ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತವನ್ನು ಕೆಳಕ್ಕೆ ತಳ್ಳಬೇಡಿ': ಮನಮೋಹನ್ ಸಿಂಗ್‌ ವಿರುದ್ಧ ಸೀತಾರಾಮನ್ ವಾಗ್ದಾಳಿ

|
Google Oneindia Kannada News

ನವದೆಹಲಿ, ಫೆಬ್ರವರಿ 18: ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕೆ ಮಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಿಡಿಮಿಡಿಗೊಂಡಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ಆರ್ಥಿಕತೆಯನ್ನು ಹಳಿಗೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಡಿಲ್ಲ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಇದು ನನಗೆ ನೋವುಂಟುಮಾಡುತ್ತದೆ" ಎಂದು ಹೇಳಿರುವ ಸೀತಾರಾಮನ್‌, ಚುನಾವಣಾ ರಾಜಕೀಯವನ್ನು ಗಮನದಲ್ಲಿಟ್ಟುಕೊಂಡು ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗಳು ಭಾರತವನ್ನು ಕೆಳಕ್ಕೆ ತಲುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಖಾಲಿಸ್ತಾನ್ ಚಳವಳಿಗೆ ಬೆಂಬಲ ಆರೋಪ: ಕೇಜ್ರಿವಾಲ್‌ ವಿರುದ್ಧ ತನಿಖೆ ನಡೆಸಲು ಮೋದಿಗೆ ಚನ್ನಿ ಮನವಿ ಖಾಲಿಸ್ತಾನ್ ಚಳವಳಿಗೆ ಬೆಂಬಲ ಆರೋಪ: ಕೇಜ್ರಿವಾಲ್‌ ವಿರುದ್ಧ ತನಿಖೆ ನಡೆಸಲು ಮೋದಿಗೆ ಚನ್ನಿ ಮನವಿ

ಆರ್ಥಿಕತೆ, ರಾಜತಾಂತ್ರಿಕತೆ ಮತ್ತು ರಾಜಕೀಯವನ್ನು ನಿಭಾಯಿಸಲು ವಿಫಲವಾಗಿದೆ ಎಂದು ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಮನಮೋಹನ್ ಸಿಂಗ್ ವೀಡಿಯೊ ಸಂದೇಶಕ್ಕೆ ಹಣಕಾಸು ಸಚಿವರು ಪ್ರತಿಕ್ರಿಯಿಸಿದರು. "ಅವರಿಗೆ (ಬಿಜೆಪಿ ನೇತೃತ್ವದ ಸರ್ಕಾರಕ್ಕೆ) ಆರ್ಥಿಕ ನೀತಿಯ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಬಡವರು ಬಡವರಾಗುತ್ತಿರುವಾಗ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ," ಎಂದು 88 ವರ್ಷದ ಮಾಜಿ ಪ್ರಧಾನಿ ಪಂಜಾಬ್‌ ಚುನಾವಣೆಗೂ ಮೊದಲು ಕಾಂಗ್ರೆಸ್‌ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಹೇಳಿದ್ದಾರೆ.

Nirmala Sitharaman’s Sharp Rebuttal After Manmohan Singh Statement

ಕಳೆದ ಏಳೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರವು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಬದಲು ಜನರ ಸಮಸ್ಯೆಗಳಿಗೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿದೆ ಎಂದು ಸಿಂಗ್ ಹೇಳಿದ್ದಾರೆ. ಇದಕ್ಕೆ ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ರಾಷ್ಟ್ರೀಯತೆಯು ಬ್ರಿಟಿಷರ ಒಡೆದು ಆಳುವ ನೀತಿಯಂತಿದೆ: ಮನ್‌ಮೋಹನ್ ಸಿಂಗ್ಬಿಜೆಪಿ ಸರ್ಕಾರದ ರಾಷ್ಟ್ರೀಯತೆಯು ಬ್ರಿಟಿಷರ ಒಡೆದು ಆಳುವ ನೀತಿಯಂತಿದೆ: ಮನ್‌ಮೋಹನ್ ಸಿಂಗ್

ನಿರ್ಮಲಾ ಸೀತಾರಾಮನ್‌ ಹೇಳುವುದು ಏನು?

"ಭಾರತವನ್ನು ದುರ್ಬಲವಾದ ಐದು ಆರ್ಥಿಕತೆಯನ್ನಾಗಿ ಮಾಡಿದಕ್ಕಾಗಿ ಹೆಚ್ಚು ನೆನಪಿಸಿಕೊಳ್ಳುವ ಪ್ರಧಾನಿ... ಆ ಕುಖ್ಯಾತ ಸ್ಥಾನಮಾನಕ್ಕಾಗಿ ನೆನಪಿಸಿಕೊಳ್ಳುತ್ತಿರುವ ಭಾರತ ... ನಿರಂತರವಾಗಿ 22 ತಿಂಗಳ ಕಾಲ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗದ ಪ್ರಧಾನಿ ... ಬಂಡವಾಳವನ್ನು ಕಂಡ ಪ್ರಧಾನಿ.... ನಮ್ಮ ವಿದೇಶಿ ವಿನಿಮಯ ಮೀಸಲು ಏಳು ವರ್ಷಗಳ ಹಿಂದೆ ಸುಮಾರು 275 ಡಾಲರ್‌ ಬಿಲಿಯನ್ ಆಗಿತ್ತು. ಈಗ ಅದು 630 ಬಿಲಿಯಮ್ ಡಾಲರ್‌ ಆಗಿದೆ. ಇದ್ದಕ್ಕಿದ್ದಂತೆ ಆರ್ಥಿಕತೆಯತ್ತ ಗಮನ ಹರಿಸುತ್ತಿದೆ. ಇದು ಪಂಜಾಬ್ ಚುನಾವಣೆಗಾಗಿಯೇ?," ಎಂದು ಪ್ರಶ್ನೆ ಮಾಡಿದ್ದಾರೆ.

"ಇಂದು ಪ್ರಚಾರಕ್ಕೆ ಹೋಗುತ್ತಿರುವ ಪಂಜಾಬ್‌ನಲ್ಲಿ ಲಸಿಕೆಗಳನ್ನು ಲಾಭಕ್ಕೆ ಮಾರಾಟ ಮಾಡಿದಾಗ ಅವರಿಗೆ ಏಕೆ ಮಾತನಾಡಲು ಸಾಧ್ಯವಾಗಲಿಲ್ಲ," ಎಂದು ಪ್ರಶ್ನಿಸಿದ ಸೀತಾರಾಮನ್‌, ". ಡಾ ಮನಮೋಹನ್ ಸಿಂಗ್, ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿತ್ತು ಆದರೆ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಕೇವಲ ಚುನಾವಣಾ ಪರಿಗಣನೆಗಳು ಈ ದೇಶದ ಒಬ್ಬ ಪ್ರಜ್ಞಾವಂತ ಪ್ರಧಾನಿಯನ್ನು ಮಾಡಬಹುದೇ. ಆರ್ಥಿಕ ತಜ್ಞರೂ ಆಗಿರುವ ಅವರು ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಸಾಂಕ್ರಾಮಿಕ ರೋಗದ ನಡುವೆಯೂ ಈಗ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಅಲ್ಲವೆ," ಎಂದು ಕೇಳಿದ್ದಾರೆ.

2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಬಡವರು ಬಡವರಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸೀತಾರಾಮನ್, , ಕಾಂಗ್ರೆಸ್ ಹೇಳಿಕೆಗೆ ಆಧಾರವಾಗಿರುವ ಆಕ್ಸ್‌ಫ್ಯಾಮ್ ವರದಿಯು ದೋಷಪೂರಿತ ವಿಧಾನವನ್ನು ಅಳವಡಿಸಿಕೊಂಡಿದೆ ಎಂದಿದ್ದಾರೆ. "ಕಾಂಗ್ರೆಸ್‌ ಬಳಸಿದ ಸೂತ್ರವು ತಪ್ಪಾಗಿದೆ. ಇದು ನಿಜವಾಗಿಯೂ ಗಣನೀಯವಾದ ಆಧಾರದ ಮೇಲೆ ಇರಬೇಕು," ಎಂದು ಕೂಡಾ ಸೀತಾರಾಮನ್‌ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

RCB ಹಂಚಿಕೊಂಡ ಹೊಸ ಪೋಸ್ಟ್ ನೋಡಿ ಅಭಿಮಾನಿಗಳು ಥ್ರಿಲ್ | Oneindia Kannada

English summary
Nirmala Sitharaman's Sharp Rebuttal After Manmohan Singh Statement Against Prime Minister Narendras Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X