ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NewsX Polstrat poll: ನರೇಂದ್ರ ಮೋದಿಯೇ ಅತ್ಯುತ್ತಮ ಪ್ರಧಾನಿ

By ಅನಿಲ್ ಆಚಾರ್
|
Google Oneindia Kannada News

Recommended Video

ಈ ಸಮೀಕ್ಷೆ ಪ್ರಕಾರ ನರೇಂದ್ರ ಮೋದಿಯವರೇ ಅತ್ಯುತ್ತಮ ಆಯ್ಕೆ | Oneindia Kannada

ಭಾರತದ ರಾಷ್ಟ್ರೀಯ ಭದ್ರತೆ, ಭಯೋತ್ಪಾದಕರ ವಿರುದ್ಧದ ಸಮರ ಮತ್ತು ಆರ್ಥಿಕತೆ ವಿಚಾರದಲ್ಲಿ ನರೇಂದ್ರ ಮೋದಿ ಅವರೇ ಅತ್ಯುತ್ತಮ ಪ್ರಧಾನಮಂತ್ರಿ ಎಂದು ನ್ಯೂಸ್ ಎಕ್ಸ್- ಪೋಲ್ ಸ್ಟ್ರಾಟ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 75ಕ್ಕಿಂತ ಹೆಚ್ಚು ಮಂದಿ ಭಾರತದ ರಾಷ್ಟ್ರೀಯ ಭದ್ರತೆಗೆ, ಭಯೋತ್ಪಾದಕರ ವಿರುದ್ಧದ ಸಮರಕ್ಕೆ ಮೋದಿಯೇ ಅತ್ಯುತ್ತಮ ಪ್ರಧಾನಿ ಎಂದಿದ್ದಾರೆ.

ಆದರೆ, ದೇಶದ ಆರ್ಥಿಕತೆ ವಿಚಾರಕ್ಕೆ ಬಂದರೆ ಶೇಕಡಾ 71.17ರಷ್ಟು ಮಂದಿ ಮೋದಿ ಅವರನ್ನು ಸೂಕ್ತ ಎಂದಿದ್ದಾರೆ. ನರೇಂದ್ರ ಮೋದಿ ಅವರ ನಂತರದ ಆಯ್ಕೆ ಕಾಂಗ್ರೆಸ್ ನ ರಾಹುಲ್ ಗಾಂಧಿ ಆಗಿದ್ದಾರೆ. ರಾಷ್ಟ್ರೀಯ ಭದ್ರತೆ, ಭಯೋತ್ಪಾದಕರ ವಿರುದ್ಧ ಕದನದ ವಿಚಾರಕ್ಕೆ ಬಂದರೆ ರಾಹುಲ್ ಗಾಂಧಿ ಸೂಕ್ತ ಪ್ರಧಾನಿ ಆಗಬಲ್ಲರು ಎಂದು ಕೇವಲ ಶೇಕಡಾ 8.23ರಷ್ಟು ಮಂದಿ ಮಾತ್ರ ಭಾವಿಸಿದ್ದಾರೆ.

ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

ಹಾಗೆ ನೋಡಿದರೆ ದೇಶದ ಆರ್ಥಿಕತೆ ವಿಷಯಕ್ಕೆ ಬಂದರೆ ರಾಹುಲ್ ಉತ್ತಮ ಪ್ರಧಾನಿ ಅಗಬಲ್ಲರು ಎಂದುಕೊಳ್ಳುವವರು 13.48 ಪರ್ಸೆಂಟ್ ನಷ್ಟು ಮಂದಿ. ಸಮೀಕ್ಷೆಯಲ್ಲಿ 3ನೇ ಸ್ಥಾನದಲ್ಲಿ ಇರುವವರು ದೆಹಲಿ ಮುಖ್ಯಮಂತ್ರಿ- ಅಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್.

NewsX Polstrat snap poll: Narendra Modi top choice for PM

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ -ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಈ ಸಮೀಕ್ಷೆಯಲ್ಲಿ ಉತ್ತಮವಾದ ಮತಗಳು ಬಿದ್ದಿಲ್ಲ. ರಾಷ್ಟ್ರೀಯ ಭದ್ರತೆ ಹಾಗೂ ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ನರೇಂದ್ರ ಮೋದಿ ಅವರೇ ಅತ್ಯುತ್ತಮ ಪ್ರಧಾನಿ ಎಂಬ ಸಂಗತಿ ನಿಚ್ಚಳವಾಗಿ ಜನರ ಮನದಲ್ಲಿ ಉಳಿಯುವಂತೆ ಮಾಡಲು ಅವರು ಯಶಸ್ವಿ ಆಗಿದ್ದಾರೆ.

English summary
Polstrat snap poll: Narendra Modi will be the best Prime Minister for India’s national security, war on terror and economy, NewsX-Polstrat snap poll has said. More than 75 per cent of the people voted for Narendra Modi. He is followed by Congress president Rahul Gandhi, who lagged behind by a huge margin in the survey with Just 8.23 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X