ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪರೀತ ಜ್ವರ: ನಿಪಾಹ್‌ ವೈರಸ್‌ಗೆ ಕೇರಳದಲ್ಲಿ 9 ಮಂದಿ ಬಲಿ

By Nayana
|
Google Oneindia Kannada News

ಬೆಂಗಳೂರು,ಮೇ 21: ಕೇರಳದಲ್ಲಿ 9 ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನಿಪಾಹ್ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕ ಜಿಜ್ಞಾಸೆಗೆ ಒಳಗಾಗಿದೆ.

ಮೂಲತಃ ಮಲೇಶಿಯಾದ ನಿಪಾಹ್ ಸೋಂಕಿಗೆ ಈವರೆಗೆ ಲಸಿಕೆ‌ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಆತಂಕಕ್ಕೆ‌ ಮೂಲ‌ ಕಾರಣ. ನಿಪಾಹ್ ಅಂದರೆ ಏನು, ಅದರ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ? ಮತ್ತಿತರ ಮಹತ್ವದ ಮಾಹಿತಿ ಇಲ್ಲಿದೆ.

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?

ಮಾರಕ ನಿಪಾಹ್ ವೈರಸ್‌ ಸೋಂಕಿನಿಂದ ಕೇರಳದಲ್ಲಿ ಈವರೆಗೆ 9 ಜನ ಮೃತಪಟ್ಟಿದ್ದು, ಕೇರಳ ರಾಜ್ಯಾದ್ಯಂತ ಆರೋಗ್ಯ ಸಂಬಂಧಿ ಹೈ ಅಲರ್ಟ್ ಘೋಷಿಸಲಾಗಿದೆ. ಒಂದೇ ಕುಟುಂಬದ ಮೂವರು ಸೇರಿದಂತೆ ಇಲ್ಲಿಯವರೆಗೆ 9 ಜನ ಸಾವನ್ನಪ್ಪಿದ್ದು ಕೇಂದ್ರ ಸರ್ಕಾರ ಈ ಕುರಿತಂತೆ ಎನ್‌ಸಿಬಿಸಿ ತಂಡವನ್ನು ರವಾನಿಸಿದೆ.

ಈ ಮಧ್ಯೆ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡ ಕೇರಳರಾಜ್ಯದೊಂದಿಗೆ ಕೇಂದ್ರ ಸತತ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಇದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗೆ ತರಹೇವಾರಿ ವರದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರಕಾರ, ''ವದಂತಿಗಳಿಗೆ ಕಿವಿಗೊಡಬೇಡಿ. ಧೈರ್ಯವಾಗಿರಿ. ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,'' ಎಂದು ಜನತೆಗೆ ಮನವಿ ಮಾಡಿದೆ.

ನಿಪಾಹ್ ಎಂದರೇನು, ಹೇಗೆ ಹರಡುತ್ತದೆ

ನಿಪಾಹ್ ಎಂದರೇನು, ಹೇಗೆ ಹರಡುತ್ತದೆ

ನಿಪಾಹ್ ಝೂನೋಸಿಸ್ ಮಾದರಿಯ ವೈರಾಣಾಗಿದ್ದು, ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಹಲುವ ಬಗೆಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ.

ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಇದು ಹರಡುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಪಾಹ್ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಲ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ.

ಮಲೇಶಿಯಾದಲ್ಲಿ ಪತ್ತೆಯಾಗಿದ್ದು ಈ ಮಾರಕ ಸೋಂಕು

ಮಲೇಶಿಯಾದಲ್ಲಿ ಪತ್ತೆಯಾಗಿದ್ದು ಈ ಮಾರಕ ಸೋಂಕು

ಇನ್ನು ಈ ಮಾರಕ ನಿಪಾಹ್ ವೈರಾಣುವನ್ನು ಮೊದಲ ಬಾರಿಗೆ 1998ರಲ್ಲಿ ಮಲೇಷ್ಯಾದಲ್ಲಿ ಗುರುತಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಈ ಸೋಂಕು ಹಂದಿಗಳ ಮುಖಾಂತರ ಹಬ್ಬುತ್ತಿತ್ತು. ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌ ಮಯೋಕಾರ್ಡಿಟಿಸ್‌ (ಎನ್‌ಇಎಂ) ಮಾದರಿಯ ವೈರಸ್ ಆಗಿರುವ ನಿಪಾಹ್, ಹೆಂಡ್ರಾ ವೈರಾಣುವನ್ನೇ ಹೋಲುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಅಂದೇ ವೈದ್ಯರು ಈ ವೈರಾಣು, ಹಂದಿ, ಕೋಳಿಯಂತಹ ಮಾಂಸಾಹಾರದಿಂದ ಈ ವೈರಾಣು ಹರಡಲ್ಪಡುತ್ತದೆ ಎಂದು ಶಂಕಿಸಿದ್ದರು.

ವೈದ್ಯಕೀಯ ಲೋಕಕ್ಕೆ ಸವಾಲಾದ ನಿಪಾಹ್

ವೈದ್ಯಕೀಯ ಲೋಕಕ್ಕೆ ಸವಾಲಾದ ನಿಪಾಹ್

ಈ ನಿಪಾಹ್ ವೈರಾಣು 1998ರಲ್ಲೇ ಪತ್ತೆಯಾಗಿದ್ದರೂ, ಈ ವೈರಾಣುವಿಗೆ ಈ ವರೆಗೂ ಲಸಿಕೆಯನ್ನೇ ಕಂಡು ಹಿಡಿಯಲಾಗಿಲ್ಲ. ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ನಿಪಾಹ್ ವೈರಾಣುವಿಗೆ ಲಸಿಕೆ ತಯಾರಿಸಲು ಸಾಕಷ್ಟು ವೈದ್ಯಕೀಯ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆಯಾದರೂ ಲಸಿಕೆ ಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ ಎನ್ನಲಾಗಿದೆ.

ನಿಪಾಹ್ ಸೋಂಕು ತಗುಲಿದರೆ ಗೊತ್ತಾಗುವುದು ಹೇಗೆ

ನಿಪಾಹ್ ಸೋಂಕು ತಗುಲಿದರೆ ಗೊತ್ತಾಗುವುದು ಹೇಗೆ

ನಿಪಾಹ್ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ. ಕೆಲ ಪ್ರಕರಣಗಳಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರುವ ಅಪಾಯವಿದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ನಿಪಾಹ್‌ದಿಂದ ದೂರವಿರುವುದು ಹೇಗೆ?

ನಿಪಾಹ್‌ದಿಂದ ದೂರವಿರುವುದು ಹೇಗೆ?

ಯಾವುದೇ ರೀತಿಯ ಸೋಂಕುಗಳಾದರೂ ಅದರ ನಿರ್ಮೂಲನೆ ಅಥವಾ ನಿಯಂತ್ರಣ ಮನಷ್ಯನ ರೋಗ ನಿರೋಧಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥಗಳು, ಡಯಟ್ ಗಳನ್ನು ಪಾಲಿಸುವುದು ಉ

ತ್ತಮ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹರ್ಬಲ್ ಟೀ (ಗಿಡಮೂಲಿಕಾ ಚಹಾ) ಅಥವಾ ವಿವಿಧ ಬಗೆಯ ಕಷಾಯಗಳನ್ನು ಆಗಾಗ ಸೇವಿಸುತ್ತಿರಬೇಕು.

ಯಾರಿಗೆ ಅಪಾಯ: ಈ ವೈರಸ್‌ ಮನುಷ್ಯರಿಗಷ್ಟೇ ಅಲ್ಲದೆ ಹಂದಿಗಳಿಗಳು ಹಾಗೂ ಇನ್ನಿತರೆ ಸಾಕು ಪ್ರಾಣಿಗಳಿಗೆ ಹರಡಬಲ್ಲದು.

English summary
Nipah virus has claimed 9 lives and many people were serious condition since Sunday in Kozhikode district of Kerala. The union government has sent NCDC team to monitor the situation incoordination with Kerala government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X