ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನರೇಂದ್ರ ಮೋದಿಯನ್ನು ಹತ್ಯೆ ಮಾಡಿ' ಹೀಗೊಂದು ಬೆದರಿಕೆಯ ಇ-ಮೇಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 04: 'ನರೇಂದ್ರ ಮೋದಿಯವರನ್ನು ಕೊಲ್ಲಿ' ಎನ್ನುವ ಬೆದರಿಕೆಯ ಇ-ಮೇಲ್ ಬಂದಿದ್ದು, ಪ್ರಧಾನಿ ಮೋದಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕಳೆದ ಆಗಸ್ಟ್ 8ರಂದು '[email protected]' ಎಂಬ ವಿಳಾಸದಿಂದ ಈ ಮೇಲ್ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಸ್ವತಂತ್ರವಾಗಿ ತನಿಖೆ ನಡೆಸದೆ ಅದನ್ನು ಕೇಂದ್ರ ತನಿಖಾ ಗುಪ್ತಚರ ಸಂಸ್ಥೆಗೆ ವರ್ಗಾಯಿಸಿದೆ.

ಪ್ರಾಥಮಿಕ ತನಿಖೆಯಿಂದ ಇದು ಭಾರತದ ಹೊರಗಿನಿಂದ ಬಂದಿರುವ ಇ-ಮೇಲ್ ಎಂದು ತಿಳಿದುಬಂದಿದೆ.ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಗೆ ಇಮೇಲ್ ಬಂದಿದ್ದು, ಇದಾದ ಬಳಿಕ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಗುಪ್ತಚರ ಇಲಾಖೆಗಳ ಹಿರಿಯ ಪ್ರತಿನಿಧಿಗಳನ್ನು ಹೊಂದಿರುವ ಬಹು ಸಂಸ್ಥೆ ಸಮನ್ವಯ ಕೇಂದ್ರ(ಎಂಎಸಿ)ವನ್ನು ಸಂಪರ್ಕಿಸಿ ಇಮೇಲ್ ಎಲ್ಲಿಂದ ಬಂದಿರುವುದು, ಕಳುಹಿಸಿದವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದೆ.

NIA Accessed Email Instruction Threatening Kill Narendra Modi

ಕೇಂದ್ರ ಗೃಹ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಮೋದಿಗೆ ಭದ್ರತೆ ನೀಡುವಂತೆ ವಿಶೇಷ ಭದ್ರತಾ ತಂಡಕ್ಕೆ ಸೂಚಿಸಲಾಗಿದೆ.

English summary
The National Investigation Agency, which received the email, has roped in the Multi-Agency Coordination Centre (MAC), which has senior representatives from R&AW, Intelligence Bureau and the Defence Intelligence Agencies, to investigate the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X