• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳವಾರ ಘಟನಾವಳಿಗಳ ಮೇಲೆ ಚಿತ್ರ ನೋಟ

|

ನವದೆಹಲಿ, ಆಗಸ್ಟ್. 18: ಪಾರ್ಸಿ ಸಮುದಾಯದವರಿಗೆ ಮಂಗಳವಾರ ಆಗಸ್ಟ್ 18 ರಂದು ಹೊಸ ವರ್ಷಾಚರಣೆ. ಬಿಹಾರದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ 1.25 ಲಕ್ಷ ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದರು.

ಬಾಂಗ್ಲಾ ಬಂದ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಜನ ಸಂಚಾರ ವಿರಳವಾಗಿತ್ತು. ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಮಹಾನಗರ ಮಂಗಳವಾರ ಸ್ಥಬ್ದವಾಗಿತ್ತು. ಬಾಲಿವುಡ್ ಬೆಡಗಿಯರಾದ ಕತ್ರೀನಾ ಕೈಪ್ ಮತ್ತು ಸೋನಾಕ್ಷಿ ಸಿನ್ಹಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮಂಗಳವಾರ ದೇಶಾದ್ಯಂತ ನಡೆದ ಘಟನಾವಳಿಗಳ ಚಿತ್ರ ಸುದ್ದಿ ಇಲ್ಲಿದೆ. (ಪಿಟಿಐ ಚಿತ್ರಗಳು)

ಹೊಸ ವರ್ಷಕ್ಕೆ ಸ್ವಾಗತ

ಹೊಸ ವರ್ಷಕ್ಕೆ ಸ್ವಾಗತ

ಪಾರ್ಸಿ ಸಮುದಾಯದವರು ಮಂಗಳವಾರ ಆಗಸ್ಟ್ 18 ರಂದು ಹೊಸ ವರ್ಷಾಚರಣೆ ಮಾಡಿದರು. ನಾಗಪುರದಲ್ಲಿ ನವರೋಜ್ ಆಚರಣೆ ಮಾಡಿದ ಪಾರ್ಸಿ ಸಮುದಾಯದ ಗೃಹಿಣಿಯರು.

ವಾಸ್ತುಶಿಲ್ಪ ನೋಡಿರಿ

ವಾಸ್ತುಶಿಲ್ಪ ನೋಡಿರಿ

ಪಾರ್ಸಿ ಸಮುದಾಯದವರು ಮುಂಬೈನ ದೇವಾಲಯವೊಂದಕ್ಕೆ ಭೇಟಿ ನೀಡಿ ವಾಸ್ತುಶಿಲ್ಪಗಳನ್ನು ವೀಕ್ಷಣೆ ಮಾಡಿದರು. ಪಾರ್ಸಿ ಪಂಚಾಗದ ಪ್ರಕಾರ ಆಗಸ್ಟ್ 18 ರಂದು ಹೊಸ ವರ್ಷ ಆರಂಭವಾಗುತ್ತದೆ.

ಬಂದ್ ಎಫೆಕ್ಟ್

ಬಂದ್ ಎಫೆಕ್ಟ್

ಬಾಂಗ್ಲಾ ಬಂದ್ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಫ್ಲೈ ಓವರ್ ವೊಂದು ಮಂಗಳವಾರ ಕಂಡಿದ್ದು ಹೀಗೆ. ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಮಹಾನಗರ ಮಂಗಳವಾರ ಸ್ಥಬ್ದವಾಗಿತ್ತು.

ಕಾಂಗ್ರೆಸ್ ನಿಂದ ರೈಲು ತಡೆ

ಕಾಂಗ್ರೆಸ್ ನಿಂದ ರೈಲು ತಡೆ

ಸಸ್ನಾಗರ್ ರೈಲ್ವೆ ನಿಲ್ದಾಣದ ಬಳಿ ರೈಲು ತಡೆದು ಆಕ್ರೋಶ ಹೊರಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು.

ಬಿಹಾರಕ್ಕೆ ವಿಶೇಷ ಪ್ಯಾಕೇಜ್

ಬಿಹಾರಕ್ಕೆ ವಿಶೇಷ ಪ್ಯಾಕೇಜ್

ಬಿಹಾರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 1.25 ಲಕ್ಷ ಕೋಟಿ ರುಪಾಯಿ ವಿಶೇಷ ನೆರವು ಘೋಷಿಸಿದರು. ಅಲ್ಲದೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಸ್ವದೇಶಕ್ಕೆ ಮೋದಿ

ಸ್ವದೇಶಕ್ಕೆ ಮೋದಿ

ಅರಬ್ ರಾಷ್ಟ್ರಗಳ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೀಳ್ಕೊಡಲಾಯಿತು.

ಬೆಳ್ಳಿ ಹುಡುಗಿ

ಬೆಳ್ಳಿ ಹುಡುಗಿ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಆಗಮಿಸಿದ ಸೈನಾ ನೆಹ್ವಾಲ್ ಹೈದ್ರಾಬಾದ್ ನಲ್ಲಿ ಪದಕ ಪ್ರದರ್ಶನ ಮಾಡಿದ್ದು ಹೀಗೆ.

ಶಂಕಿತ ಉಗ್ರರು

ಶಂಕಿತ ಉಗ್ರರು

ಉದ್ದಮ್ ಪುರ್ ಉಗ್ರ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಶಂಕಿತರ ಚಿತ್ರಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಮಾಡೆಲ್ ಗಳು

ಮಾಡೆಲ್ ಗಳು

ಶಾನ್ ಇ ಪಾಕಿಸ್ತಾನ ವಸ್ತು ಪ್ರದರ್ಶನ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ವೇಳೆ ಗಮನ ಸೆಳೆದ ಮಾಡೆಲ್ ಗಳು.

ಬಾಲಿವುಡ್ ಲುಕ್

ಬಾಲಿವುಡ್ ಲುಕ್

ಬಾಲಿವುಡ್ ಚಿತ್ರವೊಂದರ ಪ್ರಮೋಶನ್ ವೇಳೆ ಜತೆಯಾಗಿ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರಾದ ಕತ್ರೀನಾ ಕೈಪ್ ಮತ್ತು ಸೋನಾಕ್ಷಿ ಸಿನ್ಹಾ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News in Pics: Prime Minister Narendra Modi announces special package for Bihar during laying of the foundation stone of four-lane Patna-Buxar road and a bridge parallel to the Abdul Bari bridge over river Sone at Koilwar near Ara on Tuesday. Parsi Community people visit a fire temple on the occasion of their New Year "Navroz" in Nagpur, August 18, 2015.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more