ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಥಾರಿ ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ ಗಲ್ಲು ಶಿಕ್ಷೆ

By Mahesh
|
Google Oneindia Kannada News

ಘಾಜಿಯಾಬಾದ್, ಅಕ್ಟೋಬರ್ 07: ನಿಥಾರಿ ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ ಗಾಜಿಯಾಬಾದ್ ವಿಶೇಷ ಸಿಬಿಐ ನ್ಯಾಯಾಲಯದಿಂದ ಗಲ್ಲುಶಿಕ್ಷೆ ಘೋಷಿಸಲಾಗಿದೆ. ನಂದಾದೇವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5ರಂದು ಕೋಲಿಯನ್ನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿತ್ತು.

2005ರಲ್ಲಿ 14 ವರ್ಷದ ಬಾಲಕಿ ರಿಂಪಾ ಹಲ್ದಾರ್‌ಳ ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಸುರೇಂದ್ರ ಕೋಲಿಗೆ ಡೆತ್ ವಾರೆಂಟ್ ಜಾರಿಯಾಗಿತ್ತು. ಈ ಪ್ರಕರಣದಲ್ಲೂ ಗಲ್ಲು ಶಿಕ್ಷೆ ವಿಧಿಸಲಾಗಿದೆ. [ನರಭಕ್ಷಕ ಮಣಿಂದರ್ , ಸುರಿಂದರ್ ಗೆ ಮರಣದಂಡನೆ]

Nithari killings: Death penalty to Surendra Koli for Nanda Devi's murder

ಈ ಹಿಂದೆ ರಿಂಪಾ ಹಲ್ದಾರ್‌ಳ ಹತ್ಯೆ ಪ್ರಕರಣದಲ್ಲಿ ಕೆಲ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಸಹ ಖಾಯಂಗೊಳಿಸಿತ್ತು. ಅಲ್ಲದೆ ಸುರೇಂದ್ರ ಕೋಲಿಯಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯರ ಪೈಕಿ ರಿಂಪಾ ಹಲ್ದಾರ್‌ಳ ಕಗ್ಗೊಲೆ ಪ್ರಕರಣವು ಅತ್ಯಂತ ಭೀಭತ್ಸ ಹಾಗೂ ಬರ್ಬರವಾಗಿದ್ದು, ಆರೋಪಿಗೆ ಮರಣದಂಡನೆಯೇ ಸೂಕ್ತವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.[ನರಭಕ್ಷಕನಿಗೆ ಡೆತ್ ವಾರೆಂಟ್]

ಘಾಜಿಯಾಬಾದಿನ ಜೈಲಿನಲ್ಲಿರುವ 44 ವರ್ಷ ವಯಸ್ಸಿನ ಸುರೇಂದರ್ ಕೋಲಿ ಅವರನ್ನು ಗಲ್ಲಿಗೇರಿಸಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಸುರೇಂದ್ರ ಕೋಲಿಗೆ ಐದು ಪ್ರಕರಣಗಳಲ್ಲಿ ಗಲ್ಲುಶಿಕ್ಷೆ ನೀಡಲಾಗಿದೆ. ಕೋಲಿ ವಿರುದ್ಧ ಇನ್ನು 16 ಪ್ರಕರಣಗಳು ದಾಖಲಾಗಿದ್ದು, ಮಿಕ್ಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಎಲ್ಲಾ ಪ್ರಕರಣಗಳಲ್ಲೂ ಇಬ್ಬರ ಮೇಲೆ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ. ಈ ಸೈಕೋ ಕಿಲ್ಲರ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದರು. ಇದೇ ಅಲ್ಲದೆ ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದಾನೆ.

ದೆಹಲಿಯ ಹೊರವಲಯದಲ್ಲಿರುವ ನೋಯ್ಡಾ ಪರಿಸರದ ನಿವಾಸಿಯಾಗಿದ್ದ ರಿಂಪಾ 2005ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. 2006ರಲ್ಲಿ ಪಂಧೇರ್‌ನ ನಿವಾಸದ ಹಿಂದಿರುವ ಚರಂಡಿಯಲ್ಲಿ ಹಲವಾರು ಮಾನವ ಅವಶೇಷಗಳು ಪತ್ತೆಯಾದ ನಂತರ ಸರಣಿ ಕಗ್ಗೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ರಿಂಪಾ ಹತ್ಯೆ ಪ್ರಕರಣದಲ್ಲಿ ಸುರಿಂದರ್ ಕೋಲಿ ಸಹಪಾತಕಿ ಮೊನಿಂದರ್ ಸಿಂಗ್ ಪಂಧೇರ್ ಗೆ ಅಲಹಾಬಾದ್ ಹೈ ಕೋರ್ಟಿನಿಂದ ಜೀವದಾನ ಸಿಕ್ಕಿದೆ. (ಪಿಟಿಐ)

English summary
A special Central Bureau of Investigation (CBI) court in Ghaziabad on Friday gave capital punishment to Surinder Koli who has been found guilty of murder of Nanda Devi in the 2006 Nithari serial killing case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X