ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡಿಟ್ಟು ಪಠಾಣ್‌ಕೋಟ್ ತನಿಖಾಧಿಕಾರಿ ಹತ್ಯೆ

|
Google Oneindia Kannada News

ಬಿಜ್ನೋರ್, ಏಪ್ರಿಲ್, 03: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಶನಿವಾರ ರಾತ್ರಿ ಮನೆಗೆ ಮರಳುತ್ತಿದ್ದ ಅಧಿಕಾರಿ ತಂಜಿಲ್ ಅಹಮದ್ ಅವರನ್ನು ಹತ್ಯೆ ಮಾಡಲಾಗಿದೆ. ಕಾರ್ಯಕ್ರಮವೊಂದನ್ನು ಮುಗಿಸಿ ಅಹಮದ್ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆಗೆ ವಾಪಸಾಗುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಡೆಟಿಗೆ ಬಲಿಯಾಗಿದ್ದಾರೆ.[ಪಠಾಣ್‌ ಕೋಟ್ ದಾಳಿ : ತನಿಖೆಗೆ ಬಂತು ಪಾಕ್‌ ತಂಡ]

NIA officer shot dead in Uttar Pradesh


ಪಠಾಣ್ ಕೋಟ್ ದಾಳಿಯ ತನಿಖಾ ತಂಡದಲ್ಲಿ ಇದ್ದ ಅಧಿಕಾರಿ ಗುಂಡೆಟಿಗೆ ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ. ಅಹಮದ್ ಹೆಂಡತಿ ಮತ್ತು ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.[ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]

ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ಸಂಗತಿ ಬಹಿರಂಗವಾಗಿಲ್ಲ. ಸ್ಥಳೀಯ ಇಸ್ಲಾಮಿಕ್ ಸಂಘಟನೆ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಸಿಮಿ ಸಂಘಟನೆ ಈ ಹತ್ಯೆಯ ಹಿಂದೆ ಇರಬಹುದು ಎಂದು ಹೇಳಲಾಗಿದೆ.

English summary
An officer of the National Investigation Agency was shot dead at Bijnor Uttar Pradesh late on Saturday night. The officer Tanzil Ahmed was returning from a function along with his wife when two persons stopped his vehicle and opened fire. The officer was part of the team probing the Pathankot attack. The officer was part of the NIA wing in Delhi and gone to Uttar Pradesh to attend a function. His wife sustained injuries and has been admitted to hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X