ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಛಾಯಾಗ್ರಾಹಕರಾದ ಸಿಎಂ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಏ. 28: ಸುದ್ದಿ ಇರಲಿ, ಬಿಡಲಿ ಚಿತ್ರಗಳಿಗೆ ಕೊರತೆ ಇರಲ್ಲ ಬಿಡಿ. ಫೋಟೋ ನೋಡಿದವರು ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳಬಹುದು. ಏನೇ ಆದರೂ ಸೆಲೆಬ್ರೆಟಿಗಳು, ರಾಜಕಾರಣಿಗಳು ಹೋದ ಕಡೆಯಲ್ಲಾ ಕ್ಯಾಮರಾಗಳು ಅಡ್ಡಾಡುತ್ತಿರುತ್ತವೆ.

ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಸ್ವತಃ ಛಾಯಾಗ್ರಾಹಕರಾದ ಸಿಎಂ ಸಿದ್ದರಾಮಯ್ಯ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮುಖ್ಯಮಂತ್ರಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ನಟಿ ಜೆನ್ನಿಫರ್ ಕೋತ್ವಾಲ್, ತಮ್ಮವ ಗೆದ್ದ ಎಂದು ಬಣ್ಣ ಎರಚಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು. ರಣಬೀರ್ ಕಪೂರ್-ಅನುಷ್ಕಾ ಅಭಿಮಾನಿಗಳನ್ನು ರಂಜಿಸಿದ ಬಗೆ ಎಲ್ಲವನ್ನು ಚಿತ್ರದಲ್ಲಿ ನೋಡಿ....

ಸಿದ್ದು ಛಾಯಾಗ್ರಹಣ

ಸಿದ್ದು ಛಾಯಾಗ್ರಹಣ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೋಗ್ರಫಿ ಮೂಡ್ ನಲ್ಲಿದ್ದರು. ನಟಿ ಜೆನ್ನಿಫರ್ ಕೊತ್ವಾಲ್ ಜತೆಗಿದ್ದದ್ದು ನೋಟದ ಗ್ಲಾಮರ್ ಮತ್ತಷ್ಟು ಹೆಚ್ಚು ಮಾಡಿತ್ತು.

ಜೆನ್ನಿಫರ್ ಸೆಲ್ಫಿ

ಜೆನ್ನಿಫರ್ ಸೆಲ್ಫಿ

ಚಿತ್ರಕಲಾ ಪರಿಷತ್ ನಲ್ಲಿ ಛಾಯಾಚಿತ್ರ ಪತ್ರಕರ್ತರು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಘಟನಾವಳಿಗಳನ್ನು ಮೆಲಕು ಹಾಕಿದರು. ಸಿಎಂ ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಜೆನ್ನಿಫರ್ ಕೊತ್ವಾಲ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.

ಸುಂದರಿಯರ ನೋಟಕ್ಕೆ ಎಣೆಯೆಲ್ಲಿ?

ಸುಂದರಿಯರ ನೋಟಕ್ಕೆ ಎಣೆಯೆಲ್ಲಿ?

ತಾವೇ ನಿರ್ಮಾಣ ಮಾಡಿರುವ ಸಿನಿಮಾವೊಂದರ ಪ್ರದರ್ಶನದ ವೇಳೆ ಕಾಣಿಸಿಕೊಂಡ ಅಮೆರಿಕನ್ ನಟಿ ಸಲ್ಮಾ ಜತೆ ಅಭುಮಾನಿಗಳು ಫೋಸ್ ನೀಡಿದ ಬಗೆ.

ಮಗುವಿಗೆ ಪೊಲೀಯೊ

ಮಗುವಿಗೆ ಪೊಲೀಯೊ

ಮಹಾಮಾರಿ ಪೊಲೀಯೊವನ್ನು ಭಾರತದಿಂದ ಹೊರದಬ್ಬಲಾಗಿದೆ. ವಿಶ್ವಸಂಸ್ಥೆಯ ಪೊಲೀಯೋ ನಿರ್ಮೂಲನೆ ಅಭಿಯಾನಕ್ಕೆ ಕೈ ಜೋಡಿಸಿದ ಅಮೆರಿಕದ ನಟಿ ಸಲ್ಮಾ ತಮ್ಮ ಮಗುವಿಎಗೆ ಪೊಲೀಯೊ ಹಾಕಿಸಿ ಜಾಗೃತಿ ಮೂಡಿಸಿದರು.

ವಿರಾಟ್ ನೋಡ್ತಾ ಇಲ್ಲ!

ವಿರಾಟ್ ನೋಡ್ತಾ ಇಲ್ಲ!

ಅನುರಾಗ್ ಕಶ್ಯಪ್ ಅವರ ಹೊಸ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ಜತೆಯಾಗಿ ಕಾಣಿಸಿಕೊಂಡ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ. ಹೊಸ ಸಿನಿಮಾ 'ಬಾಂಬೆ ವೆಲ್ ವೆಟ್' ಮೇ 15 ರಂದು ಬಿಡುಗಡೆಯಾಗಲಿದ್ದು ಅಪಾರ ನಿರೀಕ್ಷೆ ಹುಟ್ಟಿಸಿದೆ.

ಬಣ್ಣದ ಹೋಳಿ ಅಲ್ಲ

ಬಣ್ಣದ ಹೋಳಿ ಅಲ್ಲ

ಇದು ಬಣ್ಣದ ಹೋಳಿ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ. ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆ ಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿದ್ದನ್ನು ಕಾರ್ಯಕರ್ತರು ಬರಮಾಡಿಕೊಂಡ ಪರಿ ಹೀಗಿತ್ತು.

ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಪಘಾನಿಸ್ತಾನದ ಅಧ್ಯಕ್ಷ ಮಹಮದ್ ಅಶ್ರಫ್ ಗಿಲಾನಿ ಅವರನ್ನು ಹಸ್ತಲಾಘವ ನೀಡಿ ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹಾಜರಿದ್ದರು. ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಯುರೋಪಿಯನ್ ದೇಶಗಳ ಪ್ರವಾಸ ಮುಗಿಸಿ ಮೇಕ್ ಇನ್ ಇಂಡಿಯಾ ಅಭಿಯಾನದ ಕುರಿತು ಸಮಗ್ರ ಮಾಹಿತಿ ನೀಡಿ ಬಂದಿದ್ದರು.

ಪ್ರತಿಪಕ್ಷ ಪ್ರಲಾಪ

ಪ್ರತಿಪಕ್ಷ ಪ್ರಲಾಪ

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡುವಂತೆ ಆಗ್ರಹಿಸಿದರು. ಅನೇಕ ದಿನಗಳಿಂದ ಭೂಸ್ವಾಧೀನ ಕಾಯ್ದೆ ವಿವಾದದ ಕೇಂದ್ರ ಬಿಂದುವಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.

English summary
News in Pics: Karnataka CM Siddaramaiah with actress Jeniffer Kothwal, tries his hand on camera during the inauguration of "Frozen Memories 2015", in Bengaluru. President Pranab Mukherjee with his Afghanistan counterpart Mohammad Ashraf Ghani at the forecourt of Rashtrapati Bhavan during the ceremonial welcome in New Delhi on Tuesday. Here some more Photos tom like.....
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X