ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನಷ್ಟು ಬಲವಾಗಲಿದೆ ಎನ್‌ಐಎ, ಎಫ್‌ಬಿಐನಷ್ಟು ಅಧಿಕಾರ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 23 : ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಎನ್‌ಐಎಗೆ ಅಮೆರಿಕದ ಎಫ್‌ಬಿಐ ರೀತಿ ಹೆಚ್ಚಿನ ಅಧಿಕಾರ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಯುಎಪಿಎ ಕಾಯ್ದೆಗೆ ತಿದ್ದುಪಡಿ ತರಲಿದೆ. ಈ ಮುಂಗಾರು ಅಧಿವೇಶನದಲ್ಲಿಯೇ ಮಸೂದೆ ಮಂಡನೆ ಮಾಡಲಾಗುತ್ತದೆ.

ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಈಗಾಗಲೇ ಕರಡು ಮಸೂದೆ ಸಿದ್ಧವಾಗಿದ್ದು, ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಎನ್‌ಐಎಯಿಂದ ಎಲ್ಲ ಪ್ರಕರಣಕ್ಕೂ 'ಕೇಸರಿ ಬಣ್ಣ'ಎನ್‌ಐಎಯಿಂದ ಎಲ್ಲ ಪ್ರಕರಣಕ್ಕೂ 'ಕೇಸರಿ ಬಣ್ಣ'

ಕಾಯ್ದೆಗೆ ತಿದ್ದುಪಡಿ ತಂದರೆ ಎನ್‌ಐಎಗೆ ವಿದೇಶದಲ್ಲಿ ಭಾರತೀಯರ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಆ ಬಗ್ಗೆ ತನಿಖೆ ನಡೆಸಲು ಅವಕಾಶ ಸಿಗಲಿದೆ. ಭಯೋತ್ಪಾದಕ ಸಂಘಟನೆಗಳ ಆಸ್ತಿಗಳನ್ನು ವಶಕ್ಕೆ ಪಡೆಯುವ ಅಧಿಕಾರವೂ ಸಿಗಲಿದೆ.

NIA can soon probe terror cases abroad

ಅಮೆರಿಕದ ಫೆಡರಲ್ ಬ್ಯರೋ ಆಫ್ ಇನ್‌ವೆಸ್ಟಿಗೇಷನ್ (ಎಫ್‌ಬಿಐ) ಇಂತಹ ಅಧಿಕಾರವನ್ನು ಹೊಂದಿದೆ. 2008ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಪೋಟ ನಡೆದಾಗ 7 ಅಮೆರಿಕದ ಪ್ರಜೆಗಳು ಮೃತಪಟ್ಟಿದ್ದರು. ಅದರ ತನಿಖೆಯನ್ನು ಎಫ್‌ಬಿಐ ನಡೆಸಿತ್ತು.

ಕಲಬುರ್ಗಿ ಹತ್ಯೆ ತನಿಖೆ ಮಾಡುವುದಿಲ್ಲ ಎಂದ ಎನ್‌ಐಎ, ಕಾರಣ ಏನು?ಕಲಬುರ್ಗಿ ಹತ್ಯೆ ತನಿಖೆ ಮಾಡುವುದಿಲ್ಲ ಎಂದ ಎನ್‌ಐಎ, ಕಾರಣ ಏನು?

ಮುಂಬೈ ಸರಣಿ ಬಾಂಬ್ ಸ್ಫೋಟದ ಘಟನೆ ಬಳಿಕ 2009ರಲ್ಲಿ ಎನ್‌ಐಎಯನ್ನು ಸ್ಥಾಪನೆ ಮಾಡಲಾಗಿದೆ. ದೇಶದಲ್ಲಿ ನಡೆದ ವಿವಿಧ ಭಯೋತ್ಪಾದಕ ದಾಳಿಗಳ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ.

English summary
India's premier probe agency the National Investigation Agency is set to get FBI like powers soon. The Union government has has planned on amending the act under which the NIA would get more powers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X