ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಬ್ರದರ್ಸ್ ಕೈಕುಲುಕಿಸಿದ ಡಿಜಿಟಲ್ ಇಂಡಿಯಾ!

|
Google Oneindia Kannada News

ನವದೆಹಲಿ, ಜು. 02 : ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಹೊಸ ಅಭಿಯಾನಕ್ಕೆ ನಾಗರಿಕರು ಮತ್ತು ಕೈಗಾರಿಕೋದ್ಯಮಿಗಳಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿ ನವದೆಹಲಿಯಲ್ಲಿ ಚಾಲನೆ ನೀಡಿದ್ದು ಭಾರತದ ಪ್ರಮುಖ ಉದ್ಯಮಿಗಳು ಹಾಜರಿದ್ದು ತಮ್ಮಬೆಂಬಲ ಸೂಚಿಸಿದರು.

ಅಂಬಾನಿ ಸಹೋದರರು ಒಟ್ಟಾಗಿ ಕಾಣಿಸಿಕೊಂಡಿದ್ದು ವಿಶೇಷ. ಟಾಟಾ ಗ್ರೂಪ್‌ನ ಸೈರಸ್‌ ಮಿಸ್ಟ್ರಿ, ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರಮಂಗಲಂ ಬಿರ್ಲಾ ಸೇರಿದಂತೆ ಅನೇಕ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಟಾಟಾ ಕಂಪನಿ ಮತ್ತು ಮುಖೇಶ್ ಅಂಬಾನಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡಲು ಸಿದ್ಧ ಎಂದು ಈಗಾಗಲೇ ತಿಳಿಸಿದ್ದಾರೆ. [ಡಿಜಿಟಲ್ ಇಂಡಿಯಾ: ಮೋದಿ ಭಾಷಣದ ಹೈಲೈಟ್ಸ್]

ಇಡೀ ದೇಶವನ್ನು ಡಿಜಿಟಲೀಕರಣ ಗೊಳಿಸುವ ಹಿನ್ನೆಲೆಯಲ್ಲಿ ಅಭಿಯಾನ ಮಹತ್ವ ಪಡೆದುಕೊಂಡಿದ್ದು ಜುಲೈ ಮೊದಲನೇ ವಾರವನ್ನು ಡಿಜಿಟಲ್ ಇಂಡಿಯಾ ಸಪ್ತಾಹ ಎಂದು ಆಚರಣೆ ಮಾಡಲಾಗುತ್ತುದೆ. ಡಿಜಿಟಲ್ ಇಂಡಿಯಾ ಉದ್ಘಾಟನೆ ಕಾರ್ಯಕ್ರಮದ ಒಂದಷ್ಟು ಚಿತ್ರಗಳು ಇಲ್ಲಿವೆ. (ಪಿಟಿಐ ಚಿತ್ರಗಳು)

ಮಹಿಳೆಯರಿಗೆ ಸನ್ಮಾನ

ಮಹಿಳೆಯರಿಗೆ ಸನ್ಮಾನ

ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸಿದ ಮಹಿಳೆಯರನ್ನು ಪ್ರಧಾನಿ ಮೋದಿ ಸನ್ಮಾನಿಸಿದರು. ಡಿಜಿಟಲ್ ಇಂಡಿಯಾ ಬೀರಬಹುದಾದ ಪ್ರಭಾವದ ಬಗ್ಗೆ ಕಿರು ಚಿತ್ರವೊಂದನ್ನು ಪ್ರದರ್ಶನ ಮಾಡಲಾಯಿತು.

ಗ್ರಾಮೀಣ ಭಾಗ ಡಿಜಿಟಲಿಕರಣವಾಗಲಿ

ಗ್ರಾಮೀಣ ಭಾಗ ಡಿಜಿಟಲಿಕರಣವಾಗಲಿ

ಭಾರತದ ಹಳ್ಳಿಗಳಲ್ಲಿ ಡಿಜಿಟಲ್ ಶಿಕ್ಷಣದ ಅರಿವು ಮೂಡಿಸಿದ ಮಹಿಳೆಯರನ್ನು ಲ್ಯಾಪ್ ಟಾಪ್ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಎಲ್ ಕೆ ಅಡ್ವಾಣಿ ಹಾಜರಿ

ಎಲ್ ಕೆ ಅಡ್ವಾಣಿ ಹಾಜರಿ

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೇಂದ್ರ ಸಚಿವ ಸಂಪುಟದ ಮಂತ್ರಿಗಳು ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಡಿಜಿಟಲ್ ಇಂಡಿಯಾ ಪಾಲಿಸಿ ಬಿಡುಗಡೆ

ಡಿಜಿಟಲ್ ಇಂಡಿಯಾ ಪಾಲಿಸಿ ಬಿಡುಗಡೆ

ಡಿಜಿಟಲ್ ಇಂಡಿಯಾದ ಸಮಗ್ರ ರೂಪುರೇಷೆ ಮತ್ತು ಧ್ಯೇಯಗಳನ್ನು ಒಳಗೊಂಡ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋಡಿ ಬಿಡುಗಡೆ ಮಾಡಿದರು. ವಿತ್ತ ಸಚಿವ ಅರುಣ್ ಜೇಟ್ಲಿ ಹಾಜರಿದ್ದರು.

ಮುಖೇಶ್ ಅಂಬಾನಿ ಕುಟುಂಬ

ಮುಖೇಶ್ ಅಂಬಾನಿ ಕುಟುಂಬ

ಕಾರ್ಯಕ್ರಮಕ್ಕೆ ಆಗಮಿಸಿದ್ದ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ. ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ, ಪುತ್ತಿ ಇಶಾ ಅಂಬಾನಿ ಜತೆಗಿದ್ದರು.

ಮುಖೇಶ್ ಅಂಬಾನಿ ಕುಟುಂಬ

ಮುಖೇಶ್ ಅಂಬಾನಿ ಕುಟುಂಬ

ಕಾರ್ಯಕ್ರಮಕ್ಕೆ ಆಗಮಿಸಿದ್ದ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ. ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ, ಪುತ್ತಿ ಇಶಾ ಅಂಬಾನಿ ಜತೆಗಿದ್ದರು.

ಹೇಗಿದ್ದಿಯಪ್ಪಾ?

ಹೇಗಿದ್ದಿಯಪ್ಪಾ?

ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅಣ್ಣ ಮುಖೇಶ್ ಅಂಬಾನಿ ಮಗ ಆಕಾಶ್ ಅಂಬಾನಿಯ ಕಾಲರ್ ಸರಿ ಮಾಡಿದ್ದು ಹೀಗೆ.

ಬಾಲಿವುಡ್ ಬೆರಗು

ಬಾಲಿವುಡ್ ಬೆರಗು

ನಿರ್ಮಾಪಕಿ ಪೂಜಾ ಭಟ್, ನಟರಾದ ರಿಚಾ ಛಡ್ಡಾ, ಶ್ವೇತಾ ತ್ರಿಪಾಠಿ, ಸಂಜಯ್ ಮಿಶ್ರಾ ಸಹ ಕಾರ್ಯಕ್ರಮದ ರಂಗು ಹೆಚ್ಚಿಸಿದರು.

ಅಣ್ಣನಿಗೆ ಆಜ್ಞೆ!?

ಅಣ್ಣನಿಗೆ ಆಜ್ಞೆ!?

ಸಹೋದರರಾದ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಬಹಳ ದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಅನಿಲ್ ಅಂಬಾನಿ, ಮುಖೇಶ್ ಬಳಿ ಏನು ಹೇಳುತ್ತಿದ್ದಾರೆ? ನೀವೇ ಊಹಿಸಿಕೊಳ್ಳಿ

English summary
In an order to create participative, transparent and responsive government, Prime Minister Narendra Modi launched the much ambitious 'Digital India' programme on Wednesday, July 1. Here are some Photos of historical event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X