ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4,299 ಕೋಟಿ ಹಣ ಹಂಚಿಕೊಂಡಿರುವ ನೀರವ್ ಮೋದಿ: ಇ.ಡಿ. ವರದಿ

|
Google Oneindia Kannada News

ನವದೆಹಲಿ, ಮೇ 25: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಿತರಿಸಿದ ಸಾಲ ಮರುಪಾವತಿ ಖಾತರಿ ಪತ್ರದ (ಎಲ್ಒಯು) ನಕಲಿಗಳನ್ನು ಬಳಸಿಕೊಂಡು ನೀರವ್ ಮೋದಿ 6,939.84 ಕೋಟಿ ಮೊತ್ತದಲ್ಲಿ 4,299 ಮೊತ್ತವನ್ನು ತನಗೆ, ತನ್ನ ಸಂಸ್ಥೆಗಳು ಮತ್ತು ಸಂಬಂಧಿಕರಿಗೆ ವರ್ಗಾಯಿಸಿದ್ದಾರೆ ಎಂಬುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆಹಚ್ಚಿದೆ.

ಯುಎಇ ಮತ್ತು ಹಾಂಗ್‌ಕಾಂಗ್‌ಗಳಲ್ಲಿನ ನಕಲಿ ಕಂಪೆನಿಗಳ ಮೂಲಕ ವಜ್ರದ ವ್ಯಾಪಾರಿ ನೀರವ್ ಮೋದಿ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಇ.ಡಿ. ಗುರುವಾರ ಸಲ್ಲಿಸಿರುವ ಚಾರ್ಜ್‌ಷೀಟ್‌ನಲ್ಲಿ ಆರೋಪಿಸಿದೆ.

ನೀರವ್ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮರಳಿ ಮಾತೃ ಕೇಡರ್‌ಗೆನೀರವ್ ಪ್ರಕರಣ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮರಳಿ ಮಾತೃ ಕೇಡರ್‌ಗೆ

ಇ.ಡಿ. ತನಿಖೆಯ ವರದಿ ಅನ್ವಯ ನೀರವ್, 1811 ಕೋಟಿ ರೂ. ಹಣವನ್ನು ಯುಎಇಯಲ್ಲಿರುವ ಒಂಬತ್ತು ನಕಲಿ ಕಂಪೆನಿಗಳ ಮೂಲಕ ತಮ್ಮ ಸಮೂಹ ಸಂಸ್ಥೆಗಳು, ಸಹೋದರಿ ಪೂರ್ವಿ ಮೋದಿ ಮತ್ತು ಆಕೆಯ ಪತಿ ಮಯಾಂಕ್ ಮೆಹ್ತಾ ಅವರಿಗೆ ವರ್ಗಾಯಿಸಿದ್ದಾರೆ.

Nirav Modi diverted Rs 4,299 crore to himself, family and firms ED chargesheet

ಪೂರ್ವಿ ಮೋದಿ ಮತ್ತು ಮಯಾಂಕ್ ಮೆಹ್ತಾ ಅವರನ್ನು ಸಹ ನೀರವ್ ಅವರೊಂದಿಗೆ ಆರೋಪಿಗಳನ್ನಾಗಿ ಇ.ಡಿ. ಹೆಸರಿಸಿದೆ. ಮೆಹ್ತಾ ಅವರು ರೋಸಿ ಬ್ಲೂ ಗ್ರೂಪ್‌ನ ವಜ್ರದ ವ್ಯಾಪಾರಿ ರಸೆಲ್ ಮೆಹ್ತಾ ಅವರ ಸಂಬಂಧಿಯಾಗಿದ್ದಾರೆ.

ಒಟ್ಟು 14 ಸಾವಿರ ಪುಟಗಳ ದೂರು ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಎಲ್‌ಒಯು ನಿಧಿಯಲ್ಲಿನ 2,138 ಕೋಟಿ ಹಣವನ್ನು ಪರೋಕ್ಷವಾಗಿ ತಾವು ನಿಯಂತ್ರಿಸುವ ಹಾಂಗ್‌ಕಾಂಗ್‌ನ ಆರು ನಕಲಿ ಕಂಪೆನಿಗಳ ಮೂಲಕ ವಿವಿಧ ಸಮೂಹ ಕಂಪೆನಿಗಳಿಗೆ ವರ್ಗಾವಣೆ ಮಾಡಿದ್ದಾರೆ.

ಇದಲ್ಲದೆ, ಕನಿಷ್ಠ 137 ಕೋಟಿ ಮೊತ್ತವನ್ನು ಭಾರತದಲ್ಲಿನ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ. 1,811 ಕೋಟಿಯಲ್ಲಿ 786 ಕೋಟಿಯನ್ನು ಪೂರ್ವಿ ಮತ್ತು ಮಯಾಂಕ್ ಅವರಿಗೆ, 341 ಕೋಟಿ ರೂ ಹಣವನ್ನು ಪೂರ್ವಿ ಮೋದಿ ನಡೆಸುತ್ತಿರುವ ಲಿಲ್ಲಿ ಮೌಂಟೇನ್ ಇನ್ವೆಸ್ಟ್‌ಮೆಂಟ್‌ ಕಂಪೆನಿಗೆ, 439 ಕೋಟಿ ಮೊತ್ತವನ್ನು ಭಾರತದಲ್ಲಿರುವ ಮೋದಿ ಅವರ ಕಂಪೆನಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 239 ಕೋಟಿ ಹಣವನ್ನು ಮೋದಿ ತಮಗೇ ವರ್ಗಾಯಿಸಿಕೊಂಡಿದ್ದಾರೆ.

205 ಕೋಟಿ ಹಣವನ್ನು ಮಹಯಾಂಕ್ ಮೆಹ್ತಾ ಅವರಿಗೆ ನೀಡಲಾಗಿತ್ತು. ಅದನ್ನು ಅವರು ತಮ್ಮ ಪತ್ನಿಗೆ ಕಾಣಿಕೆಯಾಗಿ ನೀಡಿದ್ದರು. ಉಳಿದ 581 ಕೋಟಿ ಹಣವನ್ನು ಪೂರ್ವಿ ಮೋದಿ ಮಾಲೀಕತ್ವದ ದುಬೈ ಮೂಲದ ಕಂಪೆನಿಗೆ ವರ್ಗಾಯಿಸಲಾಗಿದೆ. ಈ ಕಂಪೆನಿ ಬಳಿಕ ನೀರವ್ ಮೋದಿಯ ಹಾಂಗ್‌ಕಾಂಗ್‌ನಲ್ಲಿರುವ ಫೈರ್‌ಸ್ಟಾರ್ ಹೋಲ್ಡಿಂಗ್ಸ್‌ಗೆ ಹೂಡಿಕೆ ಮಾಡಿತ್ತು.

ಇ.ಡಿ.ಯು ಮುಂಬೈ ಕೋರ್ಟ್‌ನಲ್ಲಿ ಚಾರ್ಜ್‌ಷೀಟ್ ಸಲ್ಲಿಕೆ ಮಾಡಿದ್ದು, ಅದರಲ್ಲಿ ನೀರವ್ ತಂದೆ ದೀಪಕ್ ಮೋದಿ, ಸಹೋದರರಾದ ನೀಶಲ್ ಮೋದಿ ಮತ್ತು ನೆಹಾಲ್ ಮೋದಿ ಅವರನ್ನು ಹಣ ವಂಚನೆ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಿದೆ.

English summary
Enforcement Directorate (ED) had filed chargesheet of 14,000 pages to Mumbai court against fugitive diamond jeweller Nirav Modi on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X