ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಕಾಂಗ್ರೆಸ್ ಪ್ರತಿಭಟನೆ ಕಾವು, ಬಿಸಿಲ ಝಳ

|
Google Oneindia Kannada News

ನವದೆಹಲಿ, ಜೂ. 10: ಕೇಂದ್ರದ ಕ್ಯಾಬಿನೆಟ್ ಸಭೆ. ಮಾನ್ಸೂನ್ ಮಾರುತಗಳ ಪ್ರಭಾವ, ಏರುತ್ತಿರುವ ಬಿಸಿಲಿನ ಝಳ, ಅರವಿಂದ್ ಕೇಜ್ರಿವಾಲ್ ವಿರುದ್ಧ ಟೊಂಕ ಕಟ್ಟಿ ನಿಂತ ಕಾಂಗ್ರೆಸ್ ಕಾರ್ಯಕರ್ತರು... ಇವೆಲ್ಲ ಸುದ್ದಿಗಳಿಗೆ ಬುಧವಾರ ಸಾಕ್ಷಿಯಾಯಿತು.

ನಕಲಿ ಪದವಿ ಆರೋಪದಲ್ಲಿ ಬಂಧಿತರಾಗಿರುವ ಆದ್ಮಿ ಪಕ್ಷದ ನಾಯಕ ಜೀತೇಂದ್ರ ಸಿಂಗ್ ತೋಮರ್ ಕಂಡ ತಮ್ಮದೇ ಸುದ್ದಿಯನ್ನು ದಿನಪತ್ರಿಕೆಯಲ್ಲಿ ಓದುತ್ತಿದ್ದರು. ಬುಧವಾರ ಜೂನ್ 10 ರಂದು ದೇಶಾದ್ಯಂತ ನಡೆದ ಪ್ರಮುಖ ಘಟನಾವಳಿಗಳ ಮೇಲೆ ಒಂದು ನೋಟ ಇಲ್ಲಿದೆ. ಇಡೀ ದಿನದ ಸುದ್ದಿ ಚಿತ್ರಗಳಲ್ಲಿ.....(ಪಿಟಿಐ ಚಿತ್ರಗಳು)

ಪ್ರತಿಭಟನೆಗೆ ಬ್ರೇಕ್

ಪ್ರತಿಭಟನೆಗೆ ಬ್ರೇಕ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ನಿಯಂತ್ರಣಕ್ಕೆ ಪೊಲೀಸರು ಅನುಸರಿಸಿದ ಮಾರ್ಗ. ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಮಯ ಬದಲಾಯಿತೆ?

ಸಮಯ ಬದಲಾಯಿತೆ?

ಕ್ಯಾಬಿನೆಟ್ ಸಭೆಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೈ ಗಡಿಯಾರ ನೋಡಿಕೊಂಡರು. ಬಿಜೆಪಿ ಸರ್ಕಾರ ಒಂದು ವರ್ಷ ಮುಗಿಸಿ ಮುಂದೆ ಸಾಗುತ್ತಿದ್ದು ಸಾಧನೆಗಳ ಪರಾಮರ್ಶೆಯೂ ನಡೆದಿದೆ.

ಪ್ರಮಾಣ ವಚನ

ಪ್ರಮಾಣ ವಚನ

ಕೇಂದ್ರದ ನೂತನ ಚೀಫ್ ಇನ್ ಫಾರ್ ಮೇಶನ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ವಿಜಯ್ ಶರ್ಮಾ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಮಾಣ ವಚನ ಬೋಧಿಸಿದರು.

ನರೇಂದ್ರ ಮೋದಿ ಹಾಜರಿ

ನರೇಂದ್ರ ಮೋದಿ ಹಾಜರಿ

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜತೆ ಕೇಂದ್ರದ ಚೀಫ್ ಇನ್ ಫಾರ್ ಮೇಶನ್ ಅಧಿಕಾರಿ ವಿಜಯ್ ಶರ್ಮಾ. ಆಡಳಿತದ ಆರಂಭಿಕ ಹಂತದಲ್ಲಿ ಎನ್ ಡಿಎ ಸರ್ಕಾರ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಿದೆ.

ತೋಮರ್ ಬಂಧನ

ತೋಮರ್ ಬಂಧನ

ಸುಳ್ಳು ಪದವಿ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಜೀತೇಂದ್ರ ಸಿಂಗ್ ತೋಮರ್. ಪೊಲೀಸರ ವಶದಲ್ಲಿರುವ ಅವರು ಲಖ್ನೋ ರೈಲು ನಿಲ್ದಾಣದಲ್ಲಿ ದಿನಪತ್ರಿಕೆ ಓದುತ್ತಿದ್ದಾಗ ಕಂಡ ದೃಶ್ಯ.

ಮಿಂಚಿನ 'ನೋಟ'

ಮಿಂಚಿನ 'ನೋಟ'

ಕೋಲ್ಕತ್ತಾದ ಬಾನಂಗಳದಲ್ಲಿ ಕಂಡು ಬಂದ ಬಳ್ಳಿ ಮಿಂಚು. ಮಾನ್ಸುನ್ ಮಾರುತಗಳು ದೇಶವನ್ನು ಪ್ರವೇಶ ಮಾಡಿದ್ದು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಬೀಳುತ್ತಿದೆ.

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ದೆಹಲಿಗೆ ಭೇಟಿ ನೀಡಿದ್ದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿದರು. ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಜತೆ ಇದ್ದರು.

ಬಿಸಿಲ ಝಳ

ಬಿಸಿಲ ಝಳ

ಒಂದೆಡೆ ಮಾನ್ಸುನ್ ಮಾರುತಗಳು ದೇಶವನ್ನು ಪ್ರವೇಶ ಮಾಡಿದ್ದರೂ ಬಿಸಿಲ ಝಳ ಕಡಿಮೆಯಾಗಿಲ್ಲ. ವಾರಣಾಸಿಯಲ್ಲಿ ಬುಧವಾರ ಕಂಡು ಬಂದ ದೃಶ್ಯ ಬಿಸಿಲ ತಾಪದ ಪರಿಣಾಮವನ್ನು ಹೇಳುತ್ತಿತ್ತು.

ಸಾಧಕಿಗೆ ಅಭಿನಂದನೆ

ಸಾಧಕಿಗೆ ಅಭಿನಂದನೆ

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೀತೆ ಸ್ಪರ್ಧೆಯಲ್ಲಿ ಸಾಧನೆ ಮರೆದ ಬಾಲಕಿ ಮರಿಯಮ್ ಸಿದ್ದಕ್ವಿ ಅವರನ್ನು ಅಭಿನಂದಿಸಿದರು.

English summary
News in Pics: Delhi Congress members brave water cannons as they protest against Delhi Chief Minister Arvind Kejriwal in New Delhi on Wednesday. President Pranab Mukherjee and Prime Minister Narendra Modi with newly sworn-in Chief Information Commissioner Vijai Sharma at Rashtrapati Bhavan in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X