ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಡಿಸೆಂಬರ್ 13: ಫೋರ್ಬ್ಸ್ 2019ರ 'ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರು' ಪಟ್ಟಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಥಾನ ಪಡೆದಿದ್ದಾರೆ.

ನೂರು ಪ್ರಭಾವಶಾಲಿಗಳ ಪಟ್ಟಿಯಲ್ಲಿ ಜರ್ಮನಿಯ ಚಾನ್ಸೆಲರ್ ಆಂಜೆಲಾ ಮರ್ಕೆಲ್, ಸತತ ಒಂಬತ್ತನೇ ವರ್ಷ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷೆ ಕ್ರಿಸ್ಟೀನ್ ಲಿಗಾರ್ಡೆ ಎರಡನೆಯ ಸ್ಥಾನದಲ್ಲಿದ್ದರೆ, ಅಮೆರಿಕದ ಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮೂರನೇ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ನಾಯಕರು: ಮೋದಿಗೆ ಎಷ್ಟನೇ ಸ್ಥಾನ?ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ನಾಯಕರು: ಮೋದಿಗೆ ಎಷ್ಟನೇ ಸ್ಥಾನ?

ಈ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಭಾರತದ ಮೂವರು ಮಹಿಳೆಯರಿದ್ದಾರೆ. ನಿರ್ಮಲಾ ಅವರು 34ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಎಚ್‌ಸಿಎಲ್ ಕಾರ್ಪೊರೇಷನ್‌ನ ಸಿಇಓ ನಾದರ್ ಮಲ್ಹೋತ್ರಾ 54ನೇ ಸ್ಥಾನದಲ್ಲಿದ್ದಾರೆ. 1978ರಲ್ಲಿ ಭಾರತದ ಅತಿ ದೊಡ್ಡ ಬಯೋ ಫಾರ್ಮಾಸೆಟಿಕಲ್ ಸಂಸ್ಥೆ ಬಯೋಕಾನ್ ಸ್ಥಾಪಿಸಿದ ಭಾರತದ ಶ್ರೀಮಂತ ಮಹಿಳೆ ಕಿರಣ್ ಮಜುಂದಾರ್ ಶಾ ಈ ಪಟ್ಟಿಯಲ್ಲಿ 65ನೇ ಸ್ಥಾನದಲ್ಲಿದ್ದಾರೆ.

ನಿರ್ಮಲಾ ಸೀತಾರಾಮನ್ ಹೆಗ್ಗಳಿಕೆ

ನಿರ್ಮಲಾ ಸೀತಾರಾಮನ್ ಹೆಗ್ಗಳಿಕೆ

ಭಾರತದ ಮೊದಲ ಮಹಿಳಾ ಹಣಕಾಸು ಸಚಿವರೆನಿಸಿಕೊಂಡಿರುವ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಚ್ಚುವರಿಯಾಗಿ ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದರು. ಆದರೆ ಸ್ವತಂತ್ರವಾಗಿ ಈ ಖಾತೆಯನ್ನು ಮೊದಲ ಬಾರಿಗೆ ನಿರ್ವಹಿಸಿದ ಮಹಿಳೆ ಎಂಬ ಖ್ಯಾತಿ ನಿರ್ಮಲಾ ಅವರದು. ಇದೇ ಮೊದಲ ಬಾರಿಗೆ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಿಳೆಯರ ಮಂತ್ರವಾಗಲಿ

ಮಹಿಳೆಯರ ಮಂತ್ರವಾಗಲಿ

ಅಮೆರಿಕದ ಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ, 'ನನ್ನ ಜತೆ ತಲೆಹರಟೆ ಬೇಡ' ಎಂದು ವರದಿಗಾರನೊಬ್ಬನಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿರುವ ಫೋರ್ಬ್ಸ್, ಈ ಹೇಳಿಕೆಯು ಫೋರ್ಬ್ಸ್ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿನ ಪ್ರತಿಯೊಬ್ಬರ ಮಂತ್ರವಾಗಬಹುದು ಎಂದಿದೆ.

ನಿರ್ಮಲಾ ಸೀತಾರಾಮನ್‌ಗೆ ಯಾವ ಅರ್ಥಶಾಸ್ತ್ರವೂ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿನಿರ್ಮಲಾ ಸೀತಾರಾಮನ್‌ಗೆ ಯಾವ ಅರ್ಥಶಾಸ್ತ್ರವೂ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ

ಪ್ರಮುಖರು ಯಾರು?

ಪ್ರಮುಖರು ಯಾರು?

ಈ ಪಟ್ಟಿಯಲ್ಲಿ ಬಿಲ್ & ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ಮೆಲಿಂಡಾ ಗೇಟ್ಸ್ (6), ಐಬಿಎಂ ಸಿಇಓ ಗಿನ್ನಿ ರೊಮೆಟ್ಟಿ (9), ಫೇಸ್‌ಬುಕ್ ಸಿಓಓ ಶೆರಿಲ್ ಸ್ಯಾಂಡ್‌ಬರ್ಗ್ (18), ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡರ್ನ್ (38), ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾ ಟ್ರಂಪ್ (42), ಗಾಯಕಿಯರಾದ ರಿಹಾನಾ (61), ಬೆಯೋನ್ಸ್ (66) ಮತ್ತು ಟೇಲರ್ ಸ್ವಿಫ್ಟ್ (71), ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ (81) ಮತ್ತು ಹವಾಮಾನ ವೈಪರೀತ್ಯದ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ (100) ಸ್ಥಾನ ಪಡೆದಿದ್ದಾರೆ.

23 ಹೊಸ ಮುಖಗಳು

23 ಹೊಸ ಮುಖಗಳು

ಜರ್ಮನ್ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಸತತ ಒಂಬತ್ತನೇ ವರ್ಷ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಯುರೋಪ್‌ನಲ್ಲಿನ ವಲಸೆ ವಿರೋಧಿ ಭಾವನೆಗಳನ್ನು ಶಮನ ಮಾಡುವಲ್ಲಿ ಆಂಜೆಲಾ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದಾರೆ. 16 ವರ್ಷದ ಗ್ರೆಟಾ ಥನ್‌ಬರ್ಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. 23 ಮಂದಿ ಮಹಿಳೆಯರು ಮೊದಲ ಬಾರಿಗೆ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈರುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕರ: ನಾನಂತೂ ಈರುಳ್ಳಿ ತಿನ್ನಲ್ಲ!ಈರುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕರ: ನಾನಂತೂ ಈರುಳ್ಳಿ ತಿನ್ನಲ್ಲ!

English summary
Finance Minister Nirmala Sitharaman ranked 34 in the Forbes top 100 most powerful women list. Nadar Malhotra and Kiran Mazumdar Shaw have been named.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X