ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಿ ಉಗ್ರರ ನಂಟು; ಕರ್ನಾಟಕ, ಕೇರಳ ಸೇರಿ ಹತ್ತು ಕಡೆ ಎನ್‌ಐಎ ದಾಳಿ, ಐವರ ಬಂಧನ

|
Google Oneindia Kannada News

ನವದೆಹಲಿ, ಮಾರ್ಚ್ 15: ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕೆಯಲ್ಲಿ ರಾಷ್ಟ್ರೀಯ ತನಿಖಾ ದಳ ಸೋಮವಾರ ಬೆಳಿಗ್ಗೆ ದೆಹಲಿ, ಕೇರಳ, ಕರ್ನಾಟಕ ಸೇರಿದಂತೆ ಹತ್ತು ಕಡೆಗಳಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದುಕೊಂಡಿದೆ.

ಈ ಕುರಿತು 48 ಗಂಟೆಗಳ ಹಿಂದೆ ತನಿಖಾ ದಳ ಪ್ರಕರಣ ದಾಖಲಿಸಿಕೊಂಡಿದ್ದು, ಸೋಮವಾರ ದಾಳಿ ನಡೆಸಿದೆ. ಪಾಕಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದು, ದುಷ್ಕೃತ್ಯ ಎಸಗಲು ಯೋಜನೆ ಹಾಕಿದ್ದ ಶಂಕೆಯಲ್ಲಿ ಭಾರತದ ಆರೇಳು ಮಂದಿ ಮೇಲೆ ಗುಪ್ತಚರ ಇಲಾಖೆ ನಿಗಾ ಇರಿಸಿತ್ತು.

ನೌಕಾಪಡೆ ಮಾಹಿತಿ ಸೋರಿಕೆ; ಬಟ್ಟೆ ವ್ಯಾಪಾರಿ ವಿರುದ್ಧ ಚಾರ್ಜ್‌ಶೀಟ್! ನೌಕಾಪಡೆ ಮಾಹಿತಿ ಸೋರಿಕೆ; ಬಟ್ಟೆ ವ್ಯಾಪಾರಿ ವಿರುದ್ಧ ಚಾರ್ಜ್‌ಶೀಟ್!

ಸದ್ಯಕ್ಕೆ ಐದು ಮಂದಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಲಾಗಿದೆ. ಪಾಕಿಸ್ತಾನಿ ಮೂಲದ ಸಂಘಟನೆಗಳೊಂದಿಗೆ ಈ ಐವರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದರು ಎಂದು ತನಿಖಾ ದಳ ಮಾಹಿತಿ ನೀಡಿದೆ.

NIA Raids On 10 Locations across India related To ISIS Links

ಪಾಕಿಸ್ತಾನವು ಸಾಮಾಜಿಕ ಜಾಲತಾಣದ ಮೂಲಕ ಭಾರತದ ಯುವಕರೊಂದಿಗೆ ಸಂಪರ್ಕ ಸಾಧಿಸಿಕೊಂಡು ಅವರಿಗೆ ಆನ್‌ಲೈನ್‌ನಲ್ಲಿಯೇ ತರಬೇತಿ ನೀಡುತ್ತಿತ್ತು. ಸ್ಥಳೀಯವಾಗಿ ದಾಳಿ ನಡೆಸಲು ಅವರನ್ನು ಪ್ರೇರೇಪಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

English summary
National Investigation Agency carried out raids in 10 locations at Delhi, Kerala and Karnataka in connection with an Islamic State related case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X