ಪುಲ್ವಾಮಾ ದಾಳಿ ಬಗ್ಗೆ ಜೈಷ್ ಉಗ್ರನಿಂದ ಹೊರಬಿತ್ತು ಸ್ಫೋಟಕ ಮಾಹಿತಿ
ನವದೆಹಲಿ, ಫೆಬ್ರವರಿ 29: ಪುಲ್ವಾಮಾ ದಾಳಿಗೆ ಬೇಕಾದ ಸ್ಫೋಟಕಗಳನ್ನು ಉಗ್ರರು ಆನ್ಲೈನ್ನಲ್ಲಿ ಆರ್ಡರ್ ಮಾಡುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.
ಎನ್ಐಎ ಬಂಧಿಸಿರುವ ಜೈಷ್ ಉಗ್ರನ ವಿಚಾರಣೆ ಸಂದರ್ಭದಲ್ಲಿ ಈ ಮಾಹಿತಿ ಲಭ್ಯವಾಗಿದೆ.40 ಯೋಧರು ಹುತಾತ್ಮರಾದ ಪುಲ್ವಾಮ ಕಹಿ ಘಟನೆಗೆ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿತ್ತು.
ಪುಲ್ವಾಮಾ ದಾಳಿ ಆರೋಪಿಗೆ ಜಾಮೀನು ಸಿಕ್ಕಿದೆ ಎಂಬುದು ಸುಳ್ಳು ಸುದ್ದಿ
ಪಾಕಿಸ್ತಾನ ಮೂಲದ ಜೈಷ್-ಎ-ಮೊಹ್ಮದ್ ಸಂಘಟನೆಯ ಶಕೀರ್ ಬಶೀರ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿ ವಿಚಾರಣೆ ನಡೆಸಿತ್ತು. ಈ ವೇಳೆ ಆತ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾನೆ.
ಬಶೀರ್ಗೆ 22 ವರ್ಷ ವಯಸ್ಸು. ಈತ ಅತ್ಯಾಧುನಿಕ ಬಾಂಬ್ ತಯಾರಿಸಲು ಅಗತ್ಯವಿದ್ದ ಬ್ಯಾಟರಿ ಹಾಗೂ ಅಮೋನಿಯಂ ನೈಟ್ರೇಟ್ ಅನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದ. ಬಾಂಬ್ ತಯಾರಿಸಿ ಅದನ್ನು ಕಾರಿನಲ್ಲಿ ಇರಿಸಿ, ಡ್ರೈವರ್ ಪಕ್ಕದ ಸೀಟ್ನಲ್ಲಿ ಕೂತಿದ್ದ. ಆದಿಲ್ ಅಹ್ಮದ್ ಕಾರು ಚಲಾಯಿಸುತ್ತಿದ್ದ.
ಬಾಂಬ್ ತಯಾರಿಸಲು ಬೇಕಾದ ಬಹುತೇಕ ವಸ್ತುಗಳನ್ನು ಆನ್ಲೈನ್ ಮೂಲಕವೇ ಆರ್ಡರ್ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಕಾರು ಸ್ಫೋಟಗೊಳ್ಳುವುದಕ್ಕೂ 500 ಮೀಟರ್ ದೂರದಲ್ಲೇ ಬಶೀರ್ ಇಳಿದುಕೊಂಡಿದ್ದ.
ಈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಕಮ್ರಾನ್ ಹೆಸರಿನ ಉಗ್ರನೂ ಭಾಗಿಯಾಗಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.