ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು: ನಿತ್ಯಾನಂದನ ಕೈಲಾಸಕ್ಕೆ ಭಾರತೀಯರಿಗೆ ಎಂಟ್ರಿ ಇಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 22: ನಿತ್ಯಾನಂದ ಸ್ವಾಮಿಯ ಕೈಲಾಸಕ್ಕೆ ಭಾರತೀಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬ್ರಿಟನ್​, ಅಮೆರಿಕ, ಹಾಂಕ್​ಕಾಂಗ್​ ಮತ್ತು ಸಿಂಗಾಪೂರ ದೇಶಗಳು ತಮ್ಮ ದೇಶದ ಜನರಿಗೆ ಭಾರತ ಪ್ರವಾಸವನ್ನು ಮುಂದೂಡುವಂತೆ ತಿಳಿಸಿದೆ. ಈಗ ಇದರ ಬೆನ್ನಲ್ಲೇ ಈಗ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೂಡ ತನ್ನ ದೇಶ ಕೈಲಾಸಕ್ಕೆ ಭಾರತದ ಭಕ್ತರಿಗೆ ನಿರ್ಬಂಧ ವಿಧಿಸಿದ್ದಾರೆ.

ನಿತ್ಯಾನಂದನಿಗೆ ಜೀವ ಬೆದರಿಕೆ; ಭಾರತಕ್ಕೆ ಹಿಂದಿರುಗಲು ಒತ್ತಾಯನಿತ್ಯಾನಂದನಿಗೆ ಜೀವ ಬೆದರಿಕೆ; ಭಾರತಕ್ಕೆ ಹಿಂದಿರುಗಲು ಒತ್ತಾಯ

ಕಳೆದ ಬಾರಿ ಕೋವಿಡ್​ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಭಾರತ ಎರಡನೇ ಅಲೆ ಕೊರೋನಾದಿಂದ ತತ್ತರಿಸಿದೆ. ಲಸಿಕೆಯ ಲಭ್ಯತೆ ನಡುವೆಯೂ ದೇಶದಲ್ಲಿ ದಾಖಲೆ ಪ್ರಮಾಣದ ಸೋಂಕು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆ ಭಾರತವನ್ನ ಕೆಂಪು ಪಟ್ಟಿಗೆ ಸೇರಿಸಲಾಗಿದೆ.

Nithyananda Bans Visits Of Indians To Kailasa Over Covid-19 Surge

ನಿತ್ಯಾನಂದರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದು, ನಿತ್ಯಾನಂದನ ಕುರಿತು ಮೇಮ್​, ಜೋಕ್​ಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಭಾರತ ಮಾತ್ರವಲ್ಲದೇ ಬ್ರೆಜಿಲ್​, ಯುರೋಪಿಯನ್ ಯೂನಿಯನ್​ ಮತ್ತು​ ಮಲೇಷ್ಯಾ ದೇಶದ ಭಕ್ತರಿಗೂ ಕೂಡ ಪ್ರವೇಶ ನಿರಾಕರಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ ಕೋವಿಡ್​ ಹೆಚ್ಚಳದ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ನಿತ್ಯಾನಂದರ ಕೈಲಾಸದಲ್ಲಿ ಹಣದ ಹರಿವಿಗೆ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ರೂಪದ ಗೂಢ ಹಣ ಚಲಾವಣೆ ಪದ್ಧತಿಗೆ ಅವಕಾಶ ಕೊಡಲಾಗಿದೆ. ಹಿಂದೂ ಧಾರ್ಮಿಕ ಭಕ್ತರು ಕೈಲಾಸದಲ್ಲಿ ಹಣ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆದಾರರಿಗೆ ಆಕರ್ಷಕ ಲಾಭ ಸಿಗುತ್ತದೆ ಎಂದು ಈ ವೆಬ್​ಸೈಟ್ ಹೇಳಿಕೊಂಡಿತು.

ಲೈಂಗಿಕ ದೌರ್ಜನ್ಯದ ಆರೋಪ ಹೊಂದಿರುವ ನಿತ್ಯಾನಂದ ಸ್ವಾಮಿ 2019ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ, ಈಕ್ವೆಡಾರ್​ನಲ್ಲಿ ಕೈಲಾಸ ಎಂಬ ತನ್ನದೇ ಆದ ದೇಶ ನಿರ್ಮಿಸಿದ್ದ, ಕಳೆದ ವರ್ಷ ಆಶ್ರಮದ ವೆಬ್​ಸೈಟ್​ ಬಿಡುಗಡೆ ಮಾಡಲಾಗಿತ್ತು.

English summary
Amid raging Covid-19 second wave in India, Fugitive self-styled godman Swami Nithyananda, in a statement, said devotees from India would not be allowed to enter his island ‘Kailasa’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X