂಚ್ಯಂಕದ ಎಲ್ಲಾ ಮೂರು ಆವೃತ್ತಿಗಳಲ್ಲಿ ಪ್ರಮುಖ ರಾಜ್ಯಗಳ ವರ್ಗದ ಅಡಿಯಲ್ಲಿ ಕರ್ನಾಟಕ ಈ ಸ್ಥಾನವನ್ನು ಪಡೆದಿದೆ.

NITI ಆಯೋಗ; 'ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2021; ಕರ್ನಾಟಕಕ್ಕೆ ಅಗ್ರಸ್ಥಾನ, ಬೇರೆ ರಾಜ್ಯಗಳ ಪಟ್ಟಿ ನೋಡಿNITI ಆಯೋಗ; 'ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2021; ಕರ್ನಾಟಕಕ್ಕೆ ಅಗ್ರಸ್ಥಾನ, ಬೇರೆ ರಾಜ್ಯಗಳ ಪಟ್ಟಿ ನೋಡಿ

ಗುರುವಾರ ಬಿಡುಗಡೆಯಾದ ಸೂಚ್ಯಂಕದಲ್ಲಿ, ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ವಿಭಾಗದಲ್ಲಿ ಮಣಿಪುರ ಮುನ್ನಡೆ ಸಾಧಿಸಿದರೆ, ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳ ವಿಭಾಗದಲ್ಲಿ ಚಂಡೀಗಢವು ಅಗ್ರಸ್ಥಾನದಲ್ಲಿದೆ.

ಟಾಪ್-10 ರಾಜ್ಯಗಳು: 1. ಕರ್ನಾಟಕ 2. ತೆಲಂಗಾಣ 3. ಹರ್ಯಾಣ 4. ಮಹಾರಾಷ್ಟ್ರ 5. ತಮಿಳುನಾಡು 6. ಪಂಜಾಬ್‌ 7. ಉತ್ತರ ಪ್ರದೇಶ 8. ಕೇರಳ 9. ಆಂಧ್ರ ಪ್ರದೇಶ 10. ಜಾರ್ಖಂಡ್

ಈಶಾನ್ಯ ಭಾಗದ ರಾಜ್ಯಗಳಲ್ಲಿ: 1. ಮಣಿಪುರ 2. ಉತ್ತರಾಖಂಡ 3. ಮೇಘಾಲಯ 4. ಅರುಣಾಚಲ ಪ್ರದೇಶ 5. ಹಿಮಾಚಲ ಪ್ರದೇಶ 6. ಸಿಕ್ಕಿಂ 7. ಮಿಜೋರಾಂ 8. ತ್ರಿಪುರಾ 9. ಅಸ್ಸಾಂ 10. ನಾಗಾಲ್ಯಾಂಡ್. ಕೇಂದ್ರಾಡಳಿತ

ರಾಜ್ಯಗಳ ರ‍್ಯಾಂಕಿಂಗ್‌ನಲ್ಲಿ: 1. ಚಂಡೀಗಢ 2. ದೆಹಲಿ 3. ಅಂಡಮಾನ್ ಮತ್ತು ನಿಕೋಬಾರ್ 4. ಪುದುಚೇರಿ 5. ಗೋವಾ 6. ಜಮ್ಮು ಮತ್ತು ಕಾಶ್ಮೀರ.

ಸರ್ಕಾರದ ಚಿಂತಕರ ವೇದಿಕೆಯ ವರದಿಯು ಆರ್‌&ಡಿ (ಜಿಡಿಇಆರ್‌ಡಿ) ಮೇಲಿನ ಒಟ್ಟು ದೇಶೀಯ ವೆಚ್ಚವನ್ನು ಹೆಚ್ಚಿಸುವುದು, ಆರ್‌&ಡಿಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಉದ್ಯಮದ ಬೇಡಿಕೆ ಮತ್ತು ಅದರ ಶಿಕ್ಷಣ ವ್ಯವಸ್ಥೆಗಳ ಮೂಲಕ ದೇಶದ ಉತ್ಪಾದನಾ ಕ್ರಮಗಳನ್ನು ಅದು ಶಿಫಾರಸು ಮಾಡಿದೆ.

 ಜಿಡಿಇಆರ್‌ಡಿ 0.7% ರಷ್ಟಿದೆ

ಜಿಡಿಇಆರ್‌ಡಿ 0.7% ರಷ್ಟಿದೆ

ಜಿಡಿಇಆರ್‌ಡಿಯಲ್ಲಿ ಕಡಿಮೆ ಖರ್ಚು ಮಾಡುವ ದೇಶಗಳು ದೀರ್ಘಾವಧಿಯಲ್ಲಿ ತಮ್ಮ ಮಾನವ ಬಂಡವಾಳವನ್ನು ಉಳಿಸಿಕೊಳ್ಳಲು ವಿಫಲವಾಗುತ್ತವೆ. ದೇಶದ ನಾವೀನ್ಯತೆಯ ಸಾಮರ್ಥ್ಯವು ಮಾನವ ಬಂಡವಾಳದ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂದು ವರದಿಯು ಹೇಳಿದೆ. ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಭಾರತದ ಜಿಡಿಇಆರ್‌ಡಿ ಸುಮಾರು 0.7% ರಷ್ಟಿದೆ ಎಂದು ಅದು ಹೇಳಿದೆ.

ಏನಿದು ಅಪೊಲೊ 11 ಮೂನ್‌ ಲ್ಯಾಂಡಿಂಗ್, ಚಂದ್ರನ ಮೇಲೆ ಹೆಜ್ಜೆ ಯಾವಾಗ?ಏನಿದು ಅಪೊಲೊ 11 ಮೂನ್‌ ಲ್ಯಾಂಡಿಂಗ್, ಚಂದ್ರನ ಮೇಲೆ ಹೆಜ್ಜೆ ಯಾವಾಗ?

 5 ಟ್ರಿಲಿಯನ್ ಆರ್ಥಿಕತೆ ಗುರಿ

5 ಟ್ರಿಲಿಯನ್ ಆರ್ಥಿಕತೆ ಗುರಿ

ಆದ್ದರಿಂದ ಜಿಡಿಇಆರ್‌ಡಿಗೆ ಗಣನೀಯ ಸುಧಾರಣೆಯ ಅಗತ್ಯವಿದೆ. ಗುರಿಯನ್ನು ಕನಿಷ್ಠ 2% ಆದರೂ ಮುಟ್ಟಬೇಕು. ಇದು ಭಾರತವು 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಪಂಚದಾದ್ಯಂತ ಅದರ ಹೆಜ್ಜೆಗುರುತನ್ನು ಮತ್ತಷ್ಟು ಪ್ರಭಾವಿಸುತ್ತದೆ ಎಂದು ಅದು ಸಲಹೆ ನೀಡಿದೆ.

 ಪ್ರಗತಿ ಹಂತ ಗುರುತಿಸಬೇಕು

ಪ್ರಗತಿ ಹಂತ ಗುರುತಿಸಬೇಕು

ಖಾಸಗಿ ವಲಯವು ಆರ್ & ಡಿಯಲ್ಲಿ ವೇಗವನ್ನು ಪಡೆದುಕೊಳ್ಳುವ ಅಗತ್ಯವಿದೆ. ದಕ್ಷಿಣ ಕೊರಿಯಾ, ಯುಎಸ್ಎ ಮತ್ತು ಜರ್ಮನಿಯಂತಹ ದೇಶಗಳಿಂದ ಉದಾಹರಣೆಗಳನ್ನು ತೆಗೆದುಕೊಂಡರೆ, ಸಾರ್ವಜನಿಕ ವೆಚ್ಚವು ಸ್ವಲ್ಪ ಮಟ್ಟಿಗೆ ಉತ್ಪಾದಕವಾಗಿದೆ ಎಂದು ವರದಿಯು ಹೇಳಿದೆ. ಈ ಬೆಳವಣಿಗೆಯು ಒಂದು ಹಂತವನ್ನು ಮುಟ್ಟಿದ ನಂತರ, ಖಾಸಗಿ ವಲಯದಿಂದ ಹೆಚ್ಚಾಗಿ ಆರ್ & ಡಿಗೆ ಬದಲಾಯಿಸುವುದು ಉತ್ತಮವಾಗಿರುತ್ತದೆ. ಆದ್ದರಿಂದ ಖಾಸಗಿ ವಲಯವು ಸರ್ಕಾರಿ ವಲಯವನ್ನು ಸ್ವಾಧೀನಪಡಿಸಿಕೊಳ್ಳುವ ಆ ಇಳಿಕೆಯ ಹಂತವನ್ನು ಕಂಡುಹಿಡಿಯುವುದು ಭಾರತಕ್ಕೆ ಮುಖ್ಯವಾಗಿದೆ ಎಂದು ಚಿಂತಕರ ವೇದಿಕೆ ಹೇಳಿದೆ.

 ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಸಮಸ್ಯೆ

ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಸಮಸ್ಯೆ

ಮಾನವ ಬಂಡವಾಳದ ಪಟ್ಟಿಯಲ್ಲಿ ದೇಶವು ಉತ್ತಮ ಸಾಧನೆ ಮಾಡಿಲ್ಲ. ಮಾನವ ಬಂಡವಾಳದ ಮೇಲಿನ ವೆಚ್ಚವು ದೇಶದಲ್ಲಿ ಜ್ಞಾನದ ನೆಲೆಯನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಮೇಲಾಗಿ ಉತ್ಪಾದನಾ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ನಾವೀನ್ಯತೆಯು ತಿರುಚಲ್ಪಟ್ಟಿದೆ. ಸವಾಲುಗಳನ್ನು ಜಯಿಸಲು ಮತ್ತು ಉತ್ತಮ ಬಳಕೆಯನ್ನು ಸಾಧ್ಯವಾಗಿಸಲು ಇದು ಅನಿವಾರ್ಯ ಪ್ರಯತ್ನಗಳ ಅಗತ್ಯವಿದೆ ಎಂದು ವೇದಿಕೆ ಹೇಳಿದೆ.

English summary
Niti Aayog's India Innovation Index 2022. Which measures innovation capabilities and ecosystems at the sub-national level, has released a list of states in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X