ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದ ಸಂಸತ್ ಅಧಿವೇಶನ: ಯಾರು, ಏನು ಹೇಳಿದರು?

|
Google Oneindia Kannada News

ನವದೆಹಲಿ, ನವೆಂಬರ್, 26: ಚಳಿಗಾಲದ ಸಂಸತ್ ಅಧಿವೇಶನ ಗುರುವಾರ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವರು, ಸಂಸತ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಸಂಸತ್ ಕಲಾಪದಲ್ಲಿ ಭಾಗವಹಿಸಿದ್ದರು.

ಸರಕು ಮತ್ತು ಸೇವಾ ತೆರಿಗೆ ಬಿಲ್(ಜಿಎಸ್ ಟಿ) ಮಂಡಿಸಲು ಸಿದ್ಧತೆಗಳು ನಡೆದಿವೆ. ಈ ಬಾರಿ ಬಿಲ್ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ ಸಮರಕ್ಕೆ ಕಾರಣವಾಗುವುದು ಪಕ್ಕಾ.[ಸಂಸತ್ ನಲ್ಲಿ ಖರ್ಗೆ-ಸುಷ್ಮಾ ಜಟಾಪಟಿ]

ಉಳಿದಂತೆ ದೇಶದಲ್ಲಿ ಅಸಹಿಷ್ಣುತೆ ಗೊಂದಲ ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿರುವ ಮತ್ತೊಂದು ಪ್ರಮುಖ ಅಸ್ತ್ರ. ದೇಶದ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳು ಮಂಡನೆಯಾಗಲಿವೆ. ಪಾರ್ಲಿಮೆಂಟ್ ಅಧಿವೇಶನದ ಮೊದಲ ದಿನ ಸಂಸತ್ ಭವನದ ಒಳಗೆ ಮತ್ತು ಹೊರಗೆ ಏನೇನಾಯಿತು ಎಂಬುದನ್ನು ನೋಡಿಕೊಂಡು ಬರೋಣ..(ಪಿಟಿಐ ಚಿತ್ರಗಳು)

ಚರ್ಚೆಯೇ ಸಂಸತ್ತಿನ ಜೀವಾಳ

ಚರ್ಚೆಯೇ ಸಂಸತ್ತಿನ ಜೀವಾಳ

ಚರ್ಚೆ, ಮಾತುಕತೆ ಮತ್ತು ವಿಚಾರ ವಿನಿಮಯವೇ ಸಂಸತ್ ನ ಜೀವಾಳ. ಇದೆಲ್ಲ ನಡೆದ ಮೇಲೆಯೇ ಸ್ಪಷ್ಟ ತೀರ್ಮಾನವೊಂದಕ್ಕೆ ಬರಲು ಸಾಧ್ಯವಿದೆ.-ನರೇಂದ್ರ ಮೋದಿ

ಸರ್ಕಾರದ ಬಳಿ ಬಹುಮತವಿದೆ

ಸರ್ಕಾರದ ಬಳಿ ಬಹುಮತವಿದೆ

ಸರ್ಕಾರದ ಬಳಿ ಬಹುಮತವಿದೆ ಆದರೂ ಸಹ ಆಡಳಿತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ-ಶರದ್ ಯಾದವ್

ನಮ್ಮ ಬೆಂಬಲವಿದೆ

ನಮ್ಮ ಬೆಂಬಲವಿದೆ

ಸರಕು ಮತ್ತು ಸೇವಾ ತೆರಿಗೆ ಬಿಲ್(ಜಿಎಸ್ ಟಿ)ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಇದು ದೇಶದ ಅರ್ಥ ವ್ಯವಸ್ಥೆಯನ್ನು ಸದೃಢ ಮಾಡುವುದರಲ್ಲಿ ಅನುಮಾನವಿಲ್ಲ-ಮಾಯಾವತಿ

ದೇಶ ಬಿಡುವ ಯೋಚನೆ ಮಾಡಿರಲಿಲ್ಲ

ದೇಶ ಬಿಡುವ ಯೋಚನೆ ಮಾಡಿರಲಿಲ್ಲ

ಸಂವಿಧಾನ ಶಿಲ್ಪಿ ಡಾ ಬಿ ಆರ್ ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು ಆದರೆ ಎಂದು ದೇಶ ಬಿಡುವ ಮಾತನಾಡಿರಲಿಲ್ಲ- ರಾಜನಾಥ್ ಸಿಂಗ್ ,

ರಾಹುಲ್ ಗಾಂಧಿ ಆಗಮನ

ರಾಹುಲ್ ಗಾಂಧಿ ಆಗಮನ

ಬೆಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಜುಗರಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಸಂಸತ್ ಕಲಾಪದಲ್ಲಿ ಭಾಗವಹಿಸಲು ಆಗಮಿಸಿದರು.

ನಮಗೆ ಸಂವಿಧಾನದ ಪಾಠ ಬೇಕಿಲ್ಲ

ನಮಗೆ ಸಂವಿಧಾನದ ಪಾಠ ಬೇಕಿಲ್ಲ

ಸಂವಿಧಾನದ ನಿರ್ಮಾಣದಲ್ಲಿ ಯಾವುದೇ ಶ್ರಮವಹಿಸದ ಪಕ್ಷಗಳಿಂದ, ಜನರಿಂದ ನಾವು ಸಂವಿಧಾನದ ಬಗ್ಗೆ ಪಾಠ ಕೇಳುವ ಅಗತ್ಯವಿಲ್ಲ. -ಸೋನಿಯಾ ಗಾಂಧಿ

ಸರಿಯಾದ ಚರ್ಚೆ ಮಾಡಿ

ಸರಿಯಾದ ಚರ್ಚೆ ಮಾಡಿ

ಬೇಡದ ಸಂಗತಿಗಳಿಗೆ ಕಲಾಪದ ಸಮಯ ವ್ಯರ್ಥ ಮಾಡುವುದು ಬೇಡ. ಸರಿಯಾಧ ಸಂಗತಿಗಳನ್ನು ಚರ್ಚೆ ಮಾಡುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಮಲ್ಲಿಕಾರ್ಜುನ ಖರ್ಗೆ.

English summary
News In Pics: Parliament winter session begins on November 26. It was declared by Prime Minister of India, Narendra Modi, the first Constitution Day has been celebrated across India on Thursday, Nov 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X