ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದನಿಗೆ ಜೀವ ಬೆದರಿಕೆ; ಭಾರತಕ್ಕೆ ಹಿಂದಿರುಗಲು ಒತ್ತಾಯ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ದೇಶದಿಂದ ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ತಾನು ಭಾರತಕ್ಕೆ ಹಿಂದಿರುಗದಿರುವುದಕ್ಕೆ ತನಗೆ ಜೀವ ಬೆದರಿಕೆ ಬರುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

ಕೈಲಾಸಕ್ಕೆ ವೀಸಾ ಆಹ್ವಾನ ನೀಡಿದ ಸ್ವಯಂಘೋಷಿತ ದೇವಮಾನವ ನಿತ್ಯಾನಂದಕೈಲಾಸಕ್ಕೆ ವೀಸಾ ಆಹ್ವಾನ ನೀಡಿದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ

ಈ ಕುರಿತು ವಿಡಿಯೋ ಮಾಡಿರುವ ನಿತ್ಯಾನಂದ, ಭಾರತಕ್ಕೆ ತಾನು ಹಿಂದಿರುಗದ್ದಕ್ಕೆ ಜೀವ ಬೆದರಿಕೆ ಬರುತ್ತಿದೆ. ಭಾರತದಲ್ಲಿದ್ದಾಗ ನನ್ನ ವಿರುದ್ಧ ಹಲವರು ಬೆದರಿಕೆ ಹಾಕಿದ್ದರು. ಹತ್ಯೆ ಮಾಡುವ ಹಲವು ಪ್ರಯತ್ನಗಳೂ ನಡೆದಿದ್ದ ಕಾರಣ ಭಾರತವನ್ನು ತೊರೆಯಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಇಷ್ಟಲ್ಲದೇ ತಾನು ಸತ್ತ ನಂತರ ತನ್ನ ಆಸ್ತಿಪಾಸ್ತಿ ಎಲ್ಲವೂ ಭಾರತಕ್ಕೇ ಸೇರುವುದಾಗಿ ತಿಳಿಸಿದ್ದು, ಹಿಂದುತ್ವವನ್ನು ಕಾಪಾಡಲು ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.

Nithyananda Claimed Life Threat For Not Coming Back To India

ಈಚೆಗಷ್ಟೆ ನಿತ್ಯಾನಂದ, ಆಸ್ಟ್ರೇಲಿಯಾದಿಂದ ತನ್ನ ಒಡೆತನದ "ಕೈಲಾಸ" ರಾಷ್ಟ್ರಕ್ಕೆ ವಿಮಾನ ಸೇವೆ ಆರಂಭಿಸಿರುವುದಾಗಿ ತಿಳಿಸಿ, ತನ್ನ ದೇಶಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದರು. ಅತ್ಯಾಚಾರ ಆರೋಪ ಕೇಳಿಬಂದ ನಂತರ ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ ತನ್ನ ಅನುಯಾಯಿಗಳೊಂದಿಗೆ ನೆಲೆಸಿರುವ ನಿತ್ಯಾನಂದ, ಸ್ವಂತ ಬ್ಯಾಂಕ್ ಕೂಡ ಪ್ರಾರಂಭಿಸಿ, ಅದಕ್ಕೆ "ರಿಸರ್ವ್ ಬ್ಯಾಂಕ್ ಆಫ್ ಕೈಲಾಸ" ಎಂಬ ಹೆಸರನ್ನಿಟ್ಟಿದ್ದು ಸುದ್ದಿಯಾಗಿತ್ತು.

ಇದೀಗ ತನಗೆ ಜೀವ ಬೆದರಿಕೆ ಬರುತ್ತಿದೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

English summary
Self-claimed godman Nithyananda released video and claimed assassination threats for not coming back to India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X