ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಎರಡು ಅಂಶಗಳ ಮೇಲೆ ಕೊರೊನಾ 3ನೇ ಅಲೆ ಪ್ರಭಾವ ಅವಲಂಬಿತ

|
Google Oneindia Kannada News

ನವದೆಹಲಿ, ಜೂನ್ 21: ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಪ್ರತಿನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತಿದೆ. ಆದರೆ ನಿರ್ಬಂಧ ಸಡಿಲಿಕೆ ಮಾಡುತ್ತಿದ್ದಂತೆ ಜನರು ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದೂ ಕಂಡುಬರುತ್ತಿದೆ.

Recommended Video

Covid 3rd Wave ಬಗ್ಗೆ ವೈದ್ಯರು ಹೇಳ್ತಿರೋದೇನು | Oneindia Kannada

ಇದೇ ಅಕ್ಟೋಬರ್ ವೇಳೆಗೆ ದೇಶದಲ್ಲಿ ಕೊರೊನಾ ಮೂರನೇ ಅಲೆ ಎಚ್ಚರಿಕೆಯನ್ನು ತಜ್ಞರು ನೀಡಿದ್ದು, ಕೊರೊನಾ ನಿಯಮಗಳ ಪಾಲನೆ ಈ ಸಮಯದಲ್ಲಿ ಕಡ್ಡಾಯವಾಗಿದೆ. ಈ ನಡುವೆ ಏಮ್ಸ್‌ನ ಔಷಧ ವಿಭಾಗದ ಸಹಾಯಕ ಪ್ರೊಫೆಸರ್, ವೈದ್ಯ ಡಾ. ನೀರಜ್ ನಿಶ್ಚಲ್ ಎರಡು ಮುಖ್ಯ ಅಂಶಗಳನ್ನು ಮುಂದಿಟ್ಟಿದ್ದಾರೆ. ಆ ಅಂಶಗಳ ಮೇಲೆ ಕೊರೊನಾ ಮೂರನೇ ಅಲೆ ಪ್ರಭಾವ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. ಅದೇನು? ಮುಂದೆ ಓದಿ...

 ಎರಡು ಅಂಶಗಳ ಮೇಲೆ ಸೋಂಕಿನ ಪ್ರಭಾವ ಅವಲಂಬಿತ

ಎರಡು ಅಂಶಗಳ ಮೇಲೆ ಸೋಂಕಿನ ಪ್ರಭಾವ ಅವಲಂಬಿತ

"ಸೋಂಕಿನ ಅಲೆಯು ಈ ಎರಡು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಮೊದಲನೆಯದು ಸೋಂಕು ಸಂಬಂಧ ಮತ್ತೊಂದು ಮನುಷ್ಯ ಸಂಬಂಧ ಅಂಶಗಳು" ಎಂದಿದ್ದಾರೆ ವೈದ್ಯ ನೀರಜ್. ಸೋಂಕಿನ ರೂಪಾಂತರ ಸೃಷ್ಟಿಗಳು ಯಾರ ಕೈಯಲ್ಲೂ ಇಲ್ಲ. ಆದರೆ ಕೊರೊನಾ ನಿಯಮಗಳ ಪಾಲನೆ ವೈರಸ್ ಹರಡುವಿಕೆ ತಡೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

ಕೊರೊನಾ 3ನೇ ಅಲೆ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಗರಿಷ್ಠ ಮಟ್ಟ ತಲುಪಲಿದೆಕೊರೊನಾ 3ನೇ ಅಲೆ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಗರಿಷ್ಠ ಮಟ್ಟ ತಲುಪಲಿದೆ

"ನಮ್ಮ ನಿಯಂತ್ರಣ ಮೀರಿ ಸೋಂಕು ಹರಡುತ್ತಿದೆ"

"ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದಂತೆ ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಿರುವುದೂ ಕಂಡುಬರುತ್ತಿದೆ. ಇದು ಇನ್ನಷ್ಟು ವೇಗವಾಗಿ ಹರಡುತ್ತಿದೆ. ನಮ್ಮ ನಿಯಂತ್ರಣಕ್ಕೂ ಮೀರಿ ಸೋಂಕು ಹರಡುತ್ತದೆ. ನಮ್ಮ ದೇಹಕ್ಕೆ ಈ ಸೋಂಕು ಹೊಕ್ಕುವುದನ್ನು ತಡೆದರೆ ರೂಪಾಂತರವನ್ನು ತಡೆಯುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ನಮ್ಮ ನಡವಳಿಕೆಯನ್ನೇ ಬದಲಿಸಿಕೊಳ್ಳಬೇಕಿದೆ. ನಿಯಮಗಳನ್ನು ಪಾಲಿಸಬೇಕಿದೆ" ಎಂದು ಹೇಳಿದ್ದಾರೆ.

 ಕೊರೊನಾ ಎರಡನೇ ಅಲೆಯಲ್ಲಿ ಇದೇ ಆಗಿದ್ದಲ್ಲವೇ?

ಕೊರೊನಾ ಎರಡನೇ ಅಲೆಯಲ್ಲಿ ಇದೇ ಆಗಿದ್ದಲ್ಲವೇ?

ಕೊರೊನಾ ನಿಯಮಗಳ ಪಾಲನೆ ಕುರಿತು ನಾವು 15-16 ತಿಂಗಳಿನಿಂದಲೂ ಮಾತನಾಡುತ್ತಿದ್ದೇವೆ. ಜೊತೆಗೆ ನಿಯಮ ಪಾಲನೆಯಿಂದಲೇ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂಬುದೂ ಸಾಬೀತಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಇದೇ ಆಗಿದ್ದಲ್ಲವೇ? ಈಗ ಇನ್ನಷ್ಟು ಎಚ್ಚರಿಕೆ ಇರಬೇಕಿದೆ ಎಂದಿದ್ದಾರೆ.

ಭಾರತದಲ್ಲಿ ಶೇ.90 ರಷ್ಟು ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಕುಸಿತಭಾರತದಲ್ಲಿ ಶೇ.90 ರಷ್ಟು ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಕುಸಿತ

 ಲಸಿಕೆ ಪಡೆದುಕೊಳ್ಳಲು ಸಲಹೆ

ಲಸಿಕೆ ಪಡೆದುಕೊಳ್ಳಲು ಸಲಹೆ

ಲಸಿಕೆ ಪಡೆಯುವುದು ಈ ಸಂದರ್ಭ ಬಹುಮುಖ್ಯವಾಗಿದೆ ಎಂಬುದನ್ನು ಒತ್ತಿ ಹೇಳಿರುವ ಅವರು, ಲಸಿಕೆ ಪಡೆದ ನಂತರ ಸೋಂಕು ಬಂದರೂ, ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ಲಸಿಕೆ ತಡೆಯುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

English summary
Next Covid wave depends on these 2 factors according to AIIMS doctor Neeraj Nischal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X