ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸ್ ಸೇರಿದ ಯುವತಿ, ತನಿಖೆಗಾಗಿ ಸುಪ್ರಿಂ ಕೋರ್ಟ್ ಮೊರೆ ಹೋದ ತಾಯಿ

By Sachhidananda Acharya
|
Google Oneindia Kannada News

ನವದೆಹಲಿ, ಅಕ್ಟೋಬರ್ 9: ಐಸಿಸ್ ಉಗ್ರ ಸಂಘಟನೆ ಸೇರಿದ್ದ ಯುವತಿಯ ತಾಯಿಯೊಬ್ಬರು ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಕೋರಿ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. 'ಕೇರಳ ಐಸಿಸ್ ಮತ್ತು ಜಿಹಾದಿ ಚಟುವಟಿಕೆಗಳ ತಾಣ' ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ.

2016ರಲ್ಲಿ ನಿಮಿಷಾ ಎಂಬಾಕೆ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿ ಐಸಿಸ್ ಸಂಘಟನೆ ಸೇರಿದ್ದಳು. ಈ ಸಂಬಂಧ ಆಕೆಯ ತಾಯಿ ಬಿಂದು ಸಂಪಂತ್ ಇದೀಗ ತನಿಖೆಗೆ ಕೋರಿ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ವಿಚಿತ್ರವೆಂದರೆ 'ಲವ್ ಜಿಹಾದ್' ಎಂಬುದು ಇಲ್ಲವೇ ಇಲ್ಲ ಎಂದು ಕೇರಳ ಸರ್ಕಾರ ಸುಪ್ರಿಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ ದಿನವೇ ಈ ಪ್ರಕರಣ ದಾಖಲಾಗಿದೆ.

NIA should probe 'Love Jihad', Kerala's victim mother moves SC

ಕೇರಳದಲ್ಲಿ ನಡೆದಿರುವ ಒತ್ತಾಯಪೂರ್ವಕ ಮತಾಂತರ ಪ್ರಕರಣವನ್ನು ಎನ್ಐಎ, ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಮತ್ತು ಗುಪ್ತಚರ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಯುವತಿಯ ತಾಯಿ ಅರ್ಜಿ ಸಲ್ಲಿಸಿದ್ದಾರೆ.

ಇಂದು ಈ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರಿಂ ಕೋರ್ಟ್ ಅಕ್ಟೋಬರ್ 30ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ನಿಮಿಷಾ 2016ರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿ ಫಾತಿಮಾ ಎಂದು ಹೆಸರು ಬದಲಾಯಿಸಿದ್ದಳು. ನಂತರ ಕ್ರಿಶ್ಚಿಯನ್ ಧರ್ಮದಿಂದ ಮತಾಂತರ ಹೊಂದಿದ್ದ ಬೆಕ್ಸೆನ್ ನನ್ನು ಮದುವೆಯಾಗಿದ್ದಳು. 2016ರಲ್ಲಿ ಇವರಿಬ್ಬರು ನಾಪತ್ತೆಯಾಗಿದ್ದು ಸದ್ಯ ಐಸಿಸ್ ಸಂಘಟನೆ ಸೇರಿ ಅಫ್ಘಾನಿಸ್ತಾನದ ಕೊರಾಸೆನ್ ಪ್ರಾಂತ್ಯದಲ್ಲಿ ಇದ್ದಾರೆ ಎನ್ನಲಾಗಿದೆ.

English summary
Bindu Sampath, mother of Nimisha, a Hindu woman who converted to Islam and had gone missing to join the ISIS in 2016, has approached the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X