ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ನಿಪಾಹ್ ದೃಢ, ತಮಿಳುನಾಡು, ರಾಜಸ್ತಾನದಲ್ಲೂ ಹೈ ಅಲರ್ಟ್

|
Google Oneindia Kannada News

ತಿರುವನಂತಪುರಂ, ಜೂನ್ 7: ಕೇರಳದಲ್ಲಿ ನಿಪಾಹ್ ವೈರಸ್ ದೃಢವಾಗುತ್ತಿದ್ದಂತೆ ತಮಿಳುನಾಡು ಹಾಗೂ ರಾಜಸ್ತಾನ ಆರೋಗ್ಯ ಇಲಾಖೆ ರೆಡ್ಡ ಅಲರ್ಟ್ ಘೋಷಿಸಿದೆ.

ಹಾಗೆಯೇ ನಿಪಾಹ್ ವೈರಸ್ ಗುಣಲಕ್ಷಣಗಳು, ನಿಪಾಹ್ ವೈರಸ್‌ನಿಂದ ದೂರವಿರಲು ಏನು ಮಾಡಬೇಕು, ಯಾವುದರಿಂದ ಈ ರೋಗ ಹರಡುತ್ತದೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ.

ನಿಪಾಹ್ ವೈರಸ್‌ನಿಂದ ಬಚಾವಾಗಲು ಏನು ಮಾಡಬೇಕು ? ಏನು ಮಾಡಬಾರದು? ನಿಪಾಹ್ ವೈರಸ್‌ನಿಂದ ಬಚಾವಾಗಲು ಏನು ಮಾಡಬೇಕು ? ಏನು ಮಾಡಬಾರದು?

ಜ್ವರ, ಕಫ, ಶೀತ, ತಲೆನೋವು ಈ ರೀತಿಯ ಯಾವುದೇ ಲಕ್ಷಣಗಳು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಿದೆ. ಇನ್ನು ಮುಧುರೈನ ರಾಜಾಜಿ ಆಸ್ಪತ್ರೆಯಲ್ಲಿ ನಿಪಾಹ್ ವೈರಸ್ ಪೀಡಿತರಿಗಾಗಿಯೇ ಪ್ರತ್ಯೇಕ ವಾರ್ಡ್ ಕಲ್ಪಿಸಲಾಗಿದೆ. ಒಂದು ವಾರ್ಡಿನಲ್ಲಿ 33 ಹಾಸಿಗೆಗಳಿರುತ್ತವೆ.

Nipah virus high alert in Tamil Nadu and Rajsthan

ಕನ್ಯಾಕುಮಾರಿ, ನೀಲಗಿರಿ, ಕೊಯಮತ್ತೂರ್, ದಿಂಡಿಗಲ್, ತಿರುನೇಲ್‌ವೇಲಿ, ಥೇನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ನಿಪಾಹ್ ಜ್ವರವು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುವ ಅಪಾಯಕಾರಿ ಸೋಂಕಾಗಿದೆ.ಮೊದಲು 1998ರಲ್ಲಿ ಮಲೇಷ್ಯಾದಲ್ಲಿ ನಿಪಾಹ್ ವೈರಸ್ ಕಾಣಿಸಿಕೊಂಡಿತ್ತು.

2011ರಲ್ಲಿ ಬಾಂಗ್ಲಾದೇಶದಲ್ಲೂ ಈ ಸೋಂಕು ಹರಡಿತ್ತು. ಈಗ ವೈರಸ್ ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಡಿದೆ.

English summary
Health department of two states issued guidelines abou Nipah virus in Tamil Nadu and Rajsthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X