• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜಿಲೆಂಡ್ ನರಮೇಧಕ್ಕೂ ಮೋದಿ ಹೆಸರು ಎಳೆದು ತಂದ ದಿಗ್ವಿಜಯ್ ಸಿಂಗ್

|
   ನರೇಂದ್ರ ಮೋದಿ ಹೆಸರನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅನಗತ್ಯವಾಗಿ ಎಳೆದಿದ್ದಾರೆ | Oneindia Kannada

   ನ್ಯೂಜಿಲೆಂಡಿನ ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ಶುಕ್ರವಾರ (ಮಾ 15) ನಡೆದ ಮಾರಣಹೋಮದ ವಿಚಾರದಲ್ಲೂ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಎಳೆದು ತಂದಿದೆ.

   ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸದ್ಯ ಕಾಂಗ್ರೆಸ್ ನಲ್ಲಿ ಆಟಕ್ಕೂ, ಲೆಕ್ಕಕ್ಕೂ ಎರಡಕ್ಕೂ ಇರದ ದಿಗ್ವಿಜಯ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟ್ವೀಟಿಗೆ ಪ್ರತಿಕ್ರಿಯಿಸುತ್ತಾ ಮೋದಿಯ ಹೆಸರನ್ನು ಎಳೆದು ತಂದಿದ್ದಾರೆ.

   ಸದಾ, ಒಂದಿಲ್ಲೊಂದು ವಿವಾದಕಾರಿ ಹೇಳಿಕೆಯನ್ನು ನೀಡುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರತಂದೊಡ್ಡುವ ದಿಗ್ವಿಜಯ್, ಪುಲ್ವಾಮಾ ಉಗ್ರರ ದಾಳಿಯ ಕುರಿತಂತೆಯೂ ಅಸಂಬದ್ದ ಟ್ವೀಟ್ ಮಾಡಿ, ಮಂಗಳಾರತಿ ಮಾಡಿಸಿಕೊಂಡಿದ್ದರು.

   49 ಮುಸ್ಲಿಂರನ್ನು ಬಲಿಪಡೆದವ ಆಸ್ಟ್ರೇಲಿಯಾದ ಭಯೋತ್ಪಾದಕ

   ಪುಲ್ವಾಮಾ 'ದುರ್ಘಟನೆ'ಯ ನಂತರ ನಡೆದ ನಮ್ಮ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ಬಗ್ಗೆ ವಿದೇಶಿ ಮಾಧ್ಯಮಗಳೂ ಅನುಮಾನ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಭಾರತ ಸರ್ಕಾರದ ವಿಶ್ವಾಸಾರ್ಹತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ" ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದರು. ನ್ಯೂಜಿಲೆಂಡ್ ನರಮೇಧದ ವಿಚಾರದಲ್ಲಿ ದಿಗ್ವಿಜಯ್ ಸಿಂಗ್ ಮಾಡಿರುವ ಟ್ವೀಟ್ ಏನು?

   ರಾಹುಲ್ ಗಾಂಧಿ ಮಾಡಿದ ಟ್ವೀಟ್

   ನ್ಯೂಜಿಲೆಂಡ್ ನಲ್ಲಿ ನಡೆದದ್ದು ಭಯೋತ್ಪಾದಕರ ಕೃತ್ಯ, ಇದನ್ನು ಎಲ್ಲರೂ ನಿಸ್ಸಂದೇಹವಾಗಿ ಖಂಡಿಸಬೇಕಾಗಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲಾ ಕುಟುಂಬಗಳಿಗೆ ನಾನು ಸಂತಾಪ ಸಲ್ಲಿಸುತ್ತೇನೆ, ಹಾಗೂ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

   ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ

   ಹಿಟ್ಲರ್‌, ಮುಸೊಲೊನಿಗಳು ಮತ್ತು ಮೋದಿಯಂತವರಲ್ಲ

   ತನ್ನ ನಾಯಕನ ಟ್ವೀಟಿಗೆ ಉತ್ತರಿಸುವ ಭರದಲ್ಲಿ ದಿಗ್ವಿಜಯ್ ಸಿಂಗ್ ಎಡವಟ್ಟು ಮಾಡಿಕೊಂಡು ಮೋದಿಯನ್ನು ಎಳೆದು ತಂದಿದ್ದಾರೆ. ರಾಹುಲ್ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ವಿಶ್ವಕ್ಕೆ ಸನಾತನ ಧರ್ಮ, ಗೌತಮ ಬುದ್ಧ ಮತ್ತು ಮಹಾವೀರರು ಪ್ರತಿಪಾದಿಸಿದ ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯ ಅಗತ್ಯವಿದೆಯೇ ಹೊರತು, ಹಿಂಸೆ ಮತ್ತು ದ್ವೇಷದ್ದಲ್ಲ. ನಮಗೆ ಮಹಾತ್ಮ ಗಾಂಧಿಗಳು, ಮಾರ್ಟಿನ್ ಲೂಥರ್ ನಂತವರು ಬೇಕಿದ್ದಾರೆಯೇ ಹೊರತು, ಹಿಟ್ಲರ್‌, ಮುಸೊಲೊನಿ, ಮೋದಿಯಂತವರಲ್ಲ" ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

   ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಏನು ಯೋಗ್ಯತೆಯಿದೆ?

   ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಏನು ಯೋಗ್ಯತೆಯಿದೆ?

   ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಏನು ಯೋಗ್ಯತೆಯಿದೆ? ನಿಮ್ಮ ರಾಹುಲ್ ಗಾಂಧಿಗೆ ಆಡಳಿತ ನಡೆಸುವುದು ಗೊತ್ತಾ? ಮೊದಲು ಅವರು ಕಾರ್ಪೋರೇಟರ್ ಆಗಲಿ, ಜನರನ್ನು ಲೂಟಿ ಮಾಡುವುದಲ್ಲ... ಪಿಗ್ ವಿಜಯ್ , ಹುಟ್ಟುವ ಮಗುವಿಗೂ ಮೋದಿ ಕಾರಣ ಎನ್ನುವವರು ನೀವು - ದಿಗ್ವಿಜಯ್ ಟ್ವೀಟಿಗೆ ಬಂದಿರುವ ಪ್ರತಿಕ್ರಿಯೆ.

   ಮೂರು ಸಾವಿರಕ್ಕೂ ಹೆಚ್ಚು ಸಿಖ್ ಸಮುದಾಯದವರ ಮಾರಣಹೋಮ

   ಮೂರು ಸಾವಿರಕ್ಕೂ ಹೆಚ್ಚು ಸಿಖ್ ಸಮುದಾಯದವರ ಮಾರಣಹೋಮ

   ಮೂರು ಸಾವಿರಕ್ಕೂ ಹೆಚ್ಚು ಸಿಖ್ ಸಮುದಾಯದವರ ಮಾರಣಹೋಮ ಮಾಡಿದವರು ಯಾರು? ಹಿಂದೂ, ಮರಾಠಿ ಬ್ರಾಹ್ಮಣರು, ಕಾಶ್ಮೀರಿ ಪಂಡಿತರನ್ನು ಕೊಂದಿದ್ದು ಕಾಂಗ್ರೆಸ್, ಈಗ ನೀತಿಪಾಠ ಹೇಳಲು ಬರುತ್ತೀರಾ? ಎನ್ನುವ ಖಾರವಾದ ಪ್ರತಿಕ್ರಿಯೆ.

   ರಾಹುಲ್, ದಿಗ್ವಿಜಯ್ ಸಿಂಗ್, ಸಿದ್ದು ಅಂತವರು ನಮಗೆ ಬೇಕಾಗಿಲ್ಲ

   ರಾಹುಲ್, ದಿಗ್ವಿಜಯ್ ಸಿಂಗ್, ಸಿದ್ದು ಅಂತವರು ನಮಗೆ ಬೇಕಾಗಿಲ್ಲ

   ನಮಗೆ, ರಾಮಕೃಷ್ಣ, ಸ್ವಾಮಿ ವಿವೇಕಾನಂದ, ಚಂದ್ರಗುಪ್ತ, ಮಹರಾಣಾ ಪ್ರತಾಪ್, ಲಕ್ಷ್ಮೀಬಾಯಿ ಮುಂತಾದವರ ನಾಡಿದು. ಭಾರತ ಶಾಂತಿಯನ್ನು ಬಯಸುತ್ತದೆ. ರಾಹುಲ್, ದಿಗ್ವಿಜಯ್ ಸಿಂಗ್, ಸಿದ್ದು ಅಂತವರು ನಮಗೆ ಬೇಕಾಗಿಲ್ಲ ಎನ್ನುವ ಟ್ವೀಟ್.

   English summary
   Newzealand shooting: Senior Congress leader and former CM of Madhya Pradesh Digvijay Singh pulled Prime Minister Narendra Modi name unnecessarily, strong reply from Twitterrite.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X