ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್ ಗಂಗಾ ನದಿಯಲ್ಲಿ ತೊಟ್ಟು ಕಸ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

|
Google Oneindia Kannada News

ನವದೆಹಲಿ, ಜುಲೈ 13 : ಗಂಗಾ ನದಿಯಲ್ಲಿ ತ್ಯಾಜ್ಯ ಹಾಕುವವರಿಗೆ 50,000 ರು. ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಗುರುವಾರ ಆದೇಶ ಹೊರಡಿಸಿದೆ.

ಗಂಗಾ ನದಿ ತಟದ ಉನ್ನಾವ್ ಮತ್ತು ಹರಿದ್ವಾರಗಳಲ್ಲಿ ನದಿ ಸಮೀಪ ಕಸ ಸುರಿಯುವುದನ್ನು ಕಟ್ಟು ನಿಟ್ಟಾಗಿ ತಡೆಯಬೇಕೆಂದು ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ನ್ಯಾಯಪೀಠ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

NGT orders Rs 50,000 fine for dumping waste into Ganga river

ಗಂಗಾ ನದಿ ಸಮೀಪದಲ್ಲಿರುವ ಚರ್ಮ ಸಂಸ್ಕರಣಾ ಘಟಕಗಳನ್ನು ಆರು ವಾರಗೊಳಗೆ ಸ್ಥಳಾಂತರಿಸುವಂತೆ ನ್ಯಾಯಪೀಠವು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಅಲ್ಲದೆ, ಗಂಗಾ ನದಿ ತೀರದಿಂದ 100 ಮೀಟರ್‌ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಬಾರದು ಎಂದು ನ್ಯಾಯಪೀಠ ಆದೇಶಿಸಿದೆ.

ಗಂಗಾ ನದಿ ತೀರದಲ್ಲಿರುವ ಘಾಟ್‌ ಮತ್ತು ಪವಿತ್ರ ಸ್ಥಳಗಳಲ್ಲಿ ನದಿಗೆ ಹಾನಿಯಾಗದಂತೆ ಧಾರ್ಮಿಕ ಆಚರಣೆಗಳನ್ನು ನಡೆಸಲು ಮಾರ್ಗಸೂಚಿ ತಯಾರಿಸುವಂತೆ ಎನ್‌ಜಿಟಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.

English summary
A penalty of Rs 50, 000 will be imposed on those dumping waste in the stretch between Haridwar and Unnao of River Ganga, the National Green Tribunal (NGT) said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X