ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಿರ್ಮಲ್ ಸಿಂಗ್ ರಾಜೀನಾಮೆ

|
Google Oneindia Kannada News

ಶ್ರೀನಗರ, ಏಪ್ರಿಲ್ 30: ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಿರ್ಮಲ್ ಸಿಂಗ್ ನಿನ್ನೆ(ಏ.29) ರಾಜೀನಾಮೆ ನೀಡಿದ್ದಾರೆ.

ಜಮ್ಮು ಕಾಶ್ಮೀರ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಏ.4, 2016 ರಂದು ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ರಾಜೀನಾಮೆಯ ನಂತರ ಬಿಜೆಪಿ ಮುಖಂಡ ಕವಿಂದರ್ ಗುಪ್ತ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಜಮ್ಮು-ಕಾಶ್ಮೀರ: ಸಚಿವರ ಸಾಮೂಹಿಕ ರಾಜೀನಾಮೆ ಕೇಳಿದ ಬಿಜೆಪಿಜಮ್ಮು-ಕಾಶ್ಮೀರ: ಸಚಿವರ ಸಾಮೂಹಿಕ ರಾಜೀನಾಮೆ ಕೇಳಿದ ಬಿಜೆಪಿ

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರ ಸರ್ಕಾರಲ್ಲಿ ಮಂತ್ರಿ ಮಂಡಲವನ್ನು ಸಂಪೂರ್ಣ ಬದಲಾಯಿಸುತ್ತಿರುವ ಕಾರಣಕ್ಕೆ ಏ.17 ರಂದು ಬಿಜೆಪಿಯ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದರು. ಕತುವಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಕುರಿತು ದೇಶದಾದ್ಯಂತ ಆಕ್ರೋಶ ಎದ್ದ ನಂತರ ನಡೆದಿದ್ದ ಈ ಬೆಳವಣಿಗೆ ಜಮ್ಮು -ಕಾಶ್ಮೀರದ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ) ಮತ್ತು ಬಿಜೆಪಿ ನಡುವೆ ಬಿರುಕು ಮೂಡುತ್ತಿದೆ ಎಂಬ ಅನುಮಾನ ಹುಟ್ಟಿಸಿತ್ತು.

Nirmal Singh resigns as Jammu Kashmir Deputy CM

ಆದರೆ ಬಿಜೆಪಿ ವರಿಷ್ಠರು ಇಲ್ಲಿನ ಎಲ್ಲ ಸಚಿವರ ಮಳಿ ಸಾಮೂಹಿಕ ರಾಜೀನಾಮೆ ಕೇಳಿದ್ದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಸಚಿವ ಸಂಪುಟ ಪುನಾರಚನೆಗಷ್ಟೇ ಈ ನಿರ್ಧಾರ ಎಂದು ಊಹಾಪೋಹಗಳಿಗೆ ಬಿಜೆಪಿ ಉನ್ನತ ಮೂಲಗಳು ತೆರೆ ಎಳೆದಿದ್ದವು.

English summary
Nirmal Singh resigned as Deputy Chief Minister of Jammu and Kashmir on Sunday. The decision comes ahead of a major reshuffle in the Jammu and Kashmir cabinet. Singh had assumed office as Deputy Chief Minister on April 4, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X