ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಿಕ್ ಮಹಾಕುಂಭಮೇಳದಲ್ಲಿ ಭಕ್ತರ ಪುಣ್ಯಸ್ನಾನ

|
Google Oneindia Kannada News

ನವದೆಹಲಿ, ಜು. 14: ನಾಸಿಕ್ ನಲ್ಲಿ ಕುಂಭಮೇಳದ ಸಂಭ್ರಮ ಆರಂಭವಾಗಿದೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮೇಳಕ್ಕೆ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ.

ನಾಸಿಕ್‌ನ ರಾಮಕುಂಡದಲ್ಲಿ ಧ್ವಜಾರೋಹಣ ಮೂಲಕ ಮೇಳಕ್ಕೆ ಜಾಲನೆ ನೀಡಲಾಯಿತು. ಮೊದಲನೇ 'ಶಾಹಿ' ಸ್ನಾನ ಆಗಸ್ಟ್‌ 29ರಂದು ನಡೆಯಲಿದೆ. ಎರಡನೇ ಶಾಹಿ ಸ್ನಾನ ಸೆ.13ಕ್ಕೆ ಹಾಗೂ ಮೂರನೇ ಶಾಹಿ ಸ್ನಾನ ಸೆ.18ರಂದು ನಡೆಯಲಿದೆ.[ಆಂಧ್ರ, ತೆಲಂಗಾಣ ಸಿಎಂ ಮುಳುಗೆದ್ದ ಬಳಿಕ ದುರಂತ]

ಕಳೆದ ಎರಡು ವರ್ಷಗಳಿಂದ ಕುಂಭಮೇಳದ ತಯಾರಿಗಾಗಿ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ನಾಸಿಕ್‌ ಹಾಗೂ ತ್ರಯಂಬಕೇಶ್ವರ ನಗರಸಭೆಗಳು ಒಟ್ಟು 2,300 ಕೋಟಿ ಹಣ ವ್ಯಯ ಮಾಡಿದ್ದು ಭಕ್ತರಿಗೆ ಸಕಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸೋಮವಾದ ವಿಧ್ಯುಕ್ತವಾಗಿ ಆರಂಭಗೊಂಡ ಕುಂಭಮೇಳದ ಕೆಲ ಚಿತ್ರಗಳು ನಿಮಗಾಗಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ್ದ ಗಣ್ಯರು, ವಿಂಬಲ್ಡನ್ ಜಯಿಸಿ ಭಾರತಕ್ಕೆ ಹಿಂದಿರುಗಿದ ಸಾನಿಯಾ ಮಿರ್ಜಾ ಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸುದ್ದಿಗಳನ್ನು ಚಿತ್ರದಲ್ಲಿ ಕಣ್ತುಂಬಿಕೊಳ್ಳಿ.. (ಪಿಟಿಐ ಚಿತ್ರಗಳು)

ಗೋದಾವರಿ ನದಿಯಲ್ಲಿ ಪುಣ್ಯ ಸ್ನಾನ

ಗೋದಾವರಿ ನದಿಯಲ್ಲಿ ಪುಣ್ಯ ಸ್ನಾನ

ನಾಸಿಕ್ ನಲ್ಲಿ ಕುಂಭಮೇಳದ ಸಂಭ್ರಮ ಆರಂಭವಾಗಿದ್ದು ಭಕ್ತರು ಗೋದಾವರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾದರು.

ಪಾಪಗಳಿಗೆಲ್ಲ ವಿಮೋಚನೆ

ಪಾಪಗಳಿಗೆಲ್ಲ ವಿಮೋಚನೆ

12 ವರ್ಷಗಳ ನಂತರ ನಡೆಯುವ ಕುಂಭಮೇಳಕ್ಕೆ ಆಗಮಿಸಿದ ಗೃಹಿಣಿಯರು ನದಿಯಲ್ಲಿ ಮಿಂದು ಪ್ರಾರ್ಥನೆ ಸಲ್ಲಿಸಿದರು.

ಸ್ವಾಮೀಜಿಗಳ ಮಂತ್ರೋಚ್ಛಾರ

ಸ್ವಾಮೀಜಿಗಳ ಮಂತ್ರೋಚ್ಛಾರ

ಕುಂಭಮೇಳದಲ್ಲಿ ಮಂತ್ರೋಚ್ಛಾರಣೆ ಮಾಡುತ್ತ ಪುಣ್ಯಸ್ನಾನ ಮಾಡಿದ ಸನ್ಯಾಸಿಗಳು ದೇಶದ ಒಳಿತಿಗಾಗಿ ಪ್ರಾರ್ಥಿಸಿದರು.

ಸಾನಿಯಾ ಆಗಮನ

ಸಾನಿಯಾ ಆಗಮನ

ಮಾರ್ಟಿನಾ ಹಿಂಗೀಸ್ ಜತೆಗೂಡಿ ಮಹಿಳೆಯರ ವಿಭಾಗದ ವಿಂಬಲ್ಡನ್ ಡಬಲ್ಸ್ ಮುಡಿಗೇರಿಸಿಕೊಂಡ ಸಾನಿಯಾ ಮಿರ್ಜಾ ಅವರು ಭಾರತಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಸರ್ಕಾರದ ಸಾಧನೆ ತೃಪ್ತಿ

ಸರ್ಕಾರದ ಸಾಧನೆ ತೃಪ್ತಿ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾರತದ ಅತಿದೊಡ್ಡ ಹೆದ್ದಾರಿ ಪ್ರಾಜೆಕ್ಟ್ ನ ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿದರು. ಚೆನ್ನೈ ಮತ್ತು ನಶ್ರೀ ನಡುವೆ ನಿರ್ಮಾಣವಾಗುತ್ತಿರುವ ಹೆದ್ದಾರಿಯ ಪ್ರಗತಿ ವಿವರಗಳನ್ನು ಪಡೆದುಕೊಂಡರು.

ಭಾರತದಲ್ಲಿ ಅಳವಡಿಕೆ ಮಾಡಬಹುದೆ?

ಭಾರತದಲ್ಲಿ ಅಳವಡಿಕೆ ಮಾಡಬಹುದೆ?

ತಜಕಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಅಲ್ಲಿಯ ಅಧ್ಯಕ್ಷ ಇಮಾಲಿ ರಾಮೋನ್ ಜತೆ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಸೋನಿಯಾ ಇಫ್ತಾರ್ ಕೂಟ

ಸೋನಿಯಾ ಇಫ್ತಾರ್ ಕೂಟ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಸಂಜೆ ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್.

ರಾಹುಲ್-ಓಮರ್ ಭೇಟಿ

ರಾಹುಲ್-ಓಮರ್ ಭೇಟಿ

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಸಂಜೆ ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ನ್ಯಾಷನಲ್‌ ಕಾನ್ಫ್‌ರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಜತೆಯಾಗಿ ಕಾಣಿಸಿಕೊಂಡರು.

ಪುಟ್ ಬಾಲ್ ಆಡಿದ ಮಲಾಲಾ

ಪುಟ್ ಬಾಲ್ ಆಡಿದ ಮಲಾಲಾ

ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಪರ ಹೋರಾಟಗಾರ್ತಿ ಪುಟ್ ಬಾಲ್ ಆಡಿದ್ದು ಹೀಗೆ.

English summary
News in Pics: Kumbh Mela, the largest congregation of faith in the world, began at Nasik, with the traditional ceremony of hoisting of flags and thousands of people taking a holy dip in Godavari river. In Trimbakeshwar, Union Home Minister Rajnath Singh and Maharastra state Women and Child Welfare minister Pankaja Munde presided over the ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X