ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Timeline:ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ

By Staff
|
Google Oneindia Kannada News

ನವದಹೆಲಿ, ಡಿಸೆಂಬರ್ 18: ಇಡೀ ಪ್ರಪಂಚದ ಗಮನ ಸೆಳೆದಿದ್ದ ನಿರ್ಭಯಾ ಪ್ರಕರಣದ ತೀರ್ಪುನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಪ್ರಕರಣದ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ಕಾಯಂಗೊಳಿಸಿದೆ. ಅಕ್ಷಯ್ ಕುಮಾರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

2012ರ ಡಿಸೆಂಬರ್ ನಲ್ಲಿ ನಡೆದಿದ್ದ ಈ ಹೀನ, ಕುಕೃತ್ಯಕ್ಕೆ ಮೇ 5, 2014ರಂದು ಅಂತಿಮ ತೀರ್ಪು ಬಂದಿದೆ. ಸುಮಾರು ನಾಲ್ಕೂವರೆ ವರ್ಷಗಳವರೆಗೆ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದ ಈ ಪ್ರಕರಣದ ನಡೆದು ಬಂದ ಹಾದಿಯನ್ನು ಇಲ್ಲಿ ನೀಡಲಾಗಿದೆ.

ಅಕ್ಷಯ್ ಠಾಕೂರ್‌ ಅರ್ಜಿ ಸುಪ್ರೀಂನಿಂದ ವಜಾ; ಗಲ್ಲು ಶಿಕ್ಷೆ ಜಾರಿಅಕ್ಷಯ್ ಠಾಕೂರ್‌ ಅರ್ಜಿ ಸುಪ್ರೀಂನಿಂದ ವಜಾ; ಗಲ್ಲು ಶಿಕ್ಷೆ ಜಾರಿ

ಡಿ. 16, 2012 - ನಿರ್ಭಯಾ ಅಂದು ತನ್ನ ಭಾವಿ ಪತಿಯೊಂದಿಗೆ ಸಿನಿಮಾಕ್ಕೆ ತೆರಳಿ ಸಂಜೆ ಕತ್ತಲಾಗುವ ಹೊತ್ತಿಗೆ ಮನೆಗೆ ಮರಳುವ ವೇಳೆ ಖಾಸಗಿ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿತ್ತು. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾತ್ರವಲ್ಲ, ಮನುಷ್ಯತ್ವಕ್ಕೇ ಅಪಮಾನವಾಗುವಂಥ ರೀತಿಯಲ್ಲಿ ಆ ಯುವತಿಯ ಮೇಲೆ ಅತ್ಯಂತ ಕ್ರೂರವಾಗಿ, ಚಲಿಸುತ್ತಿದ್ದ ಬಸ್ ನಲ್ಲಿ ಅತ್ಯಾಚಾರ.

Nirbhaya case timeline

ಡಿ. 17, 2012 - ಮಾಧ್ಯಮಗಳಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ ರಾಷ್ಟ್ರಾದ್ಯಂತ ಕೋಲಾಹಲ ಸೃಷ್ಟಿಯಾದ ಮೇಲೆ ಎಚ್ಚೆತ್ತ ದೆಹಲಿ ಪೊಲೀಸರಿಂದ, ಪ್ರಕರಣದ ತನಿಖೆ ನಡೆಸಿ, 17 ವರ್ಷದ ಓರ್ವ ಬಾಲಕ ಸೇರಿದಂತೆ ಆರು ಆರೋಪಿಗಳನ್ನು ಗುರುತು.[ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದ ಸುಪ್ರೀಂ ಕೋರ್ಟ್]

ಡಿ. 18, 2012 - ಒಬ್ಬ 17 ವರ್ಷದ ಹುಡುಗ ಸೇರಿದಂತೆ ಆರು ಆರೋಪಿಗಳ ಬಂಧನ. ಪ್ರಮುಖರು - ಅಕ್ಷಯ್, ರಾಮ್ ಸಿಂಗ್, ಮುಖೇಶ್, ವಿನಯ್ ಶರ್ಮಾ ಹಾಗೂ ಪವನ್ ಗುಪ್ತಾ.

ಡಿ. 29 , 2012 - ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ರವಾನಿಸಲಾಗಿದ್ದ ನಿರ್ಭಯಾ ಅಲ್ಲೇ ಆಸ್ಪತ್ರೆಯಲ್ಲಿ ಸಾವು.

ಮಾ. 11, 2013 - ಪ್ರಕರಣದ ಪ್ರಮುಖ ಆರೋಪಿ ರಾಮ್ ಸಿಂಗ್, ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು.

ಆ. 31, 2013 - ಬಾಲಾಪರಾಧಿ ನ್ಯಾಯಾಧೀಕರಣ (ಜೆಜೆಬಿ), ಪ್ರಕರಣದ ಬಾಲಾಪರಾಧಿಗೆ ಮೊಹಮ್ಮದ್ ಅಫ್ರೋಜ್ ಗೆ ಮೂರು ವರ್ಷ ಶಿಕ್ಷೆ ವಿಧಿಸಿ ಆತನನ್ನು ಬಾಲ ಮಂದಿರಕ್ಕೆ ಕಳುಹಿಸಿತು.[ಜ್ಯೋತಿ ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಟ್ವಿಟ್ಟಿಗರ ಆಜ್ಞೆ]

ಸೆ. 13, 2013 - ಒಬ್ಬ ಬಾಲಾಪರಾಧಿಯೆಂದು ಪರಿಗಣಿಸಲ್ಪಟ್ಟ, ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡ. ಹಾಗಾಗಿ, ಉಳಿದ ನಾಲ್ವರಿಗೆ ಮರಣ ದಂಡನೆ ಶಿಕ್ಷೆ ನೀಡಿದ ದೆಹಲಿಯ ಸಾಕೇತ್ ನ್ಯಾಯಾಲಯ. ನ್ಯಾಯಮೂರ್ತಿಗಳಾದ ರೇವಾ ಖೇತ್ರಪಾಲ್ ಹಾಗೂ ಪ್ರತಿಭಾ ರಾಣಿ ಅವರಿಂದ ತೀರ್ಪು ಪ್ರಕಟ.

ಮಾ. 15, 2014: ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್. ಪ್ರಕರಣದ ಸಾಕ್ಷಿಗಳ ಮರು ವಿಚಾರಣೆಗೆ ಇಂಗಿತ.

ಡಿ. 18, 2015 - ಬಾಲಾಪರಾಧಿಯನ್ನು ಬಿಡುಗಡೆ ಮಾಡಕೂಡದೆಂದು ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್. ಇದರ ಪರಿಣಾಮವಾಗಿ, ಬಾಲಾಪರಾಧಿ ಬಿಡುಗಡೆ.

ಏ. 3, 2016 - ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಆರಂಭ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ವಿ. ಗೋಪಾಲ ಗೌಡ ಹಾಗೂ ಕುರಿಯನ್ ಜೋಸೆಫ್ ಅವರುಳ್ಳ ಪೀಠದಿಂದ ವಿಚಾರಣೆ.

ಏ. 8, 2016 - ಹಿರಿಯ ವಕೀಲರಾದ ರಾಜು ರಾಮಚಂದ್ರನ್, ಸಂಜಯ್ ಹೆಗ್ಡೆ ಅವರು ಅಮಿಕಸ್ ಕ್ಯೂರಿಯಾಗಿ ನೇಮಕ.

ಜು. 11, 2016 - ನಿರ್ಭಯಾ ಪ್ರಕರಣದ ನ್ಯಾಯಪೀಠ ಬದಲಾವಣೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಆರ್. ಬಾನುಮತಿ, ಅಶೋಕ್ ಭೂಷಣ್ ಅವರುಳ್ಳ ಹೊಸ ಸಮಿತಿ ನೇಮಕ.

ಸೆ. 2, 2016 - ಡಿಫೆನ್ಸ್ ಅಡ್ವೊಕೇಟ್ ಎಂ.ಎಲ್. ಶರ್ಮಾ ಅವರಿಂದ ಅಹವಾಲು ಸಲ್ಲಿಕೆ.

ಮಾ. 6, 2017 - ಆರೋಪಿಗಳಿಂದ ಹೆಚ್ಚುವರಿ ಅಫಿಡವಿಟ್ ಸಲ್ಲಿಕೆ.

ಮಾ. 27, 2017 - ವಿಚಾರಣೆ ಮುಕ್ತಾಯ. ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.

ಏ. 5, 2017 - ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿದ ಸರ್ವೋಚ್ಛ ನ್ಯಾಯಾಲಯ.

ನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ, ಸುಪ್ರೀಂ ಆದೇಶನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ, ಸುಪ್ರೀಂ ಆದೇಶ

ಜುಲೈ 09, 2018: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮೂವರು ಅಪರಾಧಿಗಳು ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟಿನ ತ್ರಿಸದಸ್ಯಪೀಠ. ಎಲ್ಲಾ ಅಪರಾಧಿಗಳಿಗೂ ಗಲ್ಲುಶಿಕ್ಷೆ ಖಾಯಂಗೊಳಿಸಲಾಗಿದೆ.

ಡಿಸೆಂಬರ್ 18, 2019: ಅಕ್ಷಯ್ ಕುಮಾರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ(ಡಿಸೆಂಬರ್ 18) ತಿರಸ್ಕರಿಸಿದೆ. ಹೀಗಾಗಿ, ಪ್ರಕರಣದ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ಕಾಯಂಗೊಂಡಿದೆ.

English summary
Here is the timeline of Nirbhaya case. Important turning points of the case have been mentioned within the time frame when incident happened on December 16, 2012 to till date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X