ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದ ತಾಜಾ ಸುದ್ದಿಗಳ ಚಿತ್ರ ಸಂಪುಟ

|
Google Oneindia Kannada News

ನವದೆಹಲಿ, ಜು. 22: ಮಂಗಳವಾರ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗಿದ್ದು ಬುಧವಾರ ಕಲಾಪ ಮುಂದುವರಿಯಿತು. ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಿತು.

ನವದೆಹಲಿಯಲ್ಲಿ ತಾರಕ್ಕೇರಿದ ಕಾಂಗ್ರೆಸ್ ಪ್ರತಿಭಟನೆ. ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು. ಸಹಜ ಸ್ಥಿತಿಗೆ ಮರಳುತ್ತಿರುವ ಜಲಪ್ರಳಯಕ್ಕೆ ತತ್ತರಿಸಿದ್ದ ವಾಣಿಜ್ಯ ನಗರಿ ಮುಂಬೈ...

ಗೆಳತಿ ಅನುಷ್ಕಾ ಶರ್ಮಾ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸಂಸತ್ ಅಧಿವೇಶನಕ್ಕೆ ಆಗಮಿಸಿದ ಮುಖಂಡರು, ಕಂಗನಾ ರಣಾವತ್ ದರ್ಶನ... ಬುಧವಾರ ದೇಶದ ವಿವಿಧ ಕಡೆ ನಡೆದ ಘಟನಾವಳಿಗಳ ಸಂಕ್ಷಿಪ್ತ ಸುದ್ದಿ ನಿಮ್ಮ ಮುಂದೆ ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ಅನುಷ್ಕಾ-ವಿರಾಟ್ ದರ್ಶನ

ಅನುಷ್ಕಾ-ವಿರಾಟ್ ದರ್ಶನ

ಗೆಳತಿ ಅನುಷ್ಕಾ ಶರ್ಮಾ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ವಿರಾಟ್ ಕೊಹ್ಲಿ. ಶ್ರೀಲಂಕಾ ವಿರುದ್ಧ ಪ್ರವಾಸಕ್ಕೆ ಗುರುವಾರ ಭಾರತ ತಂಡದ ಆಯ್ಕೆ ಆಗಲಿದೆ.

ಸಹಜ ಸ್ಥಿತಿಗೆ ವಾಣಿಜ್ಯ ನಗರಿ

ಸಹಜ ಸ್ಥಿತಿಗೆ ವಾಣಿಜ್ಯ ನಗರಿ

ಜಲಪ್ರಳಯಕ್ಕೆ ತತ್ತರಿಸಿದ್ದ ವಾಣಿಜ್ಯ ನಗರಿ ಮುಂಬೈ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ನಾಲ್ಕು ದಿನಗಳಿಂದ ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ರೈಲು ಸಂಚಾರ ಬಂದ್ ಮಾಡಲಾಗಿತ್ತು.

ಹೈದ್ರಾಬಾದ್ ಪೊಲೀಸರ ಭರ್ಜರಿ ಬೇಟೆ

ಹೈದ್ರಾಬಾದ್ ಪೊಲೀಸರ ಭರ್ಜರಿ ಬೇಟೆ

ಹೈದ್ರಾಬಾದ್ ನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅನೇಕರನ್ನು ಬಂಧಿಸಿ ನಗದು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಓ ಹೋ... ಹಬ್ಬದ ಸಂಭ್ರಮ

ಓ ಹೋ... ಹಬ್ಬದ ಸಂಭ್ರಮ

ಗೋಲ್ ರೀಂಗನ್ ಹಬ್ಬದ ಪ್ರಯುಕ್ತ ತೆಲೆ ಮೇಲೆ ಬಿಂದಿಗೆ ಹೊತ್ತು ಓಡಿದ ಮಹಿಳೆಯರು ಸೊಲ್ಲಾಪುರದಲ್ಲಿ ಕಣ್ಣಿಗೆ ಬಿದ್ದಿದ್ದು ಹೀಗೆ.

ಸಭೆ ಬಳಿಕ ಹೊರಬಂದ ಎನ್ ಡಿಎ ಪಡೆ

ಸಭೆ ಬಳಿಕ ಹೊರಬಂದ ಎನ್ ಡಿಎ ಪಡೆ

ಸಂಸದೀಯ ಮಂಡಳಿ ಸಭೆ ನಂತರ ಹೊರಬಂದ ಪ್ರಧಾನಿ ನರೇಂದ್ರ ಮೋದಿ. ಸಂಸತ್ ಕಾರ್ಯಕಲಾಪಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಕಂಗನಾ ಕಂಗಳಲ್ಲಿ ಏನಿದೆ?

ಕಂಗನಾ ಕಂಗಳಲ್ಲಿ ಏನಿದೆ?

ಬಾಲಿವುಡ್ ನಟಿ ಕಂಗನಾ ರಣಾವತ್ ನವದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ತನ್ನು ವೆಡ್ಸ್ ಮನ್ನು ರಿಟರ್ನ್ಸ್ ಚಿತ್ರದ ಯಶಸ್ಸಿನ ಮೂಲಕ ರಣಾವತ್ ಮತ್ತೆ ಬಾಲಿವುಡ್ ಟಾಪ್ ನಟಿಯರ ಪಟ್ಟ ಅಲಂಕರಿಸಿದ್ದಾರೆ.

ಭೂಕಂಪ ಪರಿಹಾರ ನಿಧಿ

ಭೂಕಂಪ ಪರಿಹಾರ ನಿಧಿ

ಪಂಜಾಬ್ ಕೇಸರಿ ಸಂಪಾದಕ ವಿಜಯ್ ಕುಮಾರ್ ಚೋಪ್ರಾ, ರಾಜ್ಯಸಭೆ ಸದಸ್ಯ ಅವಿನಾಶ್ ರಾಯ್ ಖನ್ನಾ ನೇಪಾಳ ಭೂಕಂಪ ಪರಿಹಾರ ಎಂದು ಸಂಗ್ರಹಿಸಿದ್ದ 2.4 ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಿದರು.

ಕಲಾಪಕ್ಕೆ ಆಗಮಿಸಿದ ರಾಹುಲ್

ಕಲಾಪಕ್ಕೆ ಆಗಮಿಸಿದ ರಾಹುಲ್

ಮಳೆಗಾಲದ ಸಂಸತ್ ಅಧಿವೇಶನಕ್ಕೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.

ಸಂಸದೀಯ ಮಂಡಳಿ ಸಭೆ

ಸಂಸದೀಯ ಮಂಡಳಿ ಸಭೆ

ನವದೆಹಲಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್. ಸುಷ್ಮಾ ಸ್ವರಾಜ್ ಕಲ್ಲಿದ್ದಲು ಹಗರಣ ಸಂಬಂಧ ಟ್ವೀಟ್ ಮಾಡಿ ವಿಪಕ್ಷಗಳ ಬಾಯಿಗೆ ಆಹಾರವಾಗಿದ್ದರು.

English summary
News in Pics: The monsoon session of Parliament began on a stormy note on Tuesday. Police arrests Youth Congress workers protesting against the Union government at Raisina Road in New Delhi, Here are some important News with Photos of the Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X