ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದಕರೊಂದಿಗೆ ನಂಟು: ಕರ್ನಾಟಕದ ಯುವಕರ ಮೇಲೆ ಎನ್‌ಐಎ ಕೇಸ್

|
Google Oneindia Kannada News

ನವದೆಹಲಿ, ಜನವರಿ 10: ಕತಾರ್‌ನಲ್ಲಿ ನೆಲೆಸಿರುವ ಕೇರಳ ಮತ್ತು ಕರ್ನಾಟಕದ 7-8 ಯುವಕರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರಕರಣ ದಾಖಲಿಸಿದೆ.

ಈ ಯುವಕರು ಇಸ್ಲಾಮಿಕ್ ಸ್ಟೇಟ್‌ ಜೊತೆ ನಂಟು ಹೊಂದಿರುವ ಜುಂಡ್ ಅಲ್-ಅಕ್ಸಾ ಮತ್ತು ಜಭಾತ್ ಉಲ್-ನುಸ್ರಾ ಉಗ್ರರ ಸಂಘಟನೆಗಳನ್ನು ಸೇರಿಕೊಳ್ಳಲು 2013ರಲ್ಲಿ ಸಿರಿಯಾಕ್ಕೆ ಹೊರಡಲು ಸಿದ್ಧತೆ ನಡೆಸಿದ್ದರು ಅಥವಾ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.

ಗೃಹಸಚಿವಾಲಯದಿಂದ ಜಮ್ಮು-ಕಾಶ್ಮೀರದ ಬಗ್ಗೆ ಸ್ಫೋಟಕ ಮಾಹಿತಿಗೃಹಸಚಿವಾಲಯದಿಂದ ಜಮ್ಮು-ಕಾಶ್ಮೀರದ ಬಗ್ಗೆ ಸ್ಫೋಟಕ ಮಾಹಿತಿ

ಕತಾರ್‌ನಲ್ಲಿ ನೆಲಸಿರುವ ಈ ಯುವಕರು ಉಗ್ರ ಸಂಘಟನೆ ಸೇರಿಕೊಳ್ಳುವಂತೆ ಪ್ರಚೋದನೆಗೆ ಒಳಗಾಗಿದ್ದರು. ಕೇರಳದ ಕೆಲವು ಯುವಕರು ಐಎಸ್ ಸೇರಲು ಪ್ರಯತ್ನಿಸಿದ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ ಕತಾರ್‌ನಲ್ಲಿ ನೆಲೆಸಿರುವ ಈ ಯುವಕರ ಚಟುವಟಿಕೆ ಬಗ್ಗೆ ಮಾಹಿತಿ ದೊರಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

NIA registered case against youths from Karnataka and Kerala alleged ISIS connection in Syria

ಈ ಎಲ್ಲ ಯುವಕರ ಗುರುತು ಮತ್ತು ಅವರ ವಿಳಾಸಗಳು ದೊರೆತಿವೆ. ಆದರೆ ಎಷ್ಟು ಮಂದಿ ಸಿರಿಯಾಕ್ಕೆ ತೆರಳಿದ್ದಾರೆ ಮತ್ತು ಎಷ್ಟು ಮಂದಿ ಇನ್ನೂ ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

 'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ' 'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ'

ಈ ಯುವಕರ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಅಪರಾಧ ಸಂಚು ಮತ್ತು ಶಾಂತಿಯುತ ದೇಶದ ವಿರುದ್ಧ ಯುದ್ಧ ಮಾಡುವ ತಯಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿಯೂ ಕೇಸು ದಾಖಲಿಸಲಾಗಿದೆ.

ದೆಹಲಿ, ಉತ್ತರಪ್ರದೇಶದಲ್ಲಿ ಸಿಕ್ಕಿಬಿದ್ದ ಉಗ್ರರ ಗುಂಪು ಮಾಡಿದ್ದು ಅಂಥಿಂಥ ಪ್ಲಾನಾ!ದೆಹಲಿ, ಉತ್ತರಪ್ರದೇಶದಲ್ಲಿ ಸಿಕ್ಕಿಬಿದ್ದ ಉಗ್ರರ ಗುಂಪು ಮಾಡಿದ್ದು ಅಂಥಿಂಥ ಪ್ಲಾನಾ!

ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡುವ ಸಲುವಾಗಿ ಜುಂಡ್ ಅಲ್-ಅಕ್ಸಾ ಹಾಗೂ ಜಭಾತ್ ಅಲ್-ನುಸ್ರಾ ಸೇರ್ಪಡೆಯಾಗಲು ಈ ಯುವಕರು ಸಿರಿಯಾಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು ಅಥವಾ ಅಲ್ಲಿಗೆ ತೆರಳಿದ್ದಾರೆ ಎಂದು ಎನ್‌ಐಎ ತಿಳಿಸಿದೆ.

English summary
National Investigating Agency (NIA) has registered a case against around 7-8 youths hailing from Karnataka and Kerala in thier attempt to join terror organisations in Syria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X