• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದಸ್ಯರ ಅಮಾನತು: ಬೀದಿಗಿಳಿದ ಕಾಂಗ್ರೆಸ್ ನಾಯಕರು

|

ನವದೆಹಲಿ, ಆ. 04: ಸಂಸತ್ ಸದಸ್ಯರನ್ನು ಅಮಾನತು ಖಂಡಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ. ಮಳೆ ಆರ್ಭಟಕ್ಕೆ ತತ್ತರಿಸಿದ್ದ ಈಶಾನ್ಯ ಭಾರತ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ.

ಪಶ್ಚಿಮ ಬಂಗಾಳದಲ್ಲಿ ಜನರು ಸುರಕ್ಷಿತ ಪ್ರದೇಶ ಅರಿ ವಲಸೆ ಹೋಗುತ್ತಿದ್ದಾರೆ. ಗಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಫಿಲ್ಮ್ ಮತ್ತು ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಫ್ ಟಿಐಐ) ವಿದ್ಯಾರ್ಥಿಗಳ ಪ್ರತಿಭಟನೆ ದೆಹಲಿಯಲ್ಲಿ ಮುಂದುವರಿದೆ....ಮಂಗಳವಾರ ದೇಶಾದ್ಯಂತ ನಡೆದ ಸುದ್ದಿಗಳ ಚಿತ್ರ ಸಂಪುಟ ಇಲ್ಲಿದೆ(ಪಿಟಿಐ ಚಿತ್ರಗಳು)

ಕಾಂಗ್ರೆಸ್ ಆಕ್ರೋಶ

ಕಾಂಗ್ರೆಸ್ ಆಕ್ರೋಶ

ಸಂಸತ್ ಕಲಾಪದಿಂದ ಕಾಂಗ್ರೆಸ್ ಸದಸ್ಯರನ್ನು ಐದು ದಿನಗಳ ಕಾಲ ಅಮಾನತು ಮಾಡಿದ ಸ್ಪೀಕರ್ ಕ್ರಮ ಖಂಡಿಸಿದ ಕಾಂಗ್ರೆಸ್ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಜಾಪ್ರಭುತ್ವ ಕೊಲೆ

ಪ್ರಜಾಪ್ರಭುತ್ವ ಕೊಲೆ

ಸಂಸತ್ ಸದಸ್ಯರನ್ನು ಅಮಾನತು ಮಾಡಿರುವ ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.

ಎನ್ ಡಿಎ ವಿರುದ್ಧ ಖರ್ಗೆ ವಾಗ್ದಾಳಿ

ಎನ್ ಡಿಎ ವಿರುದ್ಧ ಖರ್ಗೆ ವಾಗ್ದಾಳಿ

ಸರ್ಕಾರದ ಇಂಥ ಕ್ರಮ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆರೋಪ ಬಂದವರು ಮೊದಲು ರಾಜೀನಾಮೆ ನೀಡಲಿ ನಂತರ ಚರ್ಚೆ ಮಾಡಬಹುದಲ್ಲ? ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಬೆಂಗಳೂರಲ್ಲೂ ಪ್ರತಿಭಟನೆ

ಬೆಂಗಳೂರಲ್ಲೂ ಪ್ರತಿಭಟನೆ

ಸ್ಪೀಕರ್ ಸುಮಿತ್ರಾ ಮಹಾಜನ್ ಕ್ರಮವನ್ನು ಖಂಡಿಸಿ ಬೆಂಗಳೂರು ಮತ್ತು ಮಂಗಳೂರಿನಲ್ಲಿಯೂ ಕಾಂಗ್ರೆಸ್ ನಾಯಕರು ಪ್ರತಿಬಟನೆ ನಡೆಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಪ್ರತಿಭಟನೆ

ನವದೆಹಲಿಯ ಜಂತರ್ ಮಂತರ್ ನಲ್ಲಿ ಎಫ್ ಟಿಐಐ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದ್ದು ಅಧ್ಯಕ್ಷ ಗಜೇಂದ್ರ ಚೌಹಾಣ್ ಅವರನ್ನು ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ದೆಹಲಿ ಮೆಟ್ರೋ ನೋಡಿ

ದೆಹಲಿ ಮೆಟ್ರೋ ನೋಡಿ

ದೆಹಲಿ ಮೆಟ್ರೋ ಕಾಮಗಾರಿಯ ಮೂರನೇ ಹಂತ ಪ್ರಗತಿಯಲ್ಲಿದ್ದು ಸುರಂಗವೊಂದನ್ನು ಕೊರೆಯುತ್ತಿದ್ದ ಅಂತಿಮ ದೃಶ್ಯ.

ಸೋನಂ ಕಪೂರ್ ಹೆಜ್ಜೆ

ಸೋನಂ ಕಪೂರ್ ಹೆಜ್ಜೆ

ಮುಂಬೈ ನಲ್ಲಿ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ಬೆಡಗಿ ಸೋನಂ ಕಪೂರ್.

ಎಲ್ಲಿಗೆ ಪಯಣ

ಎಲ್ಲಿಗೆ ಪಯಣ

ಕೊಮೆನ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಪಶ್ಚಿಮ ಬಂಗಾಳ ಮತ್ತು ಮಣಿಪುರ ನಲುಗಿ ಹೋಗಿದೆ. ಬರ್ದ್ವಾನ್ ಜಿಲ್ಲೆಯಲ್ಲಿ ನಿರಾಶ್ರಿತರಾದವರು ಸುರಕ್ಷಿತ ಸ್ಥಳ ಅರಸಿ ಹೊರಟ ದೃಶ್ಯ.

ಮಳೆ ಪರಿಣಾಮ

ಮಳೆ ಪರಿಣಾಮ

ಧಾರಾಕಾರ ಮಳೆ ಪರಿಣಾಮ ಗಂಗಾ ನದಿ ಉಕ್ಕಿ ಹರಿದಿದ್ದು ಕೋಲ್ಕತ್ತಾದ ಕೆಲ ಪ್ರದೇಶಗಳು ಜಲಾವೃತವಾಗಿವೆ.

ಕಡಿಮೆಯಾದ ಮಳೆ

ಕಡಿಮೆಯಾದ ಮಳೆ

ಪಶ್ಚಿಮ ಬಂಗಾಳದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು ಹಾನಿ ಲೆಕ್ಕ ಇನ್ನು ಸಿಕ್ಕಿಲ್ಲ. ನೀರಿನಿಂದ ಆವೃತವಾದ ಬೇಲೂರು ಮಠದ ಚಿತ್ರವನ್ನು ಸಾಧುವೊಬ್ಬರು ಸೆರೆ ಹಿಡಿಯುತ್ತಿದ್ದಾಗ ಕಂಡುಬಂದ ದೃಶ್ಯ.

ಶ್ರೀಲಂಕಾಕ್ಕೆ ಬಂದಿಳಿದ ಹುಲಿಗಳು

ಶ್ರೀಲಂಕಾಕ್ಕೆ ಬಂದಿಳಿದ ಹುಲಿಗಳು

ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿ ಆಡಲು ತೆರಳಿರುವ ಭಾರತ ತಂಡ ಸೋಮವಾರ ಕೊಲಂಬೋಗೆ ಬಂದಿಳಿಯಿತು.

ಕಲಾಂಗೆ ಮುಗಿಯದ ಸಲಾಂ

ಕಲಾಂಗೆ ಮುಗಿಯದ ಸಲಾಂ

ಅಗಲಿದ ಮಾಜಿ ರಾಷ್ಟ್ರಪತಿ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಮಕ್ಕಳಿಬ್ಬರು ನಮನ ಸಲ್ಲಿಸಿದ ದೃಶ್ಯ.

ಸಾಕ್ಷಿ ದರ್ಶನ

ಸಾಕ್ಷಿ ದರ್ಶನ

ಭಾರತ ತಂಡದ ಏಕದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್ ತಮ್ಮ ಮಗು ಝೀವಾಳೊಂದಿಗೆ ರಾಂಚಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಭಾರತ ತಂಡ ಟೆಸ್ಟ್ ಸರಣಿ ಆಡಲು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಶ್ರೀಲಂಕಾಕ್ಕೆ ತೆರಳಿದೆ.

English summary
News In Pics: Congress members from both houses, led by party president Sonia Gandhi and vice president Rahul Gandhi wore black bands, on Tuesday to protest the suspension of 25 MPs of the party by Lok Sabha Speaker Sumitra Mahajan. A monk takes picture at waterlogged Belur Math in Howrah district of West Benga. Here are some other news in pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X