ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿ ಪಕ್ಕದ ಡಾಬಾ, ಹೋಟೆಲ್ಗಳಲ್ಲಿ ಪಾರ್ಕಿಂಗ್ ಇರಬೇಕು, ಇಲ್ಲದಿದ್ದರೆ ಕ್ರಮ

|
Google Oneindia Kannada News

ಲಖನೌ, ಜೂನ್ 24: ಹೆದ್ದಾರಿಗಳಲ್ಲಿ ನಿಂತ ವಾಹನಗಳಿಂದ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ರಸ್ತೆ ಬದಿಯ ಡಾಬಾ ಮತ್ತು ಹೋಟೆಲ್‌ಗಳು ಗ್ರಾಹಕರಿಗೆ ಪಾರ್ಕಿಂಗ್ ಒದಗಿಸಲು ವಿಫಲವಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಅಂತಹ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಪಾರ್ಕಿಂಗ್ ಸ್ಥಳಗಳನ್ನು ಒದಗಿಸದಿದ್ದರೆ ಈ ಡಾಬಾ ಮತ್ತು ಹೋಟೆಲ್‌ಗಳನ್ನು ಮುಚ್ಚಲಾಗುವುದು ಎಂದು ಎನ್‌ಹೆಚ್‌ಎಐ (NHAI) ಹೇಳಿದೆ.

ಆಘಾತಕಾರಿ! ಬಿಹಾರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳು ಹೇಗಿವೆ ಗೊತ್ತಾ?ಆಘಾತಕಾರಿ! ಬಿಹಾರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳು ಹೇಗಿವೆ ಗೊತ್ತಾ?

ಲಕ್ನೋ-ಸೀತಾಪುರ, ಕಾನ್ಪುರ-ಫೈಜಾಬಾದ್ ಮತ್ತು ರಾಯಬರೇಲಿ ಹೆದ್ದಾರಿಗಳಲ್ಲಿರುವ ಡಾಬಾಗಳಿಗೆ ನೋಟಿಸ್ ನೀಡಲಾಗುವುದು ಎಂದು ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಎನ್‌ಎನ್ ಗಿರಿ ತಿಳಿಸಿದ್ದಾರೆ.

NHAI Warns Highway Dhabas And Hotels Will Shut If They Not Provide Parking Space

ಡಾಬಾ ಮಾಲೀಕರು ಪಾರ್ಕಿಂಗ್ ಒದಗಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಮೀಕ್ಷೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ಮಂಜು ಕವಿದಿರುವಾಗ ಸರಿಯಾದ ಬೆಳಕು ಇದೆಯೇ ಎಂಬುದನ್ನು ಸಹ ಸಮೀಕ್ಷೆ ಪರಿಶೀಲಿಸುತ್ತದೆ ಎಂದು ಹೇಳಿದೆ.

ಕಡಿಮೆ ಅಂತರದಲ್ಲಿ ಎಷ್ಟು ಡಾಬಾಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವು ಪಾರ್ಕಿಂಗ್ ಸ್ಥಳವನ್ನು ಒದಗಿಸಿವೆಯೇ ಅಥವಾ ಅದೇ ಪಾರ್ಕಿಂಗ್ ಅನ್ನು ಬಳಸುತ್ತಿವೆಯೇ ಎಂಬುದನ್ನೂ ಕೂಡ ಪರಿಶೀಲಿಸಲಾಗುತ್ತದೆ. ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಎನ್‌ಹೆಚ್‌ಎಐ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಈ ಸಮೀಕ್ಷೆಯು ಅದೇ ಯೋಜನೆಯ ಭಾಗವಾಗಿದೆ.

ಬೆಂಗಳೂರು-ಮೈಸೂರು 10 ಪಥದ ರಸ್ತೆ; ಎಷ್ಟು ಟೋಲ್ ಕಟ್ಟಬೇಕು?ಬೆಂಗಳೂರು-ಮೈಸೂರು 10 ಪಥದ ರಸ್ತೆ; ಎಷ್ಟು ಟೋಲ್ ಕಟ್ಟಬೇಕು?

ಆರಂಭಿಕ ಹಂತದಲ್ಲಿ ಕೆಲವು ಹೆದ್ದಾರಿಗಳು ಆಯ್ಕೆ

ಯೋಜನೆಯ ಆರಂಭಿಕ ಹಂತದಲ್ಲಿ, ಲಕ್ನೋ ಬಳಿಯ ಪ್ರಮುಖ ಹೆದ್ದಾರಿಗಳನ್ನು ಆಯ್ಕೆ ಮಾಡಲಾಗಿದೆ. ಹರ್ದೋಯ್‌ಗೆ ಹೋಗುವ ಹೆದ್ದಾರಿಯನ್ನು ಸಹ ಪರಿಶೀಲಿಸಲಾಗುವುದು. ಎನ್‌ಹೆಚ್‌ಎಐ ಈ ಹೆದ್ದಾರಿಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ.

NHAI Warns Highway Dhabas And Hotels Will Shut If They Not Provide Parking Space

ರಸ್ತೆ ಬದಿಯ ಡಾಬಾಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಎಚ್‌ಎಐ ಪ್ರಕಾರ, ಹೆದ್ದಾರಿಗಳಲ್ಲಿ ನಿಂತಿರುವ ವಾಹನಗಳಿಂದಾಗಿ ಅನೇಕ ಅಪಘಾತಗಳು ವರದಿಯಾಗಿವೆ. ರೈತರು ಸಣ್ಣ ಜಮೀನನ್ನು ಡಾಬಾ ಮಾಲೀಕರಿಗೆ ಬಾಡಿಗೆಗೆ ನೀಡುತ್ತಾರೆ ಮತ್ತು ಉಳಿದವು ಕೃಷಿಗಾಗಿ ಬಳಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ನಿಯಮದಿಂದ ಕಡಿಮೆ ಜಾಗದಲ್ಲಿ ಡಾಬಾ, ಹೋಟೆಲ್ ಕಾರ್ಯ ನಿರ್ವಹಿಸಲು ಬರುವುದಿಲ್ಲ.

ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಕ್ಷಾಂತರ ಹೋಟೆಲ್ ಮತ್ತು ಡಾಬಾಗಳಿವೆ. ಅವುಗಳಲ್ಲಿ ಎಷ್ಟೋ ಹೋಟೆಲ್, ಡಾಬಾಗಳು ತನ್ನ ಗ್ರಾಹಕರಿಗೆ ಪಾರ್ಕಿಂಗ್ ಸೌಲಭ್ಯ ನೀಡುವುದಿಲ್ಲ, ಇದರಿಂದ ಸವಾರರು ಅನಿವಾರ್ಯವಾಗಿ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೆ ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೂ ಅಡ್ಡಿ ಉಂಟು ಮಾಡುತ್ತದೆ.

ಹಲವು ದಿನಗಳಿಂದ ಈ ಸಮಸ್ಯೆ ಕುರಿತು ದೂರುಗಳು ಕೇಳಿ ಬರುತ್ತಲೇ ಇದ್ದವು, ಕೊನೆಗೂ ಎನ್‌ಹೆಚ್‌ಎಐ ಈ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ಹೋಟೆಲ್, ಡಾಬಾಗಳಿಗೆ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲದ ಹೋಟೆಲ್, ಡಾಬಾಗಳನ್ನು ಮುಚ್ಚಿಸಲಾಗುವುದು ಎಂದು ಹೇಳಿದೆ.

English summary
The National Highways Authority of India has decided that it will get Road side dhabas and hotels shut if such establishments do not provide parking spaces to their customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X