ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮಹಾವೀರ ಜಯಂತಿ, ಬಣ್ಣ ಹಚ್ಚಿದ ಬ್ರೇಟ್ ಲೀ

|
Google Oneindia Kannada News

ನವದೆಹಲಿ, ಏ. 2: ದೇಶಾದ್ಯಂತ ಮಹಾವೀರ ಜಯಂತಿ ಸಂಭ್ರಮ, ಸೋನಿಯಾ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವರ ವಿರುದ್ಧ ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಪ್ರತಿಭಟನೆ. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ, ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೇಟ್ ಲೀ... ಇವು ಗುರುವಾರ ದೇಶಾದ್ಯಂತ ನಡೆದ ಘಟನಾವಳಿಗಳ ಹೈಲೈಟ್ಸ್‌.

ಬೆಂಗಳೂರಿನಲ್ಲಿ ನಡೆದ ಮಹಾವೀರ ಜಯಂತಿಯಲ್ಲಿ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಜತೆ ಸಿಎಂ ಸಿದ್ದರಾಮಯ್ಯ ಕಾಣಿಸಿಕೊಂಡರು. ಯುದ್ಧ ಪೀಡಿತ ಯೆಮನ್ ನಿಂದ 350 ಕ್ಕೂ ಅಧಿಕ ಭಾರತೀಯರನ್ನು ಕರೆತರಲಾಯಿತು. ದೇಶಕ್ಕೆ ಸುರಕ್ಷಿತವಾಗಿ ಆಗಮಿಸಿದವರನ್ನು ಕುಟುಂಬದವರು ಬಿಗಿದಪ್ಪಿದರು. ಭಾರತೀಯ ರಿಸರ್ವ್ ಬ್ಯಾಂಕ್ ನ 80ನೇ ವರ್ಷಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ ಬಿಐ ಗವರ್ನರ್ ರಘುರಾಂ ರಾಜನ್ ಭಾಗವಹಿಸಿದ್ದರು. ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ಭಗವಾನ್ ಮಹಾವೀರ ಜಯಂತಿ

ಭಗವಾನ್ ಮಹಾವೀರ ಜಯಂತಿ

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಸಿಎಂ ಸಿದ್ದರಾಮಯ್ಯ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಭಾಗವಹಿಸಿದ್ದರು.

ಮೆರವಣಿಗೆ

ಮೆರವಣಿಗೆ

ಮಹಾವೀರ ಜಯಂತಿ ಪ್ರಯುಕ್ತ ಜೈಪುರದಲ್ಲಿ ಜೈನರಿಂದ ಭಗವಾನ್ ಮಹಾವೀರರ ಮೂರ್ತಿ ಮೆರವಣಿಗೆ. ಜೈನ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು.

ಜೈನ ಪರಂಪರೆ ಸಾರುವ ಉತ್ಸವ

ಜೈನ ಪರಂಪರೆ ಸಾರುವ ಉತ್ಸವ

ಜೈನ ಪರಂಪರೆಯ 24ನೇ ತೀರ್ಥಂಕರ ಭಗವಾನ್ ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಿರ್ಜಾಪುರದಲ್ಲಿ ಜೈನ ಸಮುದಾಯದಿಂದ ಮೆರವಣಿಗೆ. ಮೆರವಣಿಗೆ ನಡೆಸಿದ ನಂತರ ಸಮಾಜದ ಒಳಿತಿಗೆ ಪ್ರಾರ್ಥಿಸಲಾಯಿತು.

ಆರ್ ಬಿಐ ಗೆ 80 ನೇ ಹುಟ್ಟುಹಬ್ಬ

ಆರ್ ಬಿಐ ಗೆ 80 ನೇ ಹುಟ್ಟುಹಬ್ಬ

ಭಾರತೀಯ ರಿಸರ್ವ್ ಬ್ಯಾಂಕ್ ನ 80ನೇ ವರ್ಷಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ ಬಿಐ ಗವರ್ನರ್ ರಘುರಾಂ ರಾಜನ್ ಭಾಗವಹಿಸಿದ್ದರು. ಪ್ರಧಾನಿಗೆ ರಘುರಾಂ ರಾಜನ್ ನೆನಪಿನ ಕಾಣಿಕೆ ನೀಡಿದರು.

ಎಲ್ಲಿಗೆ ಪಯಣ?

ಎಲ್ಲಿಗೆ ಪಯಣ?

ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಜಮ್ಮು ಕಾಶ್ಮೀರದಲ್ಲಿ ಇನ್ನೂ ಸಂತ್ರಸ್ತರಿಗೆ ಸರಿಯಾದ ಆಶ್ರಯ ಸಿಕ್ಕಿಲ್ಲ. ಸುರಕ್ಷಿತ ಸ್ಥಳ ಹುಡುಕುತ್ತ ಕುಟುಂಬವೊಂದು ಗುರುವಾರ ಸಾಗುತ್ತಿದ್ದ ದೃಶ್ಯ.

ಬಣ್ಣ ಹಚ್ಚಿದ ಬ್ರೇಟ್ ಲೀ

ಬಣ್ಣ ಹಚ್ಚಿದ ಬ್ರೇಟ್ ಲೀ

'ಅನ್ ಇಂಡಿಯನ್' ಎಂಬ ಸಿನಿಮಾಕ್ಕೋಸ್ಕರ ಬಣ್ಣ ಹಚ್ಚಿದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೇಟ್ ಲೀ, ನಟಿ ತನಿಷ್ತಾ ಚಟರ್ಜಿ ಜತೆ ಮುಂಬೈನಲ್ಲಿ ಹೆಜ್ಜೆ ಹಾಕಿದರು.

ಮೋದಿ ಮಾತುಕತೆ

ಮೋದಿ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜತೆ ನವದೆಹಲಿಯಲ್ಲಿ ಅನೌಪಚಾರಿಕ ಮಾತುಕತೆ ನಡೆಸಿದರು. ವಿದೇಶಗಳೊಂದಿಗಿನ ಬಾಂಧವ್ಯ ವೃದ್ಧಿ, ರಕ್ಷಣಾ ಕಾರ್ಯಚಟುವಟಿಕೆ ಕುರಿತಾದ ಮಾತುಕತೆ ನಡೆಯಿತು ಎಂದು ಹೇಳಲಾಗಿದೆ.

ನಿಟ್ಟುಸಿರು ಬಿಟ್ಟರು

ನಿಟ್ಟುಸಿರು ಬಿಟ್ಟರು

ಭಾರತೀಯ ವಾಯುಸೇನೆಯ ನೆರವಿನಲ್ಲಿ ಯೆಮನ್ ನಲ್ಲಿ ರಕ್ಷಣೆಯಾದ ನಾಗರಿಕರು ವಿಮಾನ ಏರಿ ಕುಳಿತಾಗ ಸಾವಿನ ದವಡೆಯುಂದ ತಪ್ಪಿಸಿಕೊಂಡ ರೀತಿಯಲ್ಲಿ ಕಂಡುಬಂದರು. ಕೇಂದ್ರ ಸರ್ಕಾರ ಮೊದಲ ಹಂತದ ಕಾರ್ಯಾಚರಣೆ ನಡೆಸಿದ್ದು ಸಂಕಷ್ಟದಲಲ್ಲಿರುವವರ ನೆರವಿಗೆ ಸರ್ಕಾರ ಧಾವಿಸುತ್ತಿದೆ.

ಅಂತೂ ತಾಯ್ನಾಡಿಗೆ ಬಂದೆವು

ಅಂತೂ ತಾಯ್ನಾಡಿಗೆ ಬಂದೆವು

ಯುದ್ಧ ಪೀಡಿತ ಯೆಮನ್ ನಿಂದ 350 ಕ್ಕೂ ಅಧಿಕ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಯಿತು. ಕೊಚ್ಚಿಯ ವಿಮಾನ ನಿಲ್ದಾಣದ ಮೂಲಕ 168 ಜನರು ತಾಯ್ನಾಡಿಗೆ ಮರಳಿದರು. ಈ ವೇಳೆ ತನ್ನ ಮಗಳನ್ನು ಮುದ್ದಿಸಿದ ತಾಯಿ.

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನವದೆಹಲಿಯಲ್ಲಿ ಆಕ್ರೋಶ ಹೊರಹಾಕಿದ ಪರಿ. ಸಿಂಗ್ ಘಟನೆಯ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ

ಬಿಜೆಪಿ ಕಾರ್ಯಕಾರಿಣಿ

ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೂ ಮುನ್ನ ಮಾಜಿ ಪ್ರಧಾನಿ ವಾಜಪೇಯಿ ಅವರ ಭಾವಚಿತ್ರಕ್ಕೆ ನಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ. ದಕ್ಷಿಣ ಭಾರತದಲ್ಲಿ ಯಾವ ರೀತಿ ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಂಡಿದೆ.

ಶಿಲ್ಪಾ ಶೆಟ್ಟಿ ಪೂಜೆ

ಶಿಲ್ಪಾ ಶೆಟ್ಟಿ ಪೂಜೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮುಂಬೈನ ಮೂಕಾಂಬಿಕಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಶಿಲ್ಪಾ ಶೆಟ್ಟಿ ಪಾಲಕರು ಹಾಜರಿದ್ದರು. ಇನ್ನೇನು ಐಪಿಎಲ್-8 ಆರಂಭವಾಗಲಿದ್ದು ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ಥಾನ್ ರಾಯಲ್ಸ್ ಸಹ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ಅರುಣ್ ಜೇಟ್ಲಿ ಹಾಜರಿ

ಅರುಣ್ ಜೇಟ್ಲಿ ಹಾಜರಿ

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲವಾಗಿ ಕಟ್ಟುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಪಾಲ್ಗೊಂಡಿದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಹಾಜರಿದ್ದರು.

ದಾಲ್ಮಿಯಾಗೆ ದಾದಾನಿಂದ ಸನ್ಮಾನ

ದಾಲ್ಮಿಯಾಗೆ ದಾದಾನಿಂದ ಸನ್ಮಾನ

ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಗಮೋಹನ್ ದಾಲ್ಮಿಯ ಅವರಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಂಗಾಳ ಕ್ರಿಕಟ್ ಬೋರ್ಡ್ ಜಂಟಿ ಕಾರ್ಯದರ್ಶಿ ಸೌರವ್ ಗಂಗೂಲಿಯಿಂದ ನೆನಪಿನ ಕಾಣಿಕೆ. ಹಿಂದೆ ಅಧಿಕಾರ ಕಳೆದುಕೊಂಡಿದ್ದ ದಾಲ್ಮಿಯ ಇತ್ತೀಚೆಗಷ್ಟೇ ಬಿಸಿಸಿಐ ಚುಕ್ಕಾಣಿ ಹಿಡಿದಿದ್ದರು.

ಚಾಂಪಿಯನ್ ಆಗಿ ಬರುತ್ತೇವೆ

ಚಾಂಪಿಯನ್ ಆಗಿ ಬರುತ್ತೇವೆ

ಎಪ್ರಿಲ್ 5 ರಿಂದ ಆರಂಭವಾಗಲಿರುವ ಸುಲ್ತಾನ್ ಅಜ್ಲಾನ್ ಷಾ ಹಾಕಿ ಪಂದ್ಯಾವಳಿ ಆಡಲು ಮಲೆಷಿಯಾಕ್ಕೆ ತೆರಳಿದ ಭಾರತದ ಹಾಕಿ ತಂಡದ ಆಟಗಾರರು. ಏಪ್ರಿಲ್ 12 ರವರೆಗೆ ಪಂದ್ಯಾವಳಿ ನಡೆಯಲಿದ್ದು ಭಾರತ, ಆಸ್ಟ್ರೇಲಿಯಾ ಕೆನಡಾ, ಕೋರಿಯಾ, ನ್ಯೂಜಿಲೆಂಡ್ ಮತ್ತು ಮಲೆಷಿಯಾ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.

ಬಿಡುವಿಲ್ಲದ ಯೋಧರ ಕೆಲಸ

ಬಿಡುವಿಲ್ಲದ ಯೋಧರ ಕೆಲಸ

ನೆರೆ ಹಾವಳಿಗೆ ತುತ್ತಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ಷಣಾ ಕಾರ್ಯಗಳು ಬರದಿಂದ ಸಾಗಿದ್ದು ಸೈನಿಕರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

English summary
News in Pics: Union Home Minister Rajnath Singh,Karnataka Chief Minister Siddaramaiah and Union Minister Ananth Kumar during the Mahaveer Jayanti celebration at freedom park in Bengaluru on Thursday, RBI Governor, Raghuram Rajan presents a memento to Prime Minister, Narendra Modi during the 80th anniversary celebration of Reserve Bank of India.. and some other News in Photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X