ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈರ್ ಬ್ರಾಂಡ್ ಮುಖಂಡ ಸದ್ಯದಲ್ಲೇ ಪಕ್ಷಕ್ಕೆ ಗುಡ್ ಬೈ: ಬಿಜೆಪಿಗೆ ಕಾದಿದೆ ಬಿಗ್ ಶಾಕ್?

|
Google Oneindia Kannada News

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿದ್ದ 'ಮೋದಿ ಹವಾ' ಸದ್ಯ ಇಲ್ಲ ಎನ್ನುವುದು ಒಂದೆಡೆಯಾದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲಿ ಸೋಲು ಅನುಭವಿಸಿದ್ದು ಬಿಜೆಪಿಯ ನೈತಿಕ ಬಲವನ್ನು ಕುಗ್ಗಿಸಿದೆ ಎನ್ನುವುದು ಅತ್ಯಂತ ಸ್ಪಷ್ಟ.

ತೆಲುಗುದೇಶಂ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು, ಶಿವಸೇನೆಯ ನಡೆ ಇನ್ನೂ ನಿಗೂಢವಾಗಿರುವುದು ಅಮಿತ್ ಶಾ, ಅವರ ರಾಜಕೀಯ ತಂತ್ರಗಾರಿಕೆಯನ್ನೇ ಒಂದು ಹೆಜ್ಜೆ ಹಿಂದೆ ಇಡುವಂತೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಅಂದರೆ 2014ರಲ್ಲಿ ಆಂಧ್ರ ( 17) ಮತ್ತು ಮಹಾರಾಷ್ಟ್ರದಿಂದ ( 42) ಬಿಜೆಪಿ ಮೈತ್ರಿಕೂಟಕ್ಕೆ ಬಂದಿದ್ದ ಒಟ್ಟು ಸೀಟು 59.

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಹವಾ ದೇಶಾದ್ಯಂತ ಎಷ್ಟರ ಮಟ್ಟಿಗೆ ಇತ್ತೆಂದರೆ, ದೇಶದ ಅತಿಹೆಚ್ಚು ಲೋಕಸಭಾ ಸೀಟು ಹೊಂದಿರುವ ಉತ್ತರಪ್ರದೇಶದ ಒಟ್ಟು ಎಂಬತ್ತು ಕ್ಷೇತ್ರಗಳಲ್ಲಿ ಮೈತ್ರಿಕೂಟದೊಂದಿಗೆ ಬಿಜೆಪಿ ಗೆದ್ದಿದ್ದು ಬರೋಬ್ಬರಿ 73 ಸೀಟುಗಳನ್ನು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ?

ಈ ಬಾರಿ ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಪೈಪೋಟಿ ನೀಡಬಹುದು ಎನ್ನುವ ಸದ್ಯದ ಲೆಕ್ಕಾಚಾರದ ಪ್ರಕಾರ, ಎಸ್ಪಿ ಮತ್ತು ಬಿಎಸ್ಪಿ, ಕಳೆದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದ್ದದ್ದು ಕೇವಲ ಐದು ಸೀಟುಗಳನ್ನು. ಇದಾದ ನಂತರ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಈ ಮೈತ್ರಿಕೂಟ, ಬಿಜೆಪಿಗೆ ಬಿಸಿ ಮುಟ್ಟಿಸಿದ್ದು ಆಮೇಲಿನ ಲೆಕ್ಕಾಚಾರ. ಉತ್ತರ ಪ್ರದೇಶದ ವರ್ಚಸ್ವೀ ನಾಯಕನೊಬ್ಬ, ಸದ್ಯದಲ್ಲೇ ಬಿಜೆಪಿಗೆ ಗುಡ್ ಬೈ, ಯಾರದು?

ಯುವನಾಯಕನೊಬ್ಬ ಬಿಜೆಪಿಗೆ ಗುಡ್ ಬೈ

ಯುವನಾಯಕನೊಬ್ಬ ಬಿಜೆಪಿಗೆ ಗುಡ್ ಬೈ

ಯಾವುದೇ ಪಕ್ಷ ಅಧಿಕಾರಕ್ಕೇರಲು ಉತ್ತರಪ್ರದೇಶ ಅತ್ಯಂತ ನಿರ್ಣಾಯಕ. ಬಿಜೆಪಿಗೆ ಅಲ್ಲಾಗುತ್ತಿರುವ ಸದ್ಯದ ಮಟ್ಟಿನ ಹಿನ್ನಡೆಯ ನಡುವೆ, ಪಕ್ಷದ ಅತ್ಯಂತ ವರ್ಚಸ್ವೀ, ಯುವ ಫೈರ್ ಬ್ರಾಂಡ್ ನಾಯಕನೊಬ್ಬ, ಬಿಜೆಪಿಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎನ್ನುವ ಸುದ್ದಿ, ಬಿಜಿಪಿಗೆ ಇನ್ನೊಂದು ಶಾಕ್ ನೀಡಿದೆ.

'ಗಡ್ಕರಿ ಉಪ ಪ್ರಧಾನಿಯಾಗಲಿ, ಯೋಗಿ ತಮ್ಮ ಧಾರ್ಮಿಕ ಕೆಲಸ ನೋಡಿಕೊಳ್ಳಲಿ' 'ಗಡ್ಕರಿ ಉಪ ಪ್ರಧಾನಿಯಾಗಲಿ, ಯೋಗಿ ತಮ್ಮ ಧಾರ್ಮಿಕ ಕೆಲಸ ನೋಡಿಕೊಳ್ಳಲಿ'

ಅಖಿಲೇಶ್ ಮತ್ತು ಮಾಯಾವತಿ

ಅಖಿಲೇಶ್ ಮತ್ತು ಮಾಯಾವತಿ

ಉತ್ತರಪ್ರದೇಶದ ಎಂಬತ್ತು ಸೀಟುಗಳಿಗೆ ಈಗಾಗಲೇ ಬಿಎಸ್ಪಿ ಮತ್ತು ಎಸ್ಪಿ, ಮೈತ್ರಿಮಾಡಿಕೊಂಡಿದ್ದು, ತಲಾ 37 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳನ್ನು ತಮ್ಮ ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದೆ. ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿಯಲ್ಲಿ ಎರಡೂ ಪಕ್ಷಗಳು ಕಣಕ್ಕೆ ಇಳಿಸದೇ ಇರುವ ನಿರ್ಧಾರಕ್ಕೆ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಬಂದಿದ್ದಾರೆ.

ಮೂರು ರಾಜ್ಯಕ್ಕಾಗಿಯೇ ಜನಿವಾರ ಹಾಕಿದ್ದೇ? ರಾಹುಲ್‌ಗೆ ಸ್ಮೃತಿ ತರಾಟೆ ಮೂರು ರಾಜ್ಯಕ್ಕಾಗಿಯೇ ಜನಿವಾರ ಹಾಕಿದ್ದೇ? ರಾಹುಲ್‌ಗೆ ಸ್ಮೃತಿ ತರಾಟೆ

ಗಾಂಧಿ ಕುಟುಂಬದ ಯುವಕುಡಿ ವರುಣ್ ಗಾಂಧಿ

ಗಾಂಧಿ ಕುಟುಂಬದ ಯುವಕುಡಿ ವರುಣ್ ಗಾಂಧಿ

ಗಾಂಧಿ ಕುಟುಂಬದ ಯುವಕುಡಿ ವರುಣ್ ಗಾಂಧಿ, ಸುಲ್ತಾನಪುರ ಕ್ಷೇತ್ರದ ಬಿಜೆಪಿಯ ಹಾಲೀ ಸಂಸದ. ಪಕ್ಷದಲ್ಲಿ ಫೈರ್ ಬ್ರಾಂಡ್ ಎಂದೇ ಕರೆಯಲ್ಪಡುವ ವರುಣ್, ಭಾಷಣದಲ್ಲೂ ಸೈ, ಜನಸಾಮಾನ್ಯರ ಜೊತೆ ಬೆರೆಯುವಲ್ಲಿ ಸೈ. ಆದರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ತಮ್ಮ ವರ್ಕಿಂಗ್ ಸ್ಟೈಲ್ ಅನ್ನೇ ಅವರು ಬದಲಾಯಿಸಿಕೊಂಡರೋ ಅಥವಾ ಬದಲಾಯಿಸ ಬೇಕಾದ ಅನಿವಾರ್ಯತೆ ಎದುರಾಯಿತೋ ಗೊತ್ತಿಲ್ಲ, ಒಟ್ಟಿನಲ್ಲಿ ಸಕ್ರಿಯ ರಾಜಕೀಯದಲ್ಲಿ ತಮ್ಮನ್ನು ವರುಣ್ ಸದ್ಯ ತೊಡಗಿಸಿಕೊಳ್ಳುತ್ತಿಲ್ಲ.

ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಚುನಾವಣೆ ಉಸ್ತುವಾರಿಗಳ ನೇಮಕ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಚುನಾವಣೆ ಉಸ್ತುವಾರಿಗಳ ನೇಮಕ

ಸಹೋದರಿ ಪ್ರಿಯಾಂಕ ವಾಧ್ರಾ ಜೊತೆ ಹೆಚ್ಚಿನ ಸಂಪರ್ಕದಲ್ಲಿರುವ ವರುಣ್

ಸಹೋದರಿ ಪ್ರಿಯಾಂಕ ವಾಧ್ರಾ ಜೊತೆ ಹೆಚ್ಚಿನ ಸಂಪರ್ಕದಲ್ಲಿರುವ ವರುಣ್

ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವರುಣ್ ಗಾಂಧಿ ಅವರೊಂದಿಗೆ ಅಂತರವನ್ನು ಕಾಯ್ಡುಕೊಂಡು ಬರುತ್ತಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ. ಇದರಿಂದಲೋ ಏನೋ, ತಾನಾಯಿತು ತನ್ನ ಕ್ಷೇತ್ರವಾಯಿತು ಎಂದು ದೆಹಲಿಯಿಂದ ದೂರವಿದ್ದ ವರುಣ್, ಬರಬರುತ್ತಾ ಅವರ ಹಾಜರಾತಿ ಸಂಸತ್ತಿನಲ್ಲೂ ಕಮ್ಮಿಯಾಗುತ್ತಿದೆ. ಸಹೋದರಿ ಪ್ರಿಯಾಂಕ ವಾಧ್ರಾ ಜೊತೆ ಹೆಚ್ಚಿನ ಸಂಪರ್ಕದಲ್ಲಿದ್ದಾರೆ.

ಲೋಕಸಭಾ ಮೈತ್ರಿ: ಶಿವಸೇನೆಗೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ ಲೋಕಸಭಾ ಮೈತ್ರಿ: ಶಿವಸೇನೆಗೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ

ಸಹೋದರನಿಗೆ ಸೂಕ್ತ ವೇದಿಕೆ ಕಲ್ಪಿಸಲು, ಪ್ರಿಯಾಂಕ ಬ್ಯಾಕ್ ಗ್ರೌಂಡ್ ಕೆಲಸ

ಸಹೋದರನಿಗೆ ಸೂಕ್ತ ವೇದಿಕೆ ಕಲ್ಪಿಸಲು, ಪ್ರಿಯಾಂಕ ಬ್ಯಾಕ್ ಗ್ರೌಂಡ್ ಕೆಲಸ

ಖಚಿತ ಮೂಲಗಳ ಪ್ರಕಾರ, ಮೋದಿ ಮತ್ತು ಶಾ ನಡೆಗೆ ಬೇಸರಿಸಿ, ವರುಣ್ ಗಾಂಧಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಸಹೋದರನಿಗೆ ಸೂಕ್ತ ವೇದಿಕೆ ಕಲ್ಪಿಸಲು, ಪ್ರಿಯಾಂಕ ಎಲ್ಲಾ ಬ್ಯಾಕ್ ಗ್ರೌಂಡ್ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ, ಮುಂಬರುವ ಚುನಾವಣೆಯಲ್ಲಿ ಅಮೇಠಿಯಿಂದ ವರುಣ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.

English summary
Months before General Election, news surrounding in Uttar Pradesh. Fire brand youth leader and BJP MP from Sultanpur Varun Gandhi may quit BJP and joins INC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X