ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಸ್ಟ್ಯಾಗ್ ; ಒಂದೇ ದಿನದಲ್ಲಿ 86.2 ಕೋಟಿ ಟೋಲ್ ಸಂಗ್ರಹ

|
Google Oneindia Kannada News

ನವದೆಹಲಿ, ಜನವರಿ 15 : ಫಾಸ್ಟ್ಯಾಗ್ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದೇ ದಿನದಲ್ಲಿ 86.2 ಕೋಟಿ ಸಂಗ್ರಹ ಮಾಡಿ ದಾಖಲೆ ಬರೆದಿದೆ. 23 ಕೋಟಿ ರೂ. ಸಂಗ್ರಹವಾಗಿದ್ದು ಇದುವರೆಗಿನ ದಾಖಲೆಯಾಗಿತ್ತು.

ಎನ್‌ಎಚ್‌ಎಐ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. 2019ರ ನವೆಂಬರ್‌ನಲ್ಲಿ 23 ಕೋಟಿ ರೂ. ಸಂಗ್ರಹವಾಗಿತ್ತು. 2020ರ ಜನವರಿಯಲ್ಲಿ ಭಾನುವಾರ ಫಾಸ್ಟ್ಯಾಗ್ ಮೂಲಕ 86.2 ಕೋಟಿ ಸಂಗ್ರಹವಾಗುವ ಮೂಲಕ ಹೊಸ ದಾಖಲೆಯಾಗಿದೆ ಎಂದರು.

ಫಾಸ್ಟ್ಯಾಗ್ ಸಮಸ್ಯೆ; ವಾಹನ ಸವಾರರಿಗೆ ಸಿಹಿ ಸುದ್ದಿಫಾಸ್ಟ್ಯಾಗ್ ಸಮಸ್ಯೆ; ವಾಹನ ಸವಾರರಿಗೆ ಸಿಹಿ ಸುದ್ದಿ

ಫಾಸ್ಟ್ಯಾಗ್ ಮೂಲಕ ಪ್ರತಿದಿನ ಸುಮಾರು 30 ಲಕ್ಷ ರೂ. ಸಂಗ್ರಹವಾಗುತ್ತಿದೆ. 2019ರ ಜುಲೈನಲ್ಲಿ ಇದು 8 ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಜೋಧಪುರ್‌ದ ಟೋಲ್ ಫ್ಲಾಜಾ ಶೇ 91ರಷ್ಟು ಶುಲ್ಕವನ್ನು ಫಾಸ್ಟ್ಯಾಗ್ ಮೂಲಕವೇ ಸಂಗ್ರಹ ಮಾಡುತ್ತಿದೆ.

ವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲ

NHAI Highest Daily Toll Collection Rs 86 Crore As FASTag Sales Double

ಭೋಪಾಲ್ ಮತ್ತು ಗಾಂಧಿನಗರದ ಟೋಲ್ ಫ್ಲಾಜಾಗಳು ಫಾಸ್ಟ್ಯಾಗ್ ಮೂಲಕ ಶುಲ್ಕ ಸಂಗ್ರಹದಲ್ಲಿ ದಾಖಲೆ ಮಾಡಿವೆ. ಡಿಸೆಂಬರ್ 2019ಕ್ಕೆ ಅನ್ವಯವಾಗುವಂತೆ 1 ಕೋಟಿ ಫಾಸ್ಟ್ಯಾಗ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಎನ್‌ಎಚ್‌ಎಐ ಹೇಳಿದೆ.

ಫಾಸ್ಟ್‌ ಟ್ಯಾಗ್ ಕಡ್ಡಾಯದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರಫಾಸ್ಟ್‌ ಟ್ಯಾಗ್ ಕಡ್ಡಾಯದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ಡಿಸೆಂಬರ್ 15ರಿಂದ ಜಾರಿಗೆ ಬರುವಂತೆ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಬಳಿಕ ಇದನ್ನು ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಪ್ರತಿಟೋಲ್‌ಗಳಲ್ಲಿ ಶೇ 75ರಷ್ಟು ಫಾಸ್ಟ್ಯಾಗ್, ಶೇ 25ರಷ್ಟು ನಗದು ಮೂಲಕ ಶುಲ್ಕ ಸಂಗ್ರಹಿಸಬೇಕು ಎಂದು ಸರ್ಕಾರ ಹೇಳಿತ್ತು.

ಜನವರಿಯಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿ ದೇಶಾದ್ಯಂತ ಜಾರಿಗೆ ಬರಲಿದೆ. 527 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹ ಮಾಡಲಾಗುತ್ತದೆ.

English summary
National Highways Authority of India (NHAI) said that Rs 86.2 crore daily toll collection recorded on one day. The highest daily toll collection via electronic system of FASTags Rs 50 crore earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X