• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಧ್ಯಮಗಳಿಂದ ತಪ್ಪಾಗಿ ವರದಿ - ಆರ್ಟ್ ಆಫ್ ಲಿವಿಂಗ್ ನಿಂದ ಸ್ಪಷ್ಟನೆ

By Sachhidananda Acharya
|

ಬೆಂಗಳೂರು, ಏಪ್ರಿಲ್ 21: 'ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‍ಜಿಟಿ)'ವು ಗುರುವಾರ ವಿಚಾರಣೆ ವೇಳೆ 'ಆರ್ಟ್ ಆಫ್ ಲಿವಿಂಗ್ ' ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ ಎಂಬ ವರದಿಗೆ ಸಂಬಂಧಿಸಿದಂತೆ ಸಂಸ್ಥೆಯು ಸ್ಪಷ್ಟನೆ ನೀಡಿದೆ. ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು ನಮ್ಮನ್ನಲ್ಲ ಮನೋಜ್ ಶರ್ಮಾರನ್ನು ಎಂದು ತನ್ನ ಹೇಳಿಕೆಯನ್ನು ತಿಳಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, "ಎನ್‍ಜಿಟಿಯಲ್ಲಿ ಆರ್ಟ್ ಆಫ್ ಲಿವಿಂಗ್‍ ಠೇವಣಿ ಇಟ್ಟಿರುವ ಹಣವನ್ನು ಬಳಸುವಂತೆ ಮನೋಜ್ ಮಿಶ್ರಾ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ," ಎಂದು ಶ್ರೀ ಶ್ರೀ ರವಿಶಂಕರ್ ಸ್ಥಾಪಿಸಿರುವ ಆರ್ಟ್ ಆಫ್ ಲಿವಿಂಗ್ ಹೇಳಿದೆ.[ನಿಮಗೆ ಜವಾಬ್ದಾರಿಯೇ ಇಲ್ಲ, ರವಿಶಂಕರ್ ಗೆ ಕೋರ್ಟ್ ಛೀಮಾರಿ]

ಮಾತ್ರವಲ್ಲ ಗುರುವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ನಡೆದ ವಿಚಾರಣೆಯಲ್ಲಿ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಈ ಮೂರು ನಿರ್ಧಾರಗಳೂ ಆರ್ಟ್ ಆಫ್ ಲಿವಿಂಗ್‍ನ ಪರವಾಗಿದ್ದವು ಎಂದು ವಾದಿಸಿದ್ದವು.

ಆರ್ಟ್ ಆಫ್ ಲಿವಿಂಗ್ ನೀಡಿದ ಹೇಳಿಕೆ ಇಲ್ಲಿದೆ,

1) ಆರ್ಟ್ ಆಫ್ ಲಿವಿಂಗ್ ಇರಿಸಿದ್ದ ಠೇವಣಿ ಹಣವನ್ನು ತಕ್ಷಣವೇ ಬಳಸಬೇಕೆಂಬ ಅರ್ಜಿದಾರ ಮನೋಜ್ ಮಿಶ್ರರವರ ಮನವಿ ಸಲ್ಲಿಸಿದರು. ಈ ಮನವಿಯನ್ನು ತಿರಸ್ಕರಿಸಲಾಯಿತು.

2) ವರದಿಯಲ್ಲಿ ಹೇಳಲಾದ ಅಂಶಗಳ ಬ್ಗಗೆ ನಮ್ಮ ವಿರೋಧವನ್ನು ಆಲಿಸದೆಯೆ ಮೊಕ್ಕದ್ದೊಮೆ ಮುಂದುವರಿಸಬೇಕೆಂದು ಮಿಶ್ರರ ಮನವಿ ಮಾಡಿಕೊಂಡರು; ಅದನ್ನು ತಿರಸ್ಕರಿಸಲಾಯಿತು.

3) ನಮ್ಮ ಜಾಲತಾಣದಲ್ಲಿ ನಾವು ವ್ಯಕ್ತ ಪಡಿಸಿರುವ ಅಭಿಪ್ರಾಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಿಶ್ರ ಮನವಿ ಮಾಡಿದರು. ಇದನ್ನೂ ಸನ್ಮಾನ್ಯ ನ್ಯಾಯಾಲಯ ತಿರಸ್ಕರಿಸಿತು.

ಎಂಬುದಾಗಿ ಆರ್ಟ್ ಆಫ್ ಲಿವಿಂಗ್ ಹೇಳಿದೆ.

ಇನ್ನು ಮಾಧ್ಯಮ ವರದಿ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಟ್ ಆಫ್ ಲಿವಿಂಗ್, " ಮಾಧ್ಯಮಗಳಲ್ಲಿ ವರದಿಯಾದಂತೆ ಸನ್ಮಾನ್ಯ ನ್ಯಾಯಾಲಯವು ನಮ್ಮ ವಿರುದ್ಧವಾಗಿ ಹೇಳಿಲ್ಲ. ಬದಲಿಗೆ ನ್ಯಾಯಾಲಯ ಮನೋಜ್ ಮಿಶ್ರ ವಿರುದ್ಧ ಹೇಳಿತ್ತು.

ಇದೇ ವೇಳೆ, "ನ್ಯಾಯಾಲಯದಲ್ಲಿ ನಡೆಯುವ ಕುಚೋದ್ಯದ ಮಾತುಗಳೆಲ್ಲವೂ ಅಸಂಬದ್ಧ. ಕೇವಲ ನಿರ್ಧಾರಗಳು ಮಾತ್ರ ಮುಖ್ಯವಾಗುತ್ತವೆ. ಹಾಗೂ ವಿಚಾರಣೆ ವೇಳೆ ಎಲ್ಲಾ ನಿರ್ಧಾರಗಳೂ ನಮ್ಮ ಪರವಾಗಿಯೇ ಇದ್ದವು. ದುರದೃಷ್ಟವೆಂದರೆ ಕೆಲವು ಮಾಧ್ಯಮಗಳಲ್ಲಿ ವಿಚಾರಣೆಯನ್ನು ತಪ್ಪಾಗಿ ವರದಿ ಮಾಡಿವೆ," ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ನ್ಯಾಯಾಲಯದ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ ಮತ್ತು ಸತ್ಯಕ್ಕೇ ಜಯ ಸಲ್ಲುತ್ತದೆ ಎಂದು ನಮಗೆ ಪೂರ್ಣ ವಿಶ್ವಾಸವಿದೆ ಎಂದು ಆರ್ಟ್ ಆಫ್ ಲಿವಿಂಗ್ ಹೇಳಿದೆ.

English summary
Art of Living given clarification regarding the hearing of NGT and it told that, “at the time of hearing before the Hon'ble National Green Tribunal, three decisions were taken. All three were in favor of The Art of Living,” in a press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more