ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೌದಿ ಸುಂದರಿಯರು

|
Google Oneindia Kannada News

ರಿಯಾದ್, ಏಪ್ರಿಲ್, 03: ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸದಲ್ಲಿ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಸೌದಿ ಅರೇಬಿಯಾ ಭೇಟಿಯಲ್ಲಿ ಪ್ರಧಾನಿ, ಸೌದಿ ಕಂಪೆನಿಗಳ ಸಿಇಒ ಹಾಗೂ ಭಾರತೀಯ ಉದ್ಯಮ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ರೈಲ್ವೆ, ರಕ್ಷಣೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.

ಜಿಎಸ್ ಟಿ ಶೀಘ್ರವೇ ಜಾರಿಯಾಗಲಿದೆ. ಈ ಬಗ್ಗೆ ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೋದಿ ಹೇಳಿದರು. ಉದ್ಯಮ ಸ್ನೇಹಿ ವಾತಾವರಣ ದೇಶದಲ್ಲಿದೆ ಎಂದು ತಿಳಿಸಿದರು.[ನರೇಂದ್ರ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದು ಯಾಕೆ?]

ಮೋದಿಯನ್ನು ಭಾರತೀಯ ಮೂಲದದವರು ಸಂಭ್ರಮದಿಂದ ಸ್ವಾಗತಿಸಿದರು. ರಿಯಾದ್ ನ ಮಹಿಳೆಯರು ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಸೌದಿ ಅರೇಬಿಯಾದಲ್ಲಿ ಮೋದಿ.. ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ...

ನರೇಂದ್ರ ಮೋದಿ ಗುರುತಿಸಿ

ನರೇಂದ್ರ ಮೋದಿ ಗುರುತಿಸಿ

ರಿಯಾದ್ ನ ಐಟಿ ಮತ್ತು ಐಟಿಇಎಸ್ ಕೇಂದ್ರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ ಯುವತಿಯರು.

ಸೆಲ್ಫಿ ವಿತ್ ಮೋದಿ

ಸೆಲ್ಫಿ ವಿತ್ ಮೋದಿ

ರಿಯಾದ್ ನ ಐಟಿ ಮತ್ತು ಐಟಿಇಎಸ್ ಕೇಂದ್ರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ಯುವತಿಯರು.

ಭರ್ಜರಿ ಸ್ವಾಗತ

ಭರ್ಜರಿ ಸ್ವಾಗತ

ರಿಯಾದ್ ನ ಎಲ್ ಆಂಡ್ ಟಿ ಕೆಲಸಗಾರರ ಕಾಂಪ್ಲೆಕ್ಸ್ ಗೆ ಭೇಟಿ ನೀಡಿದ ನರೇಂದ್ರ ಮೋದಿ.

ಹೇಗಿದೆ ಹೆಲ್ಮೆಟ್?

ಹೇಗಿದೆ ಹೆಲ್ಮೆಟ್?

ಕಾರ್ಮಿಕರ ಸುರಕ್ಷತೆಗೆ ಬಳಸುವ ಹೆಲ್ಮೆಟ್ ಪರಿಶೀಲಿಸಿದ ಮೋದಿ.

ನೆನಪಿನ ಕಾಣಿಕೆ

ನೆನಪಿನ ಕಾಣಿಕೆ

ನರೇಂದ್ರ ಮೋದಿ ಅವರಿಗೆ ನೆನಪಿನ ಕಾಣಿಕೆಯಾಗಿ ಎಲ್ ಆಂಡ್ ಟಿ ಕಾರ್ಮಿಕರ ಒಕ್ಕೂಟದಿಂದ ಖಡ್ಗವನ್ನು ನೀಡಲಾಯಿತು.

 ಕಾರ್ಮಿಕರೊಂದಿಗೆ ಮೋದಿ

ಕಾರ್ಮಿಕರೊಂದಿಗೆ ಮೋದಿ

ನರೇಂದ್ರ ಮೋದಿ ರಿಯಾದ್ ನ ಕಾರ್ಮಿಕರೊಂದಿಗೆ ತಿಂಡಿ ತಿಂದ ಬಗೆ.

 ಸಹಿ ಮಾಡಿದ ಪ್ರಧಾನಿ

ಸಹಿ ಮಾಡಿದ ಪ್ರಧಾನಿ

ಮಸ್ಮಾಕ್ ನ ಇತಿಹಾಸ ಪ್ರಸಿದ್ಧ ಕೋಟೆಗೆ ಭೇಟಿ ನೀಡಿದ ಪ್ರಧಾನಿ ಹಾಜರಿ ಪುಸ್ತಕಕ್ಕೆ ಸಹಿ ಮಾಡಿದರು.

English summary
Promising easier business environment for global investors, Prime Minister Narendra Modi on Sunday, April 3 said retrospective taxation has been relegated to history, but he is "not able to do anything" on two pending cases from the previous government as "they are sub-judice". Inviting Saudi businesses to come and invest in India in sectors like railways, defence and energy, Modi also said a common indirect taxation regime in form of GST (Goods and Services Tax) was "about to happen". News In Pics: Narendra Modi in Saudi Arabia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X