ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಪಾಹ್ ಪ್ರಕರಣದಲ್ಲಿ ಗಣನೀಯ ಇಳಿಕೆ: ಕೇರಳ ನಿರಾಳ

|
Google Oneindia Kannada News

ಕೋಞಕ್ಕೊಡ್, ಜೂನ್ 11: ಮಾರಣಾಂತಿಕ ನಿಪಾಹ್ ವೈರಸ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕೇರಳಿಗರಲ್ಲಿ ನಿರಾಳವನ್ನುಂಟು ಮಾಡಿದೆ.

ಕೊಞಕ್ಕೊಡ್ ಮತ್ತು ಮಲಪ್ಪುರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಈ ರೋಗ ಒಂದು ಜಾತಿಯ ಬಾವಲಿಗಳಿಂದ ಹರಡುತ್ತದೆ ಎನ್ನಲಾಗಿತ್ತು. ಆದರೆ ಹಲವು ಸಂಶೋಧನೆಗಳ ನಂತರ ಇದು ಬಾವಲಿಗಳಿಂದ ಬರುವುದಲ್ಲ ಎಂದು ಸಾಬೀತಾಗಿತ್ತು. ಇದುವರೆಗೂ ಸ್ಪಷ್ಟ ಮಾಹಿತಿ, ಪರಿಹಾರವೂ ಇಲ್ಲದೆ ಕೇರಳದಲ್ಲಿ ಭೀತಿ ಎಬ್ಬಿಸಿದ್ದ ನಿಪಾಹ್ ಸೋಂಕು ಇದೀಗ ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ.

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?

ಇಲ್ಲಿನ ಸರ್ಕಾರ ‍ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇ ಸೋಂಕಿನ ನಿಯಂತ್ರಣಕ್ಕೆ ಕಾರಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕೇರಳದಲ್ಲಿ ಇದುವರೆಗೂ ನಿಪಾಹ್ ಸೋಂಕಿನಿಂದ 15 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

Nipah Virus cases come under control in Kerala

ಇತ್ತೀಚೆಗೆ ನಿಪಾಹ್ ಲಕ್ಷಣವನ್ನೇ ಹೋಲುವ ಹಲವು ಪ್ರಕರಣಗಳಲ್ಲಿ ರೋಗಿಯ ರಕ್ತಪರೀಕ್ಷೆ ಮಾಡಿದ ವೈದ್ಯರು ಇವು ನಿಪಾಹ್ ಪ್ರಕರಣವನ್ನ ಎಂದಿವೆ. ಆದ್ದರಿಂದ ನಿಪಾಹ್ ಸೋಂಕು ನಿಯಂತ್ರಣಕ್ಕೆ ಬಂದು ಕೇರಳಿಗ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಇಲ್ಲಿನ ಸರ್ಕಾರ ಹೇಳಿದೆ.

ಮಲೇಶಿಯಾದ ನಿಪಾಹ್ ಎಂಬ ಊರಿನಲ್ಲಿ ಈ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ರೋಗಕ್ಕೆ ಈ ಹೆಸರು! ಒಂದು ರೀತಿಯ ಬಾವಲಿಗಳಿಂದ ಈ ರೋಗ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಸಾಮಾನ್ಯ ಜ್ವರದಂತೆ ಆರಂಭವಾಗುವ ಲಕ್ಷಣ ನಂತರ ರೋಗಿಯನ್ನು ಸಾವಿನಂಚಿಗೂ ಕೊಂಡೊಯ್ಯುತ್ತಿತ್ತು.

English summary
Nipah Virus: Kerala people feel relief after deadly Nipah virus cases come under control. Government takes precautionary measures to control the virus. Even though more than 15 people died due to this deadly virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X