ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಮಂದಿ ಐಎಸ್‌ಐಎಸ್ ಶಂಕಿತ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

|
Google Oneindia Kannada News

ಬೆಂಗಳೂರು, ಜೂನ್ 24: ನಗರದಲ್ಲಿ ನೆಲೆಸಿದ್ದ 12 ಮಂದಿ ಐಎಸ್‌ಐಎಸ್ ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ ದೋಷಾರೋಪಪಟ್ಟಿ ಸಲ್ಲಿಸಿದೆ.

Recommended Video

ತಂದೆ, ಪತ್ನಿ, ಮಗುವಿಗೆ ಕೊರೊನ ತಗುಲಿರುವ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ | DR Sudhakar talksabout his family

ಮೊಹಮ್ಮದ್ ಹನೀಫ್ ಖಾನ್, ಇಮ್ರಾನ್ ಖಾನ್, ಮೊಹಮ್ಮದ್ ಝೈದ್, ಇಜಾಜಾ ಪಾಷಾ, ಹುಸೇನ್ ಷರೀಫ್, ಖ್ವಾಜಾ ಮೊಹಿದ್ದೀನ್, ಮೆಹಬೂಬ್ ಪಾಷಾ ಸೇರಿ 12 ಮಂದಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.

ಬೆಂಗಳೂರಲ್ಲಿ ಐಎಸ್‌ಐಎಸ್‌ ಶಂಕಿತ ಉಗ್ರನ ಬಂಧನಬೆಂಗಳೂರಲ್ಲಿ ಐಎಸ್‌ಐಎಸ್‌ ಶಂಕಿತ ಉಗ್ರನ ಬಂಧನ

ಖ್ವಾಜಾ ಮೊಹಿದ್ದೀನ್ ಅಲಿಯಾಸ್ ಜಲಾಲ್ ತನ್ನ ಸಹಚರರ ಜೊತೆ ಸೇರಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹಲವು ಬಾರಿ ಸಭೆ ನಡೆಸಿದ್ದರು.

NIA Files Charge Sheet Against 12 For Aiding ISIS Terrorists

ಶಂಕಿತರು ತಮಿಲುನಾಡಿನ ಹಿಂದು ಮುಖಂಡ ಸುರೇಶ್ ಹತ್ಯೆ ಬಳಿಕ ಬೆಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶಂಕಿತರು ಗುರಪ್ಪನ ಪಾಳ್ಯದಲ್ಲಿದ್ದ ಬಗ್ಗೆ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ಮೆಹಬೂಬ್ ಪಾಷಾ ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆಯ ಕಟ್ಟಬೇಕೆಂದು ನಿರ್ಧರಿಸಿದ್ದ. ಎಲ್ಲರನ್ನೂ ಒಟ್ಟುಗೂಡಿಸಿ ಸಬೆ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು. ನಂತರ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.

ಕೋಮುಗಲಭೆ ಹಾಗೂ ದೇಶ ವಿರೋಧಿ ಚಟುವಟಿಕೆ ನಡೆಸಲು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ನಕಲಿ ದಾಖಲೆ ನೀಡಿ ಸಿಮ್ ಕಾರ್ಡ್ ಗಳನ್ನು ಬಳಸಿದ್ದರು. ಇದೇ ರೀತಿ ಹಲವು ಸಿಮ್ ಗಳನ್ನು ಪಡೆದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

English summary
The NIA on Tuesday filed a charge-sheet against 12 arrested accused in a case related to the fraudulent procurement and activation of SIM cards used by ISIS terrorists for their illegal activities in India, an official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X