ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ವೀರ ಸೇನಾನಿ ಸಾವರ್ ಕರ್ ಗೆ ನಮನ

|
Google Oneindia Kannada News

ನವದೆಹಲಿ, ಮೇ 28: ದೇಶಾದ್ಯಂತ ಗುರುವಾರ ಸ್ವಾತಂತ್ರ್ಯ ಸೇನಾನಿ ವಿನಾಯಕ್ ದಾಮೋದರ್ ಸಾವರ್ ಕರ್ ಅವರ 132 ನೇ ಜಯಂತಿಯನ್ನು ಆಚರಿಸಲಾಯಿತು. ಬಿಜೆಪಿ ನಾಯಕರಾದ ಅಮಿತ್ ಶಾ, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ಗಣ್ಯರು ಸಾವರ್ ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗೆಲ್ಲಲು ಯುವಶಕ್ತಿಯಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ಸಾವರ್ ಕರ್(28 ಮೇ 1883 ರಿಂದ 26 ಫೆಬ್ರವರಿ 1966) ಸ್ವಾತಂತ್ರ್ಯ ಸೇನಾನಿ ಮಾತ್ರ ಆಗಿಲ್ಲದೆ ಸಾಹಿತಿ ಮತ್ತು ಕವಿ ಸಹ ಆಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಸಾವರ್ ಕರ್ ಅವರಿಗೆ ಗೌರವ ಸೂಚಿಸಿದ್ದಾರೆ.[ವೀರ ಸಾವರಕರ್ ದೇಹತ್ಯಾಗ ಮಾಡಿ ಅಮರರಾದ ದಿನ]

ಇದರ ಜತೆಗೆ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು. ಬಿಸಿಲಿನ ಧಗೆಗೆ ಬಸವಳಿದು ತಣ್ಣೀರಿನಲ್ಲಿ ಸ್ನಾನ ಮಾಡಿದ ಹುಡುಗ... ಮತ್ತಷ್ಟು ಸುದ್ದಿ ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ಸುಷ್ಮಾ ಸ್ವರಾಜ್ ನಮನ

ಸುಷ್ಮಾ ಸ್ವರಾಜ್ ನಮನ

ಕೇಂದ್ರ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ ಭವನದಲ್ಲಿ ವೀರ ಸಾವರ್ ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸ್ಪೀಕರ್ ಮತ್ತು ಕೇಂದ್ರ ಸಚಿವರು

ಸ್ಪೀಕರ್ ಮತ್ತು ಕೇಂದ್ರ ಸಚಿವರು

ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ವೀರ ಸಾವರ್ ಕರ್ ಅವರಿಗೆ ಗೌರವ ಸೂಚಿಸಿದರು.

ಎಲ್ಲ ಪಕ್ಷದ ಮುಖಂಡರು ಭಾಗಿ

ಎಲ್ಲ ಪಕ್ಷದ ಮುಖಂಡರು ಭಾಗಿ

ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಕೇಂದ್ರ ಸಚಿವರೊಂದಿಗೆ ಸಾವರ್ ಕರ್ ಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡರಾದ ನವೀನ್ ಜಿಂದಾಲ್.

ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿನಾಯಕಿ

ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿನಾಯಕಿ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಗುರುವಾರ ತಮ್ಮ ಕ್ಷೇತ್ರ ರಾಯ್ ಬರೇಲಿಗೆ ತೆರಳಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಹಿತಿ ಪಡೆದರು.

ದಿಗ್ಗಜರ ಸಮಾಗಮ

ದಿಗ್ಗಜರ ಸಮಾಗಮ

ಮುಂಬೈನ ಜೀಯೋ ಗಾರ್ಡನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಜರಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್.

ಗಂಗಾ ನದಿಯಲ್ಲಿ ಪುಣ್ಯ ಸ್ನಾನ

ಗಂಗಾ ನದಿಯಲ್ಲಿ ಪುಣ್ಯ ಸ್ನಾನ

ಹರಿದ್ವಾರದ ಗಂಗಾ ನದಿಯಲ್ಲಿ ಪುಣ್ಯ ಸ್ವಾನ ಮಾಡಿ ಪುನೀತರಾಗಲು ಸೇರಿದ್ದ ಭಕ್ತರು. ಗಂಗಾ ದುಶ್ಶೇರಾ ಹಬ್ಬದ ಪ್ರಯುಕ್ತ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಪವಿತ್ರ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.

ಆಗಮಿಸಿದ ಭಕ್ತರ ದಂಡು

ಆಗಮಿಸಿದ ಭಕ್ತರ ದಂಡು

ಅಲಹಾಬಾದ್ ನ ಸಂಗಮ್ ಗೆ ಆಗಮಿಸಿದ ಭಕ್ತರ ದಂಡು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ. ಇಲ್ಲಿ ಸಹ ಗಂಗಾ ದುಶ್ಶೇರಾ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಬಿಸಿಲ ಧಗೆ ತಾಳಲಾರೆ

ಬಿಸಿಲ ಧಗೆ ತಾಳಲಾರೆ

ಬೇಸಿಗೆ ಧಗೆ ಪ್ರತಿದಿನ ಏರುತ್ತಿದ್ದು ಉತ್ತರ ಭಾರತ ಸೇರಿದಂತೆ ತೇಲಂಗಾಣ ಮತ್ತು ಆಂಧ್ರದಲ್ಲಿ ಅನೇಕರನ್ನು ಬಲಿ ತೆಗೆದುಕೊಂಡಿದೆ. ಕೋಲ್ಕತ್ತಾದ ಗಂಗಾ ನದಿಯಲ್ಲಿ ಬಾಲಕನೊಬ್ಬ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳುತ್ತಿದ್ದ ಬಗೆ.

ಪರಿಸರ ಸಂರಕ್ಷಣೆ ಜಾಗೃತಿ

ಪರಿಸರ ಸಂರಕ್ಷಣೆ ಜಾಗೃತಿ

ಕೋಲ್ಕತ್ತಾದ ಟ್ಯಾಕ್ಸಿ ಚಾಲಕರೊಬ್ಬರು ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ತಮ್ಮ ಟ್ಯಾಕ್ಸಿಯನ್ನು ಗಿಡಗಳಿಂದ ಅಲಂಕರಿಸಿದ ಬಗೆ. ಮಹಾನಗರಗಳಲ್ಲಿ ಪ್ರತಿದಿನ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದನ್ನು ತಡೆಯಲು ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮ ಸಮರ್ಪಕ ಅನುಷ್ಠಾನವಾಗುತ್ತಿಲ್ಲ.

English summary
News in Pics: External Affairs Minister Sushma Swaraj pays tributes to Swatantryaveer Vinayak Damodar Savarkar, on his birth anniversary, at Parliament House, in New Delhi. Devotees take dip in holy Ganga River on the occasion of Ganga Dussehra in Haridwar. Here are some more Photos with news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X