ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಸರ್ಗ' ಚಂಡಮಾರುತ; ರೈಲುಗಳ ವೇಳಾಪಟ್ಟಿ ಬದಲು

|
Google Oneindia Kannada News

ಬೆಂಗಳೂರು, ಜೂನ್ 03 : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ 'ನಿಸರ್ಗ' ಚಂಡಮಾರುತದ ಪರಿಣಾಮ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

Recommended Video

Good news to all you beer fans of Karnataka | Brewery | Oneindia kannada

ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಗೋವಾ ರಾಜ್ಯದಲ್ಲಿ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮುಂಬೈಗೆ ಅಪ್ಪಳಿಸಲಿದೆ 'ನಿಸರ್ಗ'; ಕರ್ನಾಟಕದಲ್ಲೂ ಮಳೆ ಮುಂಬೈಗೆ ಅಪ್ಪಳಿಸಲಿದೆ 'ನಿಸರ್ಗ'; ಕರ್ನಾಟಕದಲ್ಲೂ ಮಳೆ

ಜೂನ್ 2 ಮತ್ತು 3ರಂದು ಕೊಂಕಣ ಮಾರ್ಗದಲ್ಲಿ ಸಂಚಾರ ನಡೆಸುವ ವಿಶೇಷ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಲಾಕ್ ಡೌನ್ ಪರಿಣಾಮ ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ.

ಗಂಗಾವತಿ-ಕಾರಟಗಿ ರೈಲು; ಶೀಘ್ರದಲ್ಲೇ ಸಂಚಾರ ಆರಂಭ ಗಂಗಾವತಿ-ಕಾರಟಗಿ ರೈಲು; ಶೀಘ್ರದಲ್ಲೇ ಸಂಚಾರ ಆರಂಭ

Nisarga Cyclone Some Trains Diverted

ರೈಲುಗಳ ವಿವರ

* ಎರ್ನಾಕುಲಂ- ಎಚ್. ನಿಜಾಮುದ್ದೀನ್ (20617) ವಿಶೇಷ ರೈಲು ಮಡಗಾಂ ಜಂಕ್ಷನ್‌ನಿಂದ ಲೋಂಡಾ-ಮೀರಜ್-ಪುಣೆ-ಮನ್ಮಾದ್ ಮಾರ್ಗವಾಗಿ ಚಲಿಸಲಿದೆ.

ಪ್ರಯಾಣಿಕರೇ ಗಮನಿಸಿ; ಬೆಂಗಳೂರಿನಿಂದ ಹೊರಡುವ ರೈಲುಗಳ ಪಟ್ಟಿ ಪ್ರಯಾಣಿಕರೇ ಗಮನಿಸಿ; ಬೆಂಗಳೂರಿನಿಂದ ಹೊರಡುವ ರೈಲುಗಳ ಪಟ್ಟಿ

* ತಿರುವನಂತಪುರ ಸೆಂಟ್ರಲ್-ಲೋಕಮಾನ್ಯ ತಿಲಕ್ ಟರ್ಮಿನಸ್ (06346) ರೈಲು ಮಡಗಾಂವ್ ಜಂಕ್ಷನ್‌ನಿಂದ ಲೋಂಡಾ-ಮೀರಜ್-ಪುಣೆ-ಕಲ್ಯಾಣ್ ಮೂಲಕ ಸಾಗಲಿದೆ.

* ನವದೆಹಲಿ-ತಿರುವನಂತಪುರ (02432) ರೈಲು ಸೂರತ್-ವಸೈ ರೋಡ್-ಕಲ್ಯಾಣ್-ಮೀರಜ್-ಲೋಂಡಾ-ಮಡಗಾಂವ್ ಜಂಕ್ಷನ್ ಮೂಲಕ ಸಂಚಾರ ನಡೆಸಲಿದೆ.

* ಲೋಕಮಾನ್ಯ ತಿಲಕ್ (ಟಿ)-ತಿರುವನಂತಪುರ ಸೆಂಟ್ರಲ್ (06345) ವಿಶೇಷ ರೈಲು ಸಂಜೆ 6 ಗಂಟೆಗೆ ಪ್ರಯಾಣ ಆರಂಭಿಸಲಿದೆ.

English summary
Cyclone Nisarga is set to make landfall at Alibaug in Maharashtra. Some trains diverted due to cyclone effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X