ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ದಿನದಲ್ಲಿ 75 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಗಿನ್ನೆಸ್ ದಾಖಲೆ

|
Google Oneindia Kannada News

ನವದೆಹಲಿ, ಜೂನ್ 8: ಒಂದೆಡೆ ಭಾರತದ ಅದೆಷ್ಟೋ ಹಳ್ಳಿಗಳ ಜನ ಸಮರ್ಪಕ ರಸ್ತೆ ಸೌಲಭ್ಯಕ್ಕಾಗಿ ಒತ್ತಾಯಿಸುತ್ತಲೇ ಇದ್ದಾರೆ. ರಸ್ತೆ ನಿರ್ಮಾಣಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಂಡ ಅದೆಷ್ಟೋ ಉದಾಹರಣೆಗಳು ಸಹ ಇದೆ. ಅಚ್ಚರಿ ಎಂಬಂತೆ ಎನ್‌ಎಚ್‌ಎಐ 75 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಐದು ದಿನಗಳಲ್ಲಿ ಮುಗಿಸುವ ಮೂಲಕ ಗಿನ್ನೆಸ್ ದಾಖಲೆ ಸೇರಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಐದು ದಿನಗಳೊಳಗೆ ಎನ್‌ಎಚ್‌-53 ಹೆದ್ದಾರಿಯಲ್ಲಿ ಏಕ ಪಥದಲ್ಲಿ 75 ಕಿ.ಮೀ. ನಿರಂತರ ಬಿಟುಮಿನಸ್‌ ಕಾಂಕ್ರೀಟ್‌ ರಸ್ತೆ ನಿರ್ಮಿಸುವ ಮೂಲಕ ಮಂಗಳವಾರ ಗಿನ್ನೆಸ್‌ ದಾಖಲೆ ನಿರ್ಮಿಸಿದೆ. ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ನಡುವಿನ 75 ಕಿಮೀ ವ್ಯಾಪ್ತಿಯನ್ನು 105 ಗಂಟೆ 33 ನಿಮಿಷಗಳ ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ.

ಬೆಂಗಳೂರು: ಫ್ಲೈಓವರ್‌ಗಳ ಆಡಿಟ್‌ಗೆ ಬಿಬಿಎಂಪಿ ತೀರ್ಮಾನ ಬೆಂಗಳೂರು: ಫ್ಲೈಓವರ್‌ಗಳ ಆಡಿಟ್‌ಗೆ ಬಿಬಿಎಂಪಿ ತೀರ್ಮಾನ

ಈ ರಸ್ತೆಯನ್ನು ಖಾಸಗಿ ಗುತ್ತಿಗೆದಾರ ರಜಪೂತ್ ಇನ್ಫ್ರಾಕಾನ್ ನಿರ್ಮಿಸಿದೆ. ಅಮರಾವತಿ-ಅಕೋಲಾ ಹೆದ್ದಾರಿಯ ಕಾಮಗಾರಿ ಶನಿವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಮಂಗಳವಾರ ಪೂರ್ಣಗೊಂಡಿದೆ. NH-53 ಹೆದ್ದಾರಿಯು ಕೋಲ್ಕತ್ತಾ, ರಾಯ್‌ಪುರ, ನಾಗ್ಪುರ, ಅಕೋಲಾ, ಧುಲೆ, ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.

ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಚದರ ಮೀಟರ್ ಗೆ 551 ರೂ. ನೀಡಲು ಪಾಲಿಕೆ ಒಪ್ಪಿಗೆ ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಚದರ ಮೀಟರ್ ಗೆ 551 ರೂ. ನೀಡಲು ಪಾಲಿಕೆ ಒಪ್ಪಿಗೆ

Recommended Video

Zooನಲ್ಲಿದ್ದ Orangutanಗೆ ಕೋಪ ಬಂದಾಗ ಏನಾಯ್ತು ನೋಡಿ | OneIndia Kannada

ನಿರೀಕ್ಷೆಗೂ ಮುನ್ನವೆ ಕಾಮಗಾರಿ ಪೂರ್ಣ

ನಿರೀಕ್ಷೆಗೂ ಮುನ್ನವೆ ಕಾಮಗಾರಿ ಪೂರ್ಣ

ಅಮರಾವತಿಯ ಲೋಣಿ ಗ್ರಾಮದಿಂದ ಅಕೋಲಾದ ಮನ ಗ್ರಾಮದವರೆಗಿನ ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸಲಾಗಿದೆ, 108 ಗಂಟೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ನಿಗದಿತ ಅವಧಿಗೂ ಮುನ್ನವೇ ಕಾಮಗಾರಿ ಪೂರ್ಣಗೊಂಡಿದೆ.

ಕಾಮಗಾರಿ ಸ್ಥಳದಲ್ಲಿ ಗಿನ್ನಿಸ್ ಸಂಸ್ಥೆಯ ತಂಡವೊಂದು ಹಾಜರಿದ್ದು, ರಸ್ತೆ ನಿರ್ಮಾಣ ಕಾಮಗಾರಿಯನ್ನು ದಾಖಲು ಮಾಡಿಕೊಂಡಿದೆ. ಆಧುನಿಕ ತಂತ್ರಜ್ಞಾನ ಮತ್ತು ಬಿಟುಮಿನಸ್ ಕಾಂಕ್ರೀಟ್ ಯಂತ್ರಗಳನ್ನು ನಿರ್ಮಾಣಕ್ಕೆ ಬಳಸಲಾಗಿದೆ.

ಸತತವಾಗಿ ನಡೆಯಿತು ಕಾಮಗಾರಿ

ಸತತವಾಗಿ ನಡೆಯಿತು ಕಾಮಗಾರಿ

ಸುಮಾರು 800 ಉದ್ಯೋಗಿಗಳು ಮತ್ತು 700 ಕಾರ್ಮಿಕರು ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ಸವಾಲುಗಳ ನಡುವೆಯೇ ರಾಜ್ ಪಥ್ ಇನ್ಫ್ರಾಕಾನ್ ಸಂಸ್ಥೆ ಕಾಮಗಾರಿಯನ್ನು ನಿಗದಿತ ಸಮಯಕ್ಕೂ ಮೊದಲೇ ಪೂರ್ಣಗೊಳಿಸಿದೆ.

ವಿಶ್ವ ದಾಖಲೆ ನಿರ್ಮಾಣ ಮಾಡಲು ತಂಡ ಸರಿಯಾಗಿ ಯೋಜನೆ ರೂಪಿಸಿತ್ತು. ಕಾಮಗಾರಿಯ ಪ್ರತಿ ಭಾಗಕ್ಕೂ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಪ್ರಾಜೆಕ್ಟ್ ಮ್ಯಾನೇಜರ್‌, ಹೆದ್ದಾರಿ ಎಂಜಿನಿಯರ್, ಗುಣಮಟ್ಟದ ಎಂಜಿನಿಯರ್, ಸರ್ವೇಯರ್, ಸುರಕ್ಷತಾ ಎಂಜಿನಿ‍ಯರ್ ಮತ್ತು ಇತರ ಉದ್ಯೋಗಿಗಳ ತಂಡವನ್ನು ನಿಯೋಜಿಸಲಾಗಿತ್ತು.

ಕಾಮಗಾರಿ ಯಶಸ್ವಿಯಾಗಿ ಮುಗಿಸಲು ಮ್ಯಾನೇಜ್‌ಮೆಂಟ್ ಥಿಂಕ್ ಟ್ಯಾಂಕ್ ಮತ್ತು ವಾರ್ ರೂಮ್ ಕೂಡ ನಿರ್ಮಾಣವಾಗಿತ್ತು. ಯಾವುದಾದರೂ ಯಂತ್ರಗಳು ಹಾಳಾದರೆ ರಿಪೇರಿ ಮಾಡಲು ಟಾಟಾ ಮೋಟಾರ್ಸ್‌ನ ಐವರು ಎಂಜಿನಿಯರ್‌ಗಳು ಮತ್ತು ಐವರು ಇತರ ಕಾರ್ಯನಿರ್ವಾಹಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ

ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ

ದಾಖಲೆಗಾಗಿ ಕಡಿಮೆ ಸಮಯದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರೂ, ಗುಣಮಟ್ಟದಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಕೆಲಸ ಮಾಡಲಾಗಿದೆ.

ಉತೃಷ್ಟ ಗುಣಮಟ್ಟ ಕಾಯ್ದುಕೊಳ್ಳಲು ಸಾಕಷ್ಟು ಮುಂಜಾಗ್ರತೆ ವಹಿಸಿಲಾಗಿತ್ತು. ನಿರ್ಮಾಣ ಕಂಪನಿ ಗುಣಮಟ್ಟ ನಿಯಂತ್ರಣ ಎಂಜಿನಿಯರ್ ಮತ್ತು ಸುರಕ್ಷತಾ ಅಧಿಕಾರಿಗಳ ಸುಸಜ್ಜಿತ ತಂಡವನ್ನು ನಿಯೋಜಿಸಿದ್ದರು.

ಗುಣಮಟ್ಟ ನಿಯಂತ್ರಣಕ್ಕಾಗಿ ಸುಸಜ್ಜಿತ ಪ್ರಯೋಗಾಲಯವನ್ನೂ ಸ್ಥಾಪಿಸಲಾಗಿತ್ತು. ಈ ಪ್ರಯೋಗಾಲಯದ ಮೂಲಕ ಕಾಮಗಾರಿಗೆ ಬಳಸಿದ ವಸ್ತುಗಳು ಮತ್ತು ನಡೆದ ಕಾಮಗಾರಿಯ ಮೇಲ್ವಿಚಾರಣೆ ಮಾಡುವ ಮೂಲಕ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ.

ಮಾಹಿತಿ ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ತಮ್ಮ ಟ್ವಿಟರ್ ಖಾತೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಕಾಮಗಾರಿ ವೇಳೆಯ ಚಿತ್ರಗಳು ಮತ್ತು ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಸಮೃದ್ಧಿಯೊಂದಿಗೆ ಭಾರತವನ್ನು ಸಂಪರ್ಕಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಆಜಾದಿ ಅಮೃತ ಮಹೋತ್ಸವ ಆಚರಣೆಯ ಸುಸಂದರ್ಭದಲ್ಲಿ ಎನ್‌ಹೆಚ್‌ಎಐ ಯಶಸ್ವಿಯಾಗಿ ಗಿನ್ನೆಸ್‌ ದಾಖಲೆಯನ್ನು ಪೂರ್ಣಗೊಳಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಎನ್‌ಎಚ್‌ಎಐ, ಕೇಂದ್ರ ಸರ್ಕಾರದ ಕಾಮಗಾರಿ ಗಿನ್ನೆಸ್ ದಾಖಲೆಗೆ ಸೇರಿದೆ ಎನ್ನುವ ಖುಷಿಯ ವಿಚಾರವೇ. ಆದರೆ ಇಂದಿಗೂ ಭಾರತದ ಎಷ್ಟೋ ಹಳ್ಳಿಗಳನ್ನು ಸಂಪರ್ಕಿಸಲು ಉತ್ತಮ ರಸ್ತೆಗಳಿಲ್ಲ, ಸಾರಿಗೆ ವ್ಯವಸ್ಥೆ ಇಲ್ಲ ಎನ್ನುವುದೂ ಸತ್ಯ. ಟೋಲ್ ಶುಲ್ಕ ಸಂಗ್ರಹಿಸುವ ಹೆದ್ದಾರಿಗಳ ನಿರ್ಮಾಣಕ್ಕೆ ತೋರುವ ಆಸಕ್ತಿಯನ್ನು ಗ್ರಾಮೀಣ ಭಾಗದ ರಸ್ತೆಗಳ ನಿರ್ಮಾಣಕ್ಕೂ ತೋರಬೇಕಿದೆ.

English summary
The National Highway Authority of India (NHAI) has completed Guinness Book of Record by constructing 75 km highway within five days. The 75 km stretch between Amravati and Akola in Maharashtra has been completed in a record time of 105 hours and 33 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X