ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?

|
Google Oneindia Kannada News

ಯುವಜನತೆ ಓಲಾ, ಉಬರ್ ನಂಥ ಕ್ಯಾಬ್ ಗಳ ಬಳಕೆ ಹೆಚ್ಚು ಮಾಡಿರುವುದರಿಂದ ಕಾರು ಮಾರಾಟ ಇಳಿಕೆ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಚೆನ್ನೈನಲ್ಲಿ ಹೇಳಿಕೆ ನೀಡಿದ್ದಾರೆ. ಆ ನಂತರ ಟ್ವಿಟ್ಟರ್ ನಲ್ಲಿ ನಿರ್ಮಲಾ ಸೀತಾರಾಮನ್ ರನ್ನು ವಿಪರೀತ ಟ್ರೋಲ್ ಮಾಡಲಾಗುತ್ತಿದೆ.

ಆಯ್ದ ಕೆಲವನ್ನು ಮಾತ್ರ ಇಲ್ಲಿ ನೀಡಲಾಗಿದೆ.

ಕಾಂಗ್ರೆಸ್
ಬಸ್ ಮತ್ತು ಟ್ರಕ್ ಮಾರಾಟ ಕಡಿಮೆ ಆಗಿರುವುದು ಕೂಡ ಯುವ ಜನತೆ ಅವುಗಳ ಬಳಕೆ ಮಾಡುತ್ತಿರುವಷ್ಟು ಖರೀದಿ ಮಾಡುವುದು ನಿಲ್ಲಿಸಿರುವುದರಿಂದಲೇ. ಇದು ಸರಿ ಅಲ್ಲವೇ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್?

ಗೌರವ್ ಪಂದಿ
ಓಲಾ ಹಾಗೂ ಉಬರ್ ಕ್ಯಾಬ್ ಗಳಿಗೆ ಶೇಕಡಾ ಎಂಬತ್ತರಷ್ಟು ವ್ಯವಹಾರ ಬರುವುದೇ ಮೆಟ್ರೋ ನಗರಗಳಿಂದ ಮತ್ತು ನಿರ್ಮಲಾ ಸೀತಾರಾಮನ್ ಯೋಚನೆ ಮಾಡುವ ಪ್ರಕಾರ, ಇದರಿಂದಲೇ ಇಡೀ ದೇಶದಾದ್ಯಂತ ವಾಹನಗಳ ಮಾರಾಟ ಬಿದ್ದಿದೆ. ಘಟಕಗಳನ್ನೇ ಮುಚ್ಚುವ ಮಟ್ಟಕ್ಕೆ ಟ್ರಕ್ ಗಳ ಮಾರಾಟ ಕೂಡ ಅದಕ್ಕೇ ಕುಸಿಯುತ್ತಿದೆಯಾ? ಗಂಭೀರವಾಗಿ ಹೇಳಿ!

Nirmala Sitharaman Trolled For Her Statement About Millennial

ಸವುಕ್ಕು ಶಂಕರ್
ಓಲಾ ಮತ್ತು ಉಬರ್ ಅನ್ನು ನಿಷೇಧಿಸುವ ಯಾವುದಾದರೂ ಯೋಜನೆ ಇದೆಯಾ ನಿರ್ಮಲಾ ಸೀತಾರಾಮನ್ ಮೇಡಂ? ದಯವಿಟ್ಟು ನನಗೆ ಮುಂಚಿತವಾಗಿ ಎಚ್ಚರಿಸಿ.

ಸೌರಭ್ ಭಾರದ್ವಾಜ್
ನಿರ್ಮಲಾ ಸೀತಾರಾಮನ್ ಜೀ ಟ್ರ್ಯಾಕ್ಟರ್ ಮಾರಾಟ ಯಾಕೆ ಕುಸಿದಿದೆ? ಯುವಜನರು ತಮ್ಮ ಜಮೀನಿನಲ್ಲಿ ಓಲಾ/ಉಬರ್ ಬಳಸುತ್ತಿದ್ದಾರಾ? ದಯವಿಟ್ಟು ಯುವಜನರನ್ನು ಬಿಟ್ಟುಬಿಡಿ!!

ಕೇವಲ್ ಶಾ
ದಕ್ಷಿಣ ಭಾರತದ ಸಿನಿಮಾಗಳಲ್ಲಾದರೂ ಒಂದಿಷ್ಟು ತರ್ಕ ಹುಡುಕಬಹುದು, ಆದರೆ..?

ಸುಧೀರ್ ಚೌಧುರಿ
ರಫೇಲ್ ವಿಮಾನವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವುದರಿಂದ ಜೆಟ್ ಏರ್ ವೇಸ್ ಬಿದ್ದುಹೋಗಿದೆ.

ಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾ

ದೇಸಿ ಭಾಯ್ ದೇಶ್ ಭಕ್ತ್
ನಿರ್ಮಲಾ ಸೀತಾರಾಮನ್ ಜೀ, ಟ್ರಕ್ ಮಾರಾಟ ಆಗ್ತಿಲ್ಲ ಮತ್ತು ನಾನು ಪರೀಕ್ಷೆ ಮಾಡಿದ ಹಾಗೆ ಯುವ ಜನತೆ ಟ್ರಕ್ ಅನ್ನು ಖರೀದಿಸಲ್ಲ್, ಚಲಾಯಿಸಲ್ಲ. ಆದರೂ ಅದು ಇಳಿಕೆಯಾಗಿದೆ! ಓಲಾ ಮತ್ತು ಉಬರ್ ತಪ್ಪಾ?

ಶ್ರೀವತ್ಸ
ವಾಹನಗಳ ಮಾರಾಟ ಕಡಿಮೆ ಆಗಿರುವುದಕ್ಕೆ ನಿರ್ಮಲಾ ಸೀತಾರಾಮನ್ ಯುವ ಜನತೆಯನ್ನು ನಿಂದಿಸುತ್ತಾರೆ. ವಾಟ್ಸ್ ಅಪ್ ವಿಶ್ವವಿದ್ಯಾಲಯದಲ್ಲಿ ನಮ್ಮ ವಿತ್ತಸಚಿವೆ Rank ವಿದ್ಯಾರ್ಥಿ. ಆರ್ಥಿಕ ಕುಸಿತ ಪ್ರತಿಯೊಬ್ಬರ ತಪ್ಪು, ಸರಕಾರದ್ದು ಅಲ್ಲವಾ? ಇನ್ನೂ ಮುಂದುವರಿದು ನಮ್ಮ ಜನರಿಗೆ ಕೆಲಸ ಬೇಕಿಲ್ಲ ಅದಕ್ಕೇ ನಿರುದ್ಯೋಗ ಅಂತಲೂ ನಿರ್ಮಲಾ ಹೇಳ್ತಾರೆ!

ಇಮ್ರಾನ್ ಖಾನ್
ಎಫ್ ಎಂಸಿಜಿ- ಇಳಿಕೆ

ವಾಹನ ವಲಯ- ಇಳಿಕೆ

ಟೆಕ್ಸ್ಟ್ ಟೈಲ್- ಇಳಿಕೆ

ಉದ್ಯೋಗ ದರ- ಇಳಿಕೆ

ಜಿಡಿಪಿ ಪ್ರಗತಿ ದರ- ಇಳಿಕೆ

ರುಪಾಯಿ ಮೌಲ್ಯ- ಇಳಿಕೆ

ನಿರ್ಮಲಾ ಸೀತಾರಾಮನ್ ಅವರ ಅಧಿಕಾರಾವಧಿಯಲ್ಲಿ ಏರಿಕೆ ಆಗಿದ್ದು ಅವರ ದುರಹಂಕಾರ ಮಾತ್ರ.

ಪ್ರೀತ್ ಕೌರ್
ಆ ನಂತರ ನಿರ್ಮಲಾ ಸೀತಾರಾಮನ್ ಮೇಡಂ ಸಮರ್ಥನೆ ಮಾಡಿಕೊಳ್ತಾರೆ: ನಾನು ಮಾತನಾಡಿದ್ದು ಆಟೋರಿಕ್ಷಾ ಬಗ್ಗೆಯೇ ಹೊರತು ಆಟೋ ಸೆಕ್ಟರ್ ಬಗ್ಗೆ ಅಲ್ಲ.

English summary
Car sale down because of millennial using Ola, Uber, said finance minister Nirmala Sitharaman. After that she trolled in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X