ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರದ ತಾಜಾ ಸುದ್ದಿಗಳ ಚಿತ್ರ ಸಂಪುಟ

|
Google Oneindia Kannada News

ನವದೆಹಲಿ, ಏ. 7 : ದೇಶದೆಲ್ಲೆಡೆ ಜನರು ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಬಿಸಿಲಿನ ಝಳದೊಂದಿಗೆ ಸೇರಿಕೊಂಡಿರುವ ಮಾಲಿನ್ಯ ಜನರ ಜೀವ ಹಿಂಡುತ್ತಿದೆ. ಮಂಗಳವಾರದ ವಿವಿಧ ಚಿತ್ರಗಳೇ ಅದಕ್ಕೆ ಸಾಕ್ಷಿ.

ಅಕಾಲಿಕ ಮಳೆಗೆ ಬೆಳೆ ಕಳೆದುಕೊಂಡ ರೈತರ ಮನವಿ ಆಲಿಸಿದ ಬಾಲಿವುಡ್ ತಾರೆ, ರಾಜ್ಯಸಭಾ ಸದಸ್ಯೆ ಹೇಮಾ ಮಾಲಿನಿ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ. ದೆಹಲಿಯಲ್ಲಿ ನಡೆಯುತ್ತಿರುವ ಪರಿಸರ ಸ್ನೇಹಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಕೇಂದ್ರಗಳಿಗೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಭೇಟಿ ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)[ಬುಲೆಟ್ ಏರಿದ ಮಹೇಂದ್ರ, ಅರಳಿದ ಹೂಗಳ ಸೌಂದರ್ಯ]

ನಮಗೆ ನೀರು ಕೊಡಿ

ನಮಗೆ ನೀರು ಕೊಡಿ

ಬೇಸಿಗೆ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು ಎಲ್ಲೆಡೆ ಕುಡಿವ ನೀರಿಗೆ ಹಾಹಾಕಾರ ಆರಂಭವಾಗಿದೆ. ನಮಗೆ ಕುಡಿಯುವ ನೀರು ಒದಗಿಸಿ ಎಂದು ಆಗ್ರಹಿಸಿ ಪಾನ್ ಬೀಡಾ ವ್ಯಾಪಾರಿಗಳು ದೆಹಲಿಯಲ್ಲಿ ಬೀದಿಗಳಿದು ಪ್ರತಿಭಟನೆ ನಡೆಸಿದರು.

ಗೆಳೆಯರ ಹುಡುಕುತ್ತಾ..

ಗೆಳೆಯರ ಹುಡುಕುತ್ತಾ..

ಗೆಳೆಯರೇ ಎಲ್ಲಿರುವಿರಿ, ನಿಮ್ಮ ಬಳಿಗೆ ನಾನು ಬರುತ್ತಿದ್ದೇನೆ, ಸ್ವಲ್ಪ ತಡೆಯಿರಿ ಎಂಬಂತೆ ಗರಿಗಳನ್ನು ಅಗಲಿಸಿ ಹೊರಟ ರಾಷ್ಟ್ರಪಕ್ಷಿ. ಬಿಕೆನಾರ್ ನ ಉದ್ಯಾನವೊಂದರಲ್ಲಿ ಸ್ವಚ್ಛಂದವಾಗಿ ವಿಹರಿಸಿದ ನವಿಲು ಕ್ಯಾಮರಾ ಕಣ್ಣಿಗೆ ಬಿದ್ದದ್ದು ಹೀಗೆ.

ಎಲ್ಲಾ ಸರಿಯಾಗಿದೆಯಾ?

ಎಲ್ಲಾ ಸರಿಯಾಗಿದೆಯಾ?

ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಕ್ತಿ ಮಹಮದ್ ಸಯ್ಯೀದ್ ಮತ್ತು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಮಾತುಕತೆ ನಡೆಸಿದರು. ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ರಚಿಸಿಕೊಂಡಿದ್ದು ಕೆಲದಿನದ ಹಿಂದೆ ದೋಸ್ತಿಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಚಿನ್ನ ಹೇಳು ಹೇಗಿರುವೆ?

ಚಿನ್ನ ಹೇಳು ಹೇಗಿರುವೆ?

ಪುತ್ರಿ ಝೀವಾ ಜತೆ ರಾಂಚಿಯಲ್ಲಿ ಕಾಣಿಸಿಕೊಂಡ ಸಾಕ್ಷಿ ಸಿಂಗ್. ಮಹೇಂದ್ರ ಸಿಂಗ್ ಧೋನಿ ಸಹ ಜಾಲಿ ಮೂಡ್ ನಲ್ಲಿದ್ದು ಏಪ್ರಿಲ್ 8 ರಿಂದ ಆರಂಭವಾಗಲಿರುವ ಐಪಿಎಲ್ ಗೆ ಸಜ್ಜಾಗುತ್ತಿದ್ದಾರೆ.

ಸಿನಿಮಾ ಶೂಟಿಂಗ್ ಅಲ್ಲ

ಸಿನಿಮಾ ಶೂಟಿಂಗ್ ಅಲ್ಲ

ಬಾಲಿವುಡ್ ತಾರೆ, ರಾಜ್ಯಸಭಾ ಸದಸ್ಯೆ ಹೇಮಾ ಮಾಲಿನಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೇಗಿದೆ ಉತ್ಪನ್ನ?

ಹೇಗಿದೆ ಉತ್ಪನ್ನ?

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ನವದೆಹಲಿಯಲ್ಲಿ ನಡೆಯುತ್ತಿರುವ ಪರಿಸರ ಸ್ನೇಹಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಕೇಂದ್ರಗಳಿಗೆ ಭೇಟಿ ನೀಡಿದರು.

ಮಂಜಲ್ಲ,, ಸರಿಯಾಗಿ ನೋಡಿ

ಮಂಜಲ್ಲ,, ಸರಿಯಾಗಿ ನೋಡಿ

ಬಿಕೆನಾರ್ ನಲ್ಲಿ ಮಾಲಿನ್ಯ ಪ್ರಮಾಣ ಮೀತಿ ಮೀರಿದ್ದು ಧೂಳಿನಲ್ಲಿ ಬೈಕ್ ಸವಾರರು ಆಗಮಿಸುತ್ತಿದ್ದ ದೃಶ್ಯ ಕಂಡಿದ್ದು ಹೀಗೆ. ವಾತಾವರಣದ ಉಷ್ಣತೆ ಮತ್ತು ಮಾಲಿನ್ಯ ಪ್ರಮಾಣ ಪ್ರತಿದಿನ ಏರುತ್ತಿದ್ದು ಮಹಾನಗರಗಳಲ್ಲಿ ವಾಸ ಮಾಡುವುದು ದುಸ್ತರವಾಗಿ ಪರಿಣಮಿಸುತ್ತಿದೆ.

ತೃತೀಯ ರಂಗದ ಆರಂಭಿಕ ದಾಂಡಿಗ?

ತೃತೀಯ ರಂಗದ ಆರಂಭಿಕ ದಾಂಡಿಗ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕ್ರಿಕೆಟ್ ಆಡುವುದರ ಮೂಲಕ ಲಕ್ನೋದಲ್ಲಿ ಹಮ್ಮಿಕೊಂಡಿದ್ದ ಪಂದ್ಯಾವಳಿಯೊಂದನ್ನು ಉದ್ಘಾಟಿಸಿದರು.

ತುಂಬು ಚಂದ್ರನ ನೋಡಿ

ತುಂಬು ಚಂದ್ರನ ನೋಡಿ

ಸೋಮವಾರ ರಾತ್ರಿ ಕಂಡು ಬಂದ ತುಂಬು ಚಂದಿರ. ಮೊನ್ನೆಯಷ್ಟೇ ಚಂದ್ರ ಗ್ರಹಣ ನಡೆದಿದ್ದು ಚಂದ್ರ ಮರುಹುಟ್ಟು ಪಡೆದು ಎದ್ದುಬಂದನೋ ಎಂಬಂತೆ ಒಂದು ಕ್ಷಣ ಕಂಡಿದ್ದು ಸತ್ಯ.

English summary
News in Pics: Prime Minister Narendra Modi with J & K Chief Minister Mufti Mohammad Sayeed in a meeting in New Delhi on Tuesday. Bollywood actress and BJP MP Hema Malini talks to villagers regarding damage to crops caused by unseasonal rains and hailstroms in her constituency in Mathura.. and some other news in pics of April 7, 2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X