ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಲು ಶಿಕ್ಷೆ ಏಕೆ?; ಸಾಯಲು ದೆಹಲಿ ಮಾಲಿನ್ಯವೇ ಸಾಕು

|
Google Oneindia Kannada News

ದೆಹಲಿ, ಡಿಸೆಂಬರ್ 10 : ನಿರ್ಭಯಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಕ್ಷಯ್ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ. "ಸಾಯಲು ದೆಹಲಿ ಮಾಲಿನ್ಯವೇ ಸಾಕು, ಗಲ್ಲು ಏಕೆ?" ಎಂದು ಪ್ರಶ್ನೆ ಮಾಡಿದ್ದಾನೆ.

ವಕೀಲ ಎ. ಪಿ. ಸಿಂಗ್ ಮೂಲಕ ಅಕ್ಷಯ್ ಮಂಗಳವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. "ದೆಹಲಿ-ಎನ್‌ಸಿಆರ್ ಗ್ಯಾಸ್ ಚೇಂಬರ್ ನಂತೆ ಆಗಿವೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿಯೂ ಇದು ಸಾಬೀತಾಗಿದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ಗಲ್ಲು ಹಾಕುವವರನ್ನು ಹುಡುಕುವುದು ಸವಾಲಿನ ಕೆಲಸ! ಗಲ್ಲು ಹಾಕುವವರನ್ನು ಹುಡುಕುವುದು ಸವಾಲಿನ ಕೆಲಸ!

"ದೆಹಲಿ-ಎನ್‌ಸಿಆರ್‌ನಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಲುಷಿತ ಗಾಳಿ, ನೀರಿನಿಂದಾಗಿ ಜೀವಿತಾವಧಿ ಕಡಿಮೆಯಾಗುತ್ತಿದೆ. ಗಲ್ಲು ಶಿಕ್ಷೆ ವಿಧಿಸುವ ಅಗತ್ಯವೇನಿದೆ?" ಎಂದು ಗಲ್ಲು ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರಶ್ನೆ ಮಾಡಿದ್ದಾನೆ.

ವಾಯು ಮಾಲಿನ್ಯ ಹೊಗಲಾಡಿಸಲು ಹೋಮ ಮಾಡಿ ಎಂದ ಬಿಜೆಪಿ ಮುಖಂಡ ವಾಯು ಮಾಲಿನ್ಯ ಹೊಗಲಾಡಿಸಲು ಹೋಮ ಮಾಡಿ ಎಂದ ಬಿಜೆಪಿ ಮುಖಂಡ

supreme court

ಅಕ್ಷಯ್ ನಿರ್ಭಯಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವ 4ನೇ ಅಪರಾಧಿ. ಮುಕೇಶ್, ವಿನಯ್ ಮತ್ತು ಪವನ್ ಸಲ್ಲಿಸಿದ್ದ ಅರ್ಜಿಗಳನ್ನು ಈಗಾಗಲೇ ನ್ಯಾಯಾಲಯ ವಜಾಗೊಳಿಸಿದೆ.

ಹಳದಿ ಬಣ್ಣಕ್ಕೆ ತಾಜ್ ಮಹಲ್? ಪ್ರೇಮಸೌಧಕ್ಕೂ ವ್ಯಾಪಿಸಿದ ದೆಹಲಿ ಮಾಲಿನ್ಯಹಳದಿ ಬಣ್ಣಕ್ಕೆ ತಾಜ್ ಮಹಲ್? ಪ್ರೇಮಸೌಧಕ್ಕೂ ವ್ಯಾಪಿಸಿದ ದೆಹಲಿ ಮಾಲಿನ್ಯ

2018ರ ಜುಲೈನಲ್ಲಿ ನ್ಯಾಯಾಲಯ ಮೂವರು ಅಪರಾಧಿಗಳ ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿತ್ತು. ಅಪರಾಧಿಗಳ ಕ್ಷಮಾದಾನ ಅರ್ಜಿಯೂ ವಜಾಗೊಂಡಿದ್ದು, ಅವರನ್ನು ಡಿಸೆಂಬರ್ 16ರಂದು ಗಲ್ಲಿಗೇರಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.

2017ರ ಮೇನಲ್ಲಿ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆ ತೀರ್ಪನ್ನು ಪುನರ್ ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಸವೋಚ್ಚ ನ್ಯಾಯಾಲಯ ಈಗಾಗಲೇ ಹೇಳಿದೆ.

English summary
Akshay Nirbhaya case convict filed his review petition in the Supreme Court. Why him death penalty when his life is going to be short due to bad air and water in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X