• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಪಾಹ್‌ದಿಂದ ಕೇರಳ ಕಂಗಾಲು: ನೀರಿಗಾಗಿ ಶಿಮ್ಲಾ ತತ್ತರ

By Nayana
|

ಬೆಂಗಳೂರು, ಜೂನ್ 1: ಕೇರಳದಲ್ಲಿ ನಿಪಾಹ್ ವೈರಸ್‌ನಿಂದ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಎಷ್ಟೇ ಅಭಯ ನೀಡಿದರೂ ಕರ್ನಾಟದ ಜನರಲ್ಲಿ ಅದರ ಭೀತಿ ಇನ್ನೂ ಹೋದಂತಿಲ್ಲ.

ಹೀಗಿರುವಾಗ ಕೋಯಿಕ್ಕೋಡ್‌ನ ಅತಿ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡ ಪೆರಾಂಬ್ರದಲ್ಲಿ ತಜ್ಞರ ತಂಡವೊಂದು ಹಣ್ಣುಗಳನ್ನು ತಿನ್ನುತ್ತಿದ್ದ ಬೃಹತ್ ಗಾತ್ರದ ಬಾವಲಿಯನ್ನು ಸೆರೆಹಿಡಿದಿದ್ದಾರೆ.

ಕರ್ನಾಟಕದಲ್ಲಿ ನಿಪಾಹ್ ಇಲ್ಲ ನಿಶ್ಚಿಂತೆಯಿಂದಿರಿ: ಇಲಾಖೆ ಅಭಯ

ಇನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆಗೆ ಸಭೆ ನಡೆಸಿ ನೀವು ನಿಮ್ಮ ಕರ್ತವ್ಯವನ್ನು ಯಾರದ್ದೇ ಹಸ್ತಕ್ಷೇಪವಿಲ್ಲದೆ ನಿಭಾಯಿಸಬಹುದು, ನಿಮ್ಮ ಕಾರ್ಯಕ್ಕೆ ಸರ್ಕಾರದ ಬೆಂಬಲವಿರುತ್ತದೆ ಆದರೆ ರಾಜಕೀಯ ಹಸ್ತಕ್ಷೇಪವಲ್ಲ ಎಂದು ಭರವಸೆ ನೀಡಿದ್ದಾರೆ.

ಇನ್ನು ಶಿಮ್ಲಾದಲ್ಲಿ ಒಂದೆಡೆ ನೀರಿಗೆ ಹಾಹಾಕಾರ ಇನ್ನೊಂದೆಡೆ ಜ್ವಾಲಾಮುಖಿ ಎದ್ದಿದೆ, ಅಲ್ಲಿನ ಜನರು ಒಂದು ಗುಡುಕು ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಗಟ್ಟಲೆ ಟ್ಯಾಂಕರ್ ನೀರಿಗಾಗಿ ಕಾದುನಿಂತು ಕುಡಿಯುವ ನೀರು ಪಡೆದುಕೊಳ್ಳುತ್ತಿದ್ದಾರೆ.ಪ್ರಧಾನಿ ನರೇಂದ್ರಮೋದಿಯವರು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿ ಅಲ್ಲಿನ ಭಾರತೀಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಕುಂಭದ್ರೋಣ ಮಳೆ-ನೆರೆಗೆ ತತ್ತರಿಸಿ ಹೋಯಿತು ಮಂಗಳೂರು!

ಇನ್ನು ರಂಜಾನ್ ಪ್ರಯುಕ್ತ ಮುಸ್ಲಿಂಮರು ಮೆಕ್ಕಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಹೋವಾದಲ್ಲಿ ಜ್ವಾಲಾಮುಖಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲಿನ ಸಾಕಷ್ಟು ಮಂದಿ ಇದೀಗ ನಿರಾಶ್ರಿತರಾಗಿದ್ದಾರೆ. ಹೀಗೆ ದೇಶ ವಿದೇಶದಲ್ಲಿ ಗುರುವಾರ ನಡೆದ ಪ್ರಮುಖ ಘಟನೆಗಳ ವಿವರಗಳನ್ನು ಚಿತ್ರ ಸಮೇತ ಇಲ್ಲಿ ನೋಡಬಹುದಾಗಿದೆ.

ಪೆರಾಂಬ್ರಾದಲ್ಲಿ ಹಣ್ಣು ತಿನ್ನುತ್ತಿದ್ದ ಬಾವುಲಿ ಸೆರೆ ಹಿಡಿದ ತಜ್ಞರು

ಪೆರಾಂಬ್ರಾದಲ್ಲಿ ಹಣ್ಣು ತಿನ್ನುತ್ತಿದ್ದ ಬಾವುಲಿ ಸೆರೆ ಹಿಡಿದ ತಜ್ಞರು

ತಜ್ಞರ ತಂಡವನ್ನು ಕೋಯಿಕ್ಕೋಡ್ ಹಾಗೂ ಪೆರಾಂಬ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಪಾಹ್ ವೈರಸ್ ಕುರಿತು ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ, ಹಣ್ಣನನ್ನು ತಿನ್ನುತ್ತಿದ್ದ ಬಾವುಲಿಯನ್ನು ಸೆರೆಹಿಡಿದ್ದಾರೆ. ಕೇರಳದಲ್ಲಿ ನಿಪಾಹ್ ವೈರಸ್‌ನಿಂದ ಈಗಾಘಲೇ 12ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಿಎಂ ಸಭೆ

ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಿಎಂ ಸಭೆ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೊಲೀಸ್ ಅವರು ತಮ್ಮ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸಬಹುದು, ಅದರಲ್ಲಿ ರಾಜಕೀಯ ಹಸ್ತಕ್ಷೇಪವಿರುವುದಿಲ್ಲ ಎಂದು ಅಭಯ ನೀಡಿದ್ದಾರೆ.

ಪದವಿ ಮುಗಿಸಿದ ಸಂತಸದಲ್ಲಿ ವಿದ್ಯಾರ್ಥಿಗಳು

ಪದವಿ ಮುಗಿಸಿದ ಸಂತಸದಲ್ಲಿ ವಿದ್ಯಾರ್ಥಿಗಳು

ಅಮೃತಸರದ ಗುರು ನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ನಡೆದ 44 ನೇ ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ

ಪವಿತ್ರ ರಂಜಾನ್ ಪ್ರಯುಕ್ತ ಮೆಕ್ಕಾ ಯಾತ್ರೆ

ಪವಿತ್ರ ರಂಜಾನ್ ಪ್ರಯುಕ್ತ ಮೆಕ್ಕಾ ಯಾತ್ರೆ

ಮುಸನ್ಮಾಲನ ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಮೆಕ್ಕಾಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರ ಪವಿತ್ರಸ್ಥಾನವಾದ ಕಾಬಾದ ಸುತ್ತ ಮುಸ್ಲಿಂ ಬಾಂಧವರು ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ.

ಮಗುವನ್ನು ಬೆಂಕಿಯಿಂದ ಪಾರುಮಾಡಿದ ತಾಯಿ

ಮಗುವನ್ನು ಬೆಂಕಿಯಿಂದ ಪಾರುಮಾಡಿದ ತಾಯಿ

ರಾಕ್ಸ್‌ಬರಿಯಲ್ಲಿ ಮನೆಯೊಂದರಲ್ಲಿ ಅಗನಿ ಅವಘಡ ಸಂಭವಿಸಿತ್ತು, ಈ ಸಂದರ್ಭದಲ್ಲಿ ತಾಯಿ ತನ್ನ ಮಗುವನ್ನು ಬೆಂಕಿಯಿಂದ ರಕ್ಷಿಸಿ ರಕ್ಷಣಾ ಸಿಬ್ಬಂದಿಗೆ ನೀಡುತ್ತಿರುವ ದೃಶ್ಯವನ್ನು ನೀವು ಇಲ್ಲಿ ನೋಡಬಹುದು, ನಂತರ ಮಗುವಿನ ಜತೆಗೆ ತಾಯಿಯನ್ನು ಕೂಡ ರಕ್ಷಣೆ ಮಾಡಲಾಗಿದೆ.

ಬ್ಯಾಂಕ್ ನೌಕರರ ಮುಷ್ಕರ: ಭದ್ರತಾ ಸಿಬ್ಬಂದಿಯಿಂದ ಬ್ಯಾಂಕ್ ಪರಿಶೀಲನೆ

ಬ್ಯಾಂಕ್ ನೌಕರರ ಮುಷ್ಕರ: ಭದ್ರತಾ ಸಿಬ್ಬಂದಿಯಿಂದ ಬ್ಯಾಂಕ್ ಪರಿಶೀಲನೆ

ವೇತನ ಪರಿಷ್ಕರಣೆ ಹಾಗೂ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್‌ಗಳು ಎರಡು ದಿನ ಮುಷ್ಕರಕ್ಕೆ ಕರೆ ನೀಡಿತ್ತು, ಇದರ ಭಾಗವಾಗಿ ಗುರುವಾರ ಅಲಹಾಬಾದ್‌ನ ಬ್ಯಾಂಕ್‌ ಒಂದರಲ್ಲಿ ಭದ್ರತಾ ಸಿಬ್ಬಂದಿ ಬ್ಯಾಂಕ್ ಒಳಗೆ ಪರಿಶೀಲನೆ ನಡೆಸುತ್ತಿರುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Despite clarification from depart of health in Karnataka people afraid of Nipah virus and in Kerala threat of the virus still haunting. In Shimla people striving for drinking water. So, here is the story if different from part of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more